Flipkart Big Saving Days Sale 2022: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale 2022), ವರ್ಷದ ಮೊದಲ ದೊಡ್ಡ ಮಾರಾಟ ಪ್ರಾರಂಭವಾಗಿದೆ, ಇದು ಜನವರಿ 22 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ಲಿಪ್ಕಾರ್ಟ್ ಮಾರಾಟದಲ್ಲಿ 5G ಸ್ಮಾರ್ಟ್ಫೋನ್ಗಳ ಝೇಂಕಾರವಿದೆ. ಅತ್ಯಂತ ದುಬಾರಿ 5G ಫೋನ್ಗಳನ್ನು ಸಹ ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು ಸಹ 5G ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ಬಜೆಟ್ ಕಡಿಮೆಯಿದ್ದರೆ, ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. ಏಕೆಂದರೆ ಇಲ್ಲಿ ಯಾರು ಬೇಕಾದರೂ ಸುಲಭವಾಗಿ ಕಡಿಮೆ ದರದಲ್ಲಿ 5ಜಿ ಸ್ಮಾರ್ಟ್ಫೋನ್ ಖರೀದಿಸಬಹುದಾಗಿದೆ. OPPO ನ 5G ಸ್ಮಾರ್ಟ್ಫೋನ್ನಲ್ಲಿ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಸೇಲ್ನಲ್ಲಿ ನೀವು OPPO A53s 5G ಅನ್ನು ಕೇವಲ 290 ರೂ.ಗಳಲ್ಲಿ ಖರೀದಿಸಬಹುದು.
OPPO A53s 5G ಕೊಡುಗೆಗಳು ಮತ್ತು ರಿಯಾಯಿತಿಗಳು (OPPO A53s 5G Offers And Discounts):
ಇದನ್ನೂ ಓದಿ- Banking loan: ನೀವೂ ಸಹ ಕ್ರೆಡಿಟ್ ಕಾರ್ಡ್ ಸಾಲದಿಂದ ಮುಕ್ತಿ ಪಡೆಯಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್
OPPO A53s 5G ಬ್ಯಾಂಕ್ ಆಫರ್ (OPPO A53s 5G Bank Offer):
ನೀವು ICICI ಬ್ಯಾಂಕ್ನ ಕ್ರೆಡಿಟ್ ಕಾರ್ಡ್ನೊಂದಿಗೆ (Credit Card) ಪಾವತಿಸಿದರೆ, ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಅಂದರೆ 750 ರೂಪಾಯಿಗಳ ತ್ವರಿತ ರಿಯಾಯಿತಿ ಪಡೆಯಬಹುದು. ಇದರ ನಂತರ OPPO A53s 5G ಬೆಲೆ 15,740 ರೂ. ಆಗಲಿದೆ.
ಇದನ್ನೂ ಓದಿ- Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್
OPPO A53s 5G ಎಕ್ಸ್ಚೇಂಜ್ ಆಫರ್ (OPPO A53s 5G Exchange Offer) :
OPPO A53s 5G ನಲ್ಲಿ 15,450 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ಫೋನ್ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 15,450 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿರುತ್ತದೆ. ನೀವು ಪೂರ್ಣ ಕೊಡುಗೆಯ ಲಾಭ ಪಡೆಯಲು ಸಾಧ್ಯವಾದರೆ ಫೋನ್ ಅನ್ನು ಕೇವಲ 290 ರೂ. ಗಳಿಗೆ ಖರೀದಿಸಬಹುದಾಗಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.