Home> Technology
Advertisement

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್- 3 ತಿಂಗಳ ಯೋಜನೆಯ ಬೆಲೆ ₹150ರಷ್ಟು ಇಳಿಕೆ

Jio Prepaid Plan Price Drop: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದ್ದು ಜಿಯೋ ಪ್ರಿಪೇಯ್ಡ್ ಯೋಜನೆಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್- 3 ತಿಂಗಳ ಯೋಜನೆಯ ಬೆಲೆ ₹150ರಷ್ಟು ಇಳಿಕೆ

ಜಿಯೋ ಪ್ರಿಪೇಯ್ಡ್ ಪ್ಲಾನ್ ಬೆಲೆ ಇಳಿಕೆ: ಟೆಲೆಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ರಿಲಯನ್ಸ್ ಜಿಯೋ ತನ್ನ ಜನಪ್ರಿಯ ಯೋಜನೆಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿರುವ ಜಿಯೋ ತನ್ನ ಕೆಲವು ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿದೆ. ಜಿಯೋ ರೀಚಾರ್ಜ್ ಮೇಲೆ ಈಗ ಅದ್ಭುತವಾದ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿಗಳು ಯಾವ ಯೋಜನೆಗಳ ಮೇಲೆ ಲಭ್ಯವಿದೆ ಮತ್ತು ಈ ಕೊಡುಗೆಯನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ... 

ಜಿಯೋ ₹ 666 ಪ್ರಿಪೇಯ್ಡ್ ಯೋಜನೆ:

ಜಿಯೋ ₹ 666 ಪ್ರಿಪೇಯ್ಡ್ ಯೋಜನೆಯು ಜಿಯೋದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ, ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ನೀವು ಈ ಯೋಜನೆಯನ್ನು ತೆಗೆದುಕೊಂಡರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಈ ರೀಚಾರ್ಜ್ ಯೋಜನೆಯ ಮೇಲೆ PayTM ನಲ್ಲಿ ಭರ್ಜರಿ ಆಫರ್ ಲಭ್ಯವಿದೆ.  ಅಂದರೆ ನೀವು PayTM ಮೂಲಕ ಈ ಪ್ಲಾನ್ ರಿಚಾರ್ಜ್ ಮಾಡಿದರೆ ಇದರ ಮೇಲೆ ಬಂಪರ್ ರಿಯಾಯಿತಿ ಲಭ್ಯವಾಗಲಿದೆ. 

ಇದನ್ನೂ ಓದಿ- ವರ್ಷದವರೆಗೆ Netflix, Amazon Prime, Disney+Hotstar ಫ್ರೀ ಚಂದಾದಾರಿಕೆಗಾಗಿ ಈ ಕೆಲಸ ಮಾಡಿ

ಈ ಯೋಜನೆಯ ರಿಯಾಯಿತಿ ಲಾಭವನ್ನು ಪಡೆಯಲು ನಿಮಗೆ ಪ್ರೋಮೋ ಕೋಡ್ ಅಗತ್ಯವಿದೆ. ಈ ಆಫರ್ ಯಾರ ಸಂಖ್ಯೆಯಲ್ಲಿ ಅನ್ವಯವಾಗುತ್ತದೆಯೋ ಅವರಿಗೆ ಪ್ರೋಮೋ ಕೋಡ್ ಗೋಚರಿಸುತ್ತದೆ. ನೀವು ಪ್ರೋಮೋ ಕೋಡ್ ಅನ್ನು ನೋಡದಿದ್ದರೆ, ನೀವು ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ, ಮೊದಲು ನೀವು ಪ್ರೋಮೋ ಕೋಡ್ ಪಟ್ಟಿಯನ್ನು ನೋಡಬೇಕು. ನೀವು ಇದಕ್ಕೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದು ನಂತರ ಮುಂದುವರೆಯಬೇಕು. ಒಂದೊಮ್ಮೆ ನಿಮ್ಮ ಸಂಖ್ಯೆಯಲ್ಲಿ ಪ್ರೋಮೋ ಕೋಡ್ ಲಭ್ಯವಿದ್ದರೆ ನೀವು ರೂ.150 ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ- Hacker ಗಳ ಅಪಾಯಕಾರಿ ದಾಳಿ! ಈ 13 ಆಪ್ ಗಳನ್ನು ನಿಮ್ಮ ಮೊಬೈಲ್ ನಿಂದ ತಕ್ಷಣವೇ ಡಿಲೀಟ್ ಮಾಡಿ, ಇಲ್ದಿದ್ರೆ ಬ್ಯಾಂಕ್ ಅಕೌಂಟ್ ಖಾಲಿ

ಜಿಯೋ ₹ 666 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು: 
ಜಿಯೋದ ₹ 666 ಪ್ರಿಪೇಯ್ಡ್ ಯೋಜನೆಯಲ್ಲಿ  84 ದಿನಗಳ ಮಾನ್ಯತೆ ಲಭ್ಯವಿದೆ. ಇದರಲ್ಲಿ ಬಳಕೆದಾರರು ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ. ಇದರಲ್ಲಿ ನೀವು ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More