Home> Technology
Advertisement

Flipkart Smartphone ಸೇಲ್ ನಲ್ಲಿ ಈ ಫೋನ್ ಗಳ ಮೇಲೆ ಭಾರೀ ಡಿಸ್ಕೌಂಟ್


ಈ  ಸೇಲ್ ನ ವಿಶೇಷತೆಯೆಂದರೆ ಇದರಲ್ಲಿ ವಸ್ತುಗಳು ರಿಯಾಯಿತಿ ದರದ ಮೇಲೆ ಸಿಗುವುದು ಮಾತ್ರವಲ್ಲ, ಬ್ಯಾಂಕ್ ಗಳು ಕೂಡಾ ಆಫರ್ ನೀಡುತ್ತಿವೆ. ಅಲ್ಲದೆ ಇಎಂಐ (EMI) ಆಫರ್ ಗಳ ಪ್ರಯೋಜನ ಕೂಡಾ ಪಡೆಯಬಹುದು. 

Flipkart Smartphone ಸೇಲ್ ನಲ್ಲಿ ಈ ಫೋನ್ ಗಳ ಮೇಲೆ  ಭಾರೀ ಡಿಸ್ಕೌಂಟ್

ನವದೆಹಲಿ: ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಕಾರ್ನೀವಲ್ ಸೇಲ್  ಏಪ್ರಿಲ್ 16 ರಿಂದ ಪ್ರಾರಂಭವಾಗಿದೆ. ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿನ ಸೇಲ್ ಏಪ್ರಿಲ್ 20 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ, ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ  ಬಂಪರ್ ರಿಯಾಯಿತಿ ಸಿಗುತ್ತಿದೆ.  ಸೇಲ್‌ನಲ್ಲಿ,  Realme 7, Poco M2 pro, Realme Narzo 30A, Oppo A12,iPhone 11, iPhone SE ಮತ್ತು  iPhone X R ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಬ್ಯಾಂಕ್ ಆಫರ್ ಮತ್ತು ಇಎಂಐ ಆಫರ್ ಪ್ರಯೋಜನಗಳು : 

ಈ  ಸೇಲ್ ನ ವಿಶೇಷತೆಯೆಂದರೆ ಇದರಲ್ಲಿ ವಸ್ತುಗಳು ರಿಯಾಯಿತಿ ದರದ ಮೇಲೆ ಸಿಗುವುದು ಮಾತ್ರವಲ್ಲ, ಬ್ಯಾಂಕ್ ಗಳು ಕೂಡಾ ಆಫರ್ ನೀಡುತ್ತಿವೆ. ಅಲ್ಲದೆ ಇಎಂಐ (EMI) ಆಫರ್ ಗಳ ಪ್ರಯೋಜನ ಕೂಡಾ ಪಡೆಯಬಹುದು. ಈ ಸೇಲ್ ನಲ್ಲಿ ನೋ ಕಾಸ್ಟ್ ಇಎಂಐಯ ( NO cost EMT) ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡಾ ಇರಲಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card), ಡೆಬಿಟ್ ಮತ್ತು ಇಎಂಐ ವಹಿವಾಟಿನಲ್ಲಿ ನೀವು 750 ರೂ.ಗಳವರೆಗೆ ಇನ್ಸ್ಟಂಟ್ ರಿಯಾಯಿತಿ ಪಡೆಯಬಹುದು.

ಇದನ್ನೂ ಓದಿ : Mobile Battery: ನಿಮ್ಮ ಮೊಬೈಲ್ ನಲ್ಲಿ ಚಾರ್ಜ್​ ನಿಲ್ಲುತ್ತಿಲ್ಲವೇ? ಅದಕ್ಕೆ ಈ ಆ್ಯಪ್ ಡೌನ್ ಲೋಡ್ ಮಾಡ್ಕೊಳ್ಳಿ!

ಕಾರ್ನಿವಲ್ ನಲ್ಲಿ ಐಫೋನ್‌ ಮೇಲಿನ ಆಫರ್ : 
iPhone 11 64 ಜಿಬಿ  ಮಾಡೆಲ್ ಈ  ಕಾರ್ನಿವಲ್ ಸೇಲ್‌ನಲ್ಲಿ 44,999 ರೂಗಳಿಗೆ ಸಿಗಲಿದೆ. 128 ಜಿಬಿ ಫೋನಿನ  ಬೆಲೆ 55,999 ರೂ. ಮತ್ತು iPhone SE (2020) ನ ಬೇಸ್ 64 ಜಿಬಿ ಮಾಡೆಲ್ ಅನ್ನು  29,999 ರೂಗಳಿಗೆ ಖರೀದಿಸಬಹುದು.

ನಾರ್ಜೊ ಸರಣಿಯಲ್ಲಿ, Realme Narzo 30A 3 ಜಿಬಿ RAM + 32 ಜಿಬಿ ಸ್ಟೋರೇಜ್ ವೇರಿಯೆಂಟ್ ಫೋನ್ ಅನ್ನು ಈ ಸೇಲ್ ನಲ್ಲಿ 8,499 ರೂಗಳಿಗೆ ಖರೀದಿಸಬಹುದು.  4 ಜಿಬಿ RAM + 64 ಜಿಬಿ ಸ್ಟೋರೇಜ್ ವೇರಿಯೆಂಟ್ ಫೋನ್  9,499 ರೂಗಳಿಗೆ ಸಿಗಲಿದೆ. 

ಇದನ್ನೂ ಓದಿ:  ಆನ್ ಲೈನ್ ವಂಚನೆಗೆ ಬಲಿಯಾಗಿದ್ದೀರಾ..! ಕೂಡಲೇ ಹೀಗೆ ಮಾಡಬಹುದು..!

Realme 7 ಮೇಲೆ ಸಿಗಲಿದೆ ಭಾರೀ ಡಿಸ್ಕೌಂಟ್ :
Realme 7 ನ  64 ಜಿಬಿ ಸ್ಟೋರೇಜ್ ವೇರಿಯೆಂಟ್ ಅನ್ನು 13,499 ರೂಗಳಿಗೆ ಖರೀದಿಸಬಹುದಾದರೆ, ಫೋನ್‌ನ 128 ಜಿಬಿ ಸ್ಟೋರೇಜ್ ವೇರಿಯೆಂಟ್ ನ ಬೆಲೆ 15,499 ರೂ. ಆಗಿರಲಿದೆ. 

ಇನ್ನು ಈ ಸೇಲ್‌ನಲ್ಲಿ, Poco M2 pro  ಫೋನ್‌ನ 64 ಜಿಬಿ ವೇರಿಯೆಂಟ್ , ನಿಮಗೆ 12,999 ರೂಗಳಿಗೆ ಸಿಗಲಿದೆ.  ನೀವು ಫೋನ್‌ನ 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ವೇರಿಯೆಂಟ್ ಫೋನ್ ಅನ್ನು 13,999 ರೂಗಳಿಗೆ ಖರೀದಿಸಬಹುದು. 

ಇದನ್ನೂ ಓದಿ: FIND MY iPHONE: ಕಳೆದುಹೋದ ಐಫೋನ್ ಅನ್ನು ಸುಲಭವಾಗಿ ಪತ್ತೆಹಚ್ಚಲು ಈ ಟ್ರಿಕ್ ಬಳಸಿ

Oppo ಮತ್ತು  Gionee Max ಮೇಲೆ ವಿಶೇಷ ಆಫರ್ : 
Oppo A12  ಫೋನ್‌ನ 4 ಜಿಬಿ + 64 ಜಿಬಿ ಸ್ಟೋರೇಜ್ ವೇರಿಯೆಂಟ್ ಅನ್ನು ನೀವು 8,990 ರೂಗಳಿಗೆ ಖರೀದಿಸಬಹುದು. ಇದರ 3 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ವೆಬ್‌ಸೈಟ್‌ನಲ್ಲಿ 7,990 ರೂ.ಗಳಿಗೆ ಸಿಗಲಿದೆ.

Xiaomi Mi 10T  ಬೆಲೆ ಈಗ 32,999 ರೂಪಾಯಿ. ಇದರಲ್ಲಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ವಹಿವಾಟಿನ ಮೂಲಕ ಖರೀದಿಸುವ ಗ್ರಾಹಕರಿಗೆ 750 ರೂ.ಫ್ಲಾಟ್ ರಿಯಾಯಿತಿ ಸಿಗಲಿದೆ.

Gionee Max  ಸ್ಮಾರ್ಟ್‌ಫೋನ್‌ನ 2 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ವೇರಿಯೆಂಟ್ ಗಳು ಇದರಲ್ಲಿ ಕೇವಲ  4,999 ರೂ.ಗಳಿಗೆ ಲಭ್ಯವಿರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More