Home> Technology
Advertisement

ಉಚಿತವಾಗಿ ಸಿಗುತ್ತಿದೆ 20GB ಹೈ-ಸ್ಪೀಡ್ ಡೇಟಾ! ಕೊಡುಗೆಯ ಲಾಭ ಪಡೆಯಲು ಇಂದೇ ಕೊನೆಯ ಅವಕಾಶ

Jio free 20 GB Data : ಈ ಕಂಪನಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ನೀಡುವ ಯೋಜನೆಗಳನ್ನು ನೀಡುತ್ತಾ ಬಂದಿದೆ. ಇದೀಗ ಜಿಯೋ ಬಳಕೆದಾರರು, ಉಚಿತ 20GB ಡೇಟಾವನ್ನು ಪಡೆಯಬಹುದು. ಈ ಕೊಡುಗೆಯ ಲಾಭವನ್ನು ಪಡೆಯಲು ಇಂದೇ ಕೊನೆಯ ದಿನವಾಗಿದೆ. 

ಉಚಿತವಾಗಿ ಸಿಗುತ್ತಿದೆ  20GB ಹೈ-ಸ್ಪೀಡ್ ಡೇಟಾ!  ಕೊಡುಗೆಯ ಲಾಭ ಪಡೆಯಲು ಇಂದೇ ಕೊನೆಯ ಅವಕಾಶ

Jio free 20 GB Data : ರಿಲಯನ್ಸ್ ಜಿಯೋ ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯು ದೇಶಾದ್ಯಂತ ಕೋಟ್ಯಂತರ ಚಂದಾದಾರರನ್ನು ಹೊಂದಿದೆ. ಜಿಯೋ ತನ್ನ ಕೈಗೆಟುಕುವ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಈ ಕಂಪನಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ನೀಡುವ ಯೋಜನೆಗಳನ್ನು ನೀಡುತ್ತಾ ಬಂದಿದೆ. ಇದೀಗ ಜಿಯೋ ಬಳಕೆದಾರರು, ಉಚಿತ 20GB ಡೇಟಾವನ್ನು ಪಡೆಯಬಹುದು. ಈ ಕೊಡುಗೆಯ ಲಾಭವನ್ನು ಪಡೆಯಲು ಇಂದೇ ಕೊನೆಯ ದಿನವಾಗಿದೆ. 

ಉಚಿತ 20GB ಹೈ-ಸ್ಪೀಡ್ ಡೇಟಾ :

20GB ಉಚಿತ ಡೇಟಾಕ್ಕಾಗಿ ಜಿಯೋನಿಂದ ಯಾವುದೇ ರೀಚಾರ್ಜ್ ಯೋಜನೆಯನ್ನು ಖರೀದಿಸಬೇಕಾಗಿಲ್ಲ ಅಥವಾ ಇದು ಯಾವುದೇ ಹೆಚ್ಚುವರಿ ಕೊಡುಗೆಯ ಭಾಗವೂ ಅಲ್ಲ. ಜಿಯೋದ ಈ  ಆಫರ್ ನ ಲಾಭವನ್ನು ಪಡೆಯಬೇಕಾದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋದ ಅಧಿಕೃತ ಅಪ್ಲಿಕೇಶನ್ ಮೈ ಜಿಯೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಬಳಸಬೇಕು. 

ಇದನ್ನೂ ಓದಿ : ವಾಟ್ಸ್‌ಆ್ಯಪ್‌ನಲ್ಲಿ ದೊಡ್ಡ ಬದಲಾವಣೆ! ಬಳಕೆದಾರರಿಗೆ ಸಿಗಲಿದೆ ಹೊಸ ಪವರ್, ಏನಿದು ನೂತನ ವೈಶಿಷ್ಟ್ಯ ?

ಇಂದೇ ಕೊನೆಯ ಅವಕಾಶ :
ಜಿಯೋ ಲಕ್ಕಿ ಡ್ರಾವನ್ನು ಆಯೋಜಿಸಿದೆ. ಇದರಲ್ಲಿ ಭಾಗವಹಿಸುವ ಮೂಲಕ ನೀವು 20GB ಇಂಟರ್ನೆಟ್ ಅನ್ನು ಉಚಿತವಾಗಿ ಪಡೆಯಬಹುದು. ಈ ಲಕ್ಕಿ ಡ್ರಾದಲ್ಲಿ ಇಂದಿನವರೆಗೆ ಅಂದರೆ 26 ಸೆಪ್ಟೆಂಬರ್ 2022 ರವರೆಗೆ ಭಾಗವಹಿಸಬಹುದು. ಈ ಲಕ್ಕಿ ಡ್ರಾದ  ಫಲಿತಾಂಶವನ್ನು ಇಂದೇ ಪ್ರಕಟಿಸಲಾಗುವುದು. ಲಕ್ಕಿ ಡ್ರಾದಲ್ಲಿ ಐದು ಜನರು 20GB ಡೇಟಾವನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ.  

ಇದರ ಪ್ರಯೋಜನವನ್ನು ಪಡೆದುಕೊಳ್ಳಿ : 
ಜಿಯೋದ ಈ ಉಚಿತ 20GB ಡೇಟಾವನ್ನು ಹೇಗೆ ಪಡೆಯಬೇಕಾದರೆ, ಮೊದಲು ಸ್ಮಾರ್ಟ್‌ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ತೆರೆಯಬೇಕು. ಹೋಮ್ ಸ್ಕ್ರೀನ್‌ನಲ್ಲಿ ಸ್ವಲ್ಪ ಸ್ಕ್ರಾಲ್ ಮಾಡಿದಾಗ, ಜಿಯೋ ಪ್ಲೇ ಅಂಡ್ ವಿನ್  ಕಾಣಿಸುತ್ತದೆ. ಇದರಲ್ಲಿನ ಮೊದಲ ಆಯ್ಕೆ 20GB ಡೇಟಾದೊಂದಿಗೆ ಲಕ್ಕಿ ಡ್ರಾ ಆಗಿದೆ.  ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ, ಪಾರ್ಟಿಸಿಪೇಟ್ ನೌ  ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ಸರಳವಾದ ಪ್ರಶ್ನೆಗೆ ಸರಿಯಾಗಿ ಉತ್ತರಿಸಬೇಕಾಗುತ್ತದೆ,. ನಂತರ ಈ ಲಕ್ಕಿ ಡ್ರಾಗೆ ನೋಂದಾವಣೆ ಮಾಡಲಾಗುತ್ತದೆ. 

ಇದನ್ನೂ ಓದಿ : ಕೇವಲ 500 ರೂ. ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನ್ನು iPhone 14 Pro Max ಗೆ ಬದಲಿಸಿ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More