Home> Technology
Advertisement

Truecaller: ಟ್ರೂಕಾಲರ್‌ನಲ್ಲಿ ತಕ್ಷಣವೇ ಡಿಲೀಟ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ

Truecaller: ನಮಗೆ ಯಾರು ಕಾಲ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಟ್ರೂಕಾಲರ್ ತುಂಬಾ ಪ್ರಯೋಜನಕಾರಿ. ಆದರೆ, ವೈಯಕ್ತಿಕ ಮಾಹಿತಿಯ ಕಳುವಿನ ಆಪಾಯವನ್ನು ತಪ್ಪಿಸುವ ಸಲುವಾಗಿ ಹಲವರು ಟ್ರೂಕಾಲರ್‌ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ಬಯಸುತ್ತಾರೆ. 

Truecaller: ಟ್ರೂಕಾಲರ್‌ನಲ್ಲಿ ತಕ್ಷಣವೇ ಡಿಲೀಟ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ

Truecaller: ಜನಪ್ರಿಯ ಕರೆ ಬ್ಲಾಕರ್ ಮತ್ತು ಕರೆ ಐಡಿ ಅಪ್ಲಿಕೇಶನ್ ಎಂದರೆ ಟ್ರೂಕಾಲರ್. ಟ್ರೂಕಾಲರ್ ಆಪ್ ಬಳಕೆದಾರರಿಗೆ ಕರೆ ಮಾಡುವವರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದಕ್ಕಾಗಿ ಅಪ್ಲಿಕೇಶನ್ ಬಳಕೆದಾರರ ಒಪ್ಪಿಗೆಯೊಂದಿಗೆ ಅವರ ಹೆಸರು, ವಿಳಾಸ ಮತ್ತು ಪ್ರೊಫೈಲ್ ಚಿತ್ರದಂತಹ ಬಳಕೆದಾರರ ಬಗೆಗಿನ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. 

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ವೇಗವಾಗಿ ಹೆಚ್ಚುತ್ತಿವೆ, ಅಂತಹ ಪರಿಸ್ಥಿತಿಯಲ್ಲಿ, ನಮ್ಮಲ್ಲಿ ಕೆಲವರು ತಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಭಯದಿಂದಾಗಿ ಟ್ರೂಕಾಲರ್‌ ಅಪ್ಲಿಕೇಶನ್‌ನಿಂದ ಈ ಮಾಹಿತಿಗಳನ್ನು ಡಿಲೀಟ್ ಮಾಡಲು ಬಯಸುತ್ತಾರೆ.   ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಟ್ರೂಕಾಲರ್ ಅಪ್ಲಿಕೇಶನ್‌ನಿಂದ ವೈಯಕ್ತಿಕ ಮಾಹಿತಿಯನ್ನು ಡಿಲೀಟ್ ಮಾಡುವ ಸುಲಭ ಮಾರ್ಗ ಇಲ್ಲಿದೆ. 

ಇದನ್ನೂ ಓದಿ- 2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಇವು ! ವೈಶಿಷ್ಟ್ಯದಲ್ಲಿಯೂ ಟಾಪ್! ಬೆಲೆಯೂ ಅಗ್ಗ !

ನೀವು ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಟ್ರೂಕಾಲರ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸಬಹುದು. 
* ಇದಕ್ಕಾಗಿ ಮೊದಲು ಟ್ರೂಕಾಲರ್ ಅಪ್ಲಿಕೇಶನ್ ತೆರೆಯಿರಿ. 
* ಅಪ್ಲಿಕೇಶನ್ ಓಪೆನ್ ಆದ ಬಳಿಕ ಅದನ್ನು ಎಡಕ್ಕೆ ಸ್ಲೈಡ್ ಮಾಡಿ ಮತ್ತು "ಇನ್ನಷ್ಟು" ಎಂಬ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
* ಇಲ್ಲಿ ಕಾಣುವ "ಸೆಟ್ಟಿಂಗ್‌ಗಳು" ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ.
* ಬಳಿಕ "ಪ್ರೊಫೈಲ್" ಮೇಲೆ ಟ್ಯಾಪ್ ಮಾಡಿ.
* "ನಿಮ್ಮ ಸಂಖ್ಯೆಯನ್ನು ಅನ್‌ಲಿಸ್ಟ್ ಮಾಡಿ" ಎಂಬ ಆಯ್ಕೆಯನ್ನು ಆರಿಸಿ. 
* ನಿಗದಿತ ಜಾಗದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
* "ಅನ್ಲಿಸ್ಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ಇದನ್ನೂ ಓದಿ- ನಿಮ್ಮ ಫೋನ್ ನಲ್ಲಿ ಈ ಆಪ್ ಗಳಿದ್ದರೆ ಲೀಕ್ ಆಗುತ್ತದೆ ಎಲ್ಲಾ ಪರ್ಸನಲ್ ಫೋಟೋಗಳು !

ಲಭ್ಯವಿರುವ ಮಾಹಿತಿಗಳ ಪ್ರಕಾರ, ಟ್ರೂಕಾಲರ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಳಿಸಲು ಟ್ರೂಕಾಲರ್ 24 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದರೆ, ಟ್ರೂಕಾಲರ್ ಅಪ್ಲಿಕೇಶನ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸಿದ ಬಳಿಕ ನಿಮಗೆ ಬೇರೆಯವರ ವೈಯಕ್ತಿಕ ಮಾಹಿತಿಯನ್ನು ಶಾಹ್ ನೋಡಲು ಅಥವಾ ಹುಡುಕಲು ಸಾಧ್ಯವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More