Home> Technology
Advertisement

WhatsApp ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆಯೇ Google, ಭಾರಿ ಬದಲಾವಣೆಗೆ ಸಿದ್ಧತೆ

WhatsApp Latest News - ಗೂಗಲ್ ವಾಟ್ಸಾಪ್ ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ WhatsApp ಚಾಟ್ ಬ್ಯಾಕಪ್‌ಗಾಗಿ ಲಭ್ಯವಿರುವ ಉಚಿತ ಸಂಗ್ರಹಣೆಯನ್ನು Google ನಿಲ್ಲಿಸಬಹುದು ಎನ್ನಲಾಗಿದೆ. 

WhatsApp ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆಯೇ Google, ಭಾರಿ ಬದಲಾವಣೆಗೆ ಸಿದ್ಧತೆ

WhatsApp Latest Update - ಗೂಗಲ್ ವಾಟ್ಸಾಪ್ ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ WhatsApp ಚಾಟ್ ಬ್ಯಾಕಪ್‌ಗಾಗಿ ಲಭ್ಯವಿರುವ ಉಚಿತ ಸಂಗ್ರಹಣೆಯನ್ನು Google ನಿಲ್ಲಿಸಬಹುದು ಎನ್ನಲಾಗಿದೆ. WABetaInfo ಪ್ರಕಾರ, ಈ ದಿನಗಳಲ್ಲಿ WhatsApp ಚಾಟ್‌ಗಳನ್ನು ಸಂಗ್ರಹಿಸಲು ಲಭ್ಯವಿರುವ ಉಚಿತ ಅನಿಯಮಿತ ಯೋಜನೆಯನ್ನು ಸ್ಥಗಿತಗೊಳಿಸಲು Google ಯೋಜಿಸುತ್ತಿದೆ ಎನ್ನಲಾಗಿದೆ. ಅನಿಯಮಿತ ಯೋಜನೆಯನ್ನು ಸ್ಥಗಿತಗೊಳಿಸುವುದರ ಜೊತೆಗೆ, WhatsApp ಚಾಟ್ ಬ್ಯಾಕಪ್‌ಗಾಗಿ (Chat  Back-Up Storage) Google ಹೊಸ ಸೀಮಿತ ಯೋಜನೆಯನ್ನು ಸಹ ಪರಿಚಯಿಸಬಹುದು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ಈಗಲೂ ಕೂಡ ವಾಟ್ಸ್ ಆಪ್ ಬ್ಯಾಕ್ ಅಪ್ ಫ್ರೀಯಾಗಿದೆ
WABetaInfo ವರದಿಯಲ್ಲಿ Google ಡ್ರೈವ್‌ನಲ್ಲಿ WhatsApp ಬ್ಯಾಕಪ್ ಉಚಿತವಾಗಿರಲಿದೆ, ಆದರೆ ಇದಕ್ಕಾಗಿ ಬಳಕೆದಾರರು ಸೀಮಿತ ಯೋಜನೆಯನ್ನು ಹೊಂದಿರಲಿದ್ದಾರೆ ಎನ್ನಲಾಗಿದೆ. ಈ ವರದಿಯಲ್ಲಿ ಹೊಸ ಶೇಖರಣಾ ಯೋಜನೆ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. ಸೀಮಿತ ಯೋಜನೆಯ ಸಂಗ್ರಹಣೆಯು ಮುಗಿದ ನಂತರ, ಹೆಚ್ಚುವರಿ ಸಂಗ್ರಹಣೆಗಾಗಿ ಬಳಕೆದಾರರು ಸ್ವಲ್ಪ ಹಣವನ್ನು ಪಾವತಿಸಬೇಕಾಗಬಹುದು. ಆದರೆ  ಈ ಬಗ್ಗೆಯೂ ಕೂಡ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ.

ಇದನ್ನೂ ಓದಿ-ಫೆಬ್ರವರಿ 9 ರಂದು Samsung Galaxy S22 ಬಿಡುಗಡೆ.. ಅದ್ಭುತವಾಗಿದೆ ಇದರ ವಿಶೇಷತೆ!

ಮೆಸೇಜ್ ಬ್ಯಾಕಪ್ ಗಾಗಿ ಹೊಸ ವೈಶಿಷ್ಟ್ಯ ಬರುವ ಸಾಧ್ಯತೆ ಇದೆ
ಕೆಲವು ದಿನಗಳ ಹಿಂದೆ, ವಾಟ್ಸಾಪ್ ತನ್ನ ಬಳಕೆದಾರರಿಗೆ ಬ್ಯಾಕಪ್ ಗಾತ್ರವನ್ನು ನಿರ್ವಹಿಸಲು ಅವಕಾಶ ನೀಡಬಹುದು ಎಂದು WABetaInfo ವರದಿ ಹೇಳಿತ್ತು. WABetaInfo ಸಹ WhatsApp ನಲ್ಲಿ ಬ್ಯಾಕ್‌ಅಪ್‌ಗಳನ್ನು ನಿರ್ವಹಿಸಲು ಹೊಸ ವಿಭಾಗವನ್ನು ಪರಿಚಯಿಸಿದೆ, ಅದರ ಸಹಾಯದಿಂದ ಬಳಕೆದಾರರು ಬ್ಯಾಕಪ್ ಮಾಡಲು ಬಯಸದ ಮಾಧ್ಯಮ ಫೈಲ್‌ಗಳನ್ನು ಸ್ಕಿಪ್ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಈಗ Google, WhatsApp ಚಾಟ್ ಬ್ಯಾಕಪ್ ಮಿತಿಯನ್ನು ಸೀಮಿತಗೊಳಿಸಲು ಯೋಜಿಸುತ್ತಿದೆ, ಹೀಗಿರುವಾಗ, WhatsApp ನ ಮ್ಯಾನೇಜ್ ಚಾಟ್ ಬ್ಯಾಕಪ್ ವೈಶಿಷ್ಟ್ಯವು ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎಂದು ಸಾಬೀತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Flipkart Bumper Sale : ಕೇವಲ 4,500 ರೂಪಾಯಿಗೆ ಖರೀದಿಸಿ Samsung 32 ಇಂಚಿನ Smart TV

ಗೂಗಲ್ ಫೋಟೋಗಳಿಗಾಗಿ ಕಳೆದ ವರ್ಷ ಅನಿಯಮಿತ ಸ್ಟೋರೇಜ್ ಸ್ಥಗಿತಗೊಳಿಸಲಾಗಿದೆ
ಗೂಗಲ್ ಕಳೆದ ವರ್ಷ ಗೂಗಲ್ ಫೋಟೋಗಳನ್ನು (Google Photo) ಉಳಿಸಲು ಲಭ್ಯವಿರುವ ಅನಿಯಮಿತ ಸಂಗ್ರಹಣೆಯನ್ನು ನಿಲ್ಲಿಸಿತು. 2018 ರಲ್ಲಿ ಗೂಗಲ್ ಮತ್ತು ವಾಟ್ಸಾಪ್ ನಡುವೆ ಒಪ್ಪಂದವಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಇದರ ಪ್ರಕಾರ, Google ಡ್ರೈವ್‌ನಲ್ಲಿ ಸಂಗ್ರಹವಾಗಿರುವ WhatsApp ಬ್ಯಾಕಪ್ ಡ್ರೈವ್‌ನ ಸಂಗ್ರಹಣೆಯಿಂದ ಜಾಗವನ್ನು ತೆಗೆದುಕೊಳ್ಳುವುದಿಲ್ಲ. WhatsApp ಬ್ಯಾಕಪ್ ಅನ್ನು ಫೋನ್ ಸಂಖ್ಯೆ ಮತ್ತು ಅದನ್ನು ರಚಿಸಿದ Google ಖಾತೆಗೆ ಲಿಂಕ್ ಮಾಡಲಾಗಿದೆ. ಬ್ಯಾಕಪ್‌ಗಾಗಿ ಗೂಗಲ್ ಎಷ್ಟು ಸಮಯದವರೆಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡುತ್ತದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ-Digital ID: ಇನ್ಮುಂದೆ ಪ್ರತಿಯೊಬ್ಬ ನಾಗರಿಗರ ಬಳಿಯೂ ಇರಲಿದೆ ಸಿಂಗಲ್ Digital ID, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More