Home> Technology
Advertisement

Daiwa ಹೊರ ತಂದಿದೆ 32 ಮತ್ತು 55 ಇಂಚಿನ Smart TV ! ಬೆಲೆ ಕೇವಲ 11 ಸಾವಿರ ರೂಪಾಯಿ!

Daiwa 32 ಮತ್ತು 55 ಇಂಚಿನ Smart TVಯನ್ನು ಬಿಡುಗಡೆ ಮಾಡಿದೆ. ಈ ಟಿವಿಯ  ಬೆಲೆ ಕೇವಲ 11 ಸಾವಿರ ರೂಪಾಯಿ. 
 

 Daiwa ಹೊರ ತಂದಿದೆ 32 ಮತ್ತು 55 ಇಂಚಿನ Smart TV ! ಬೆಲೆ ಕೇವಲ 11 ಸಾವಿರ ರೂಪಾಯಿ!

ಬೆಂಗಳೂರು : Daiwa ಹೊಸ HD ಮತ್ತು 4K (UHD) Google TV ಅನ್ನು ಬಿಡುಗಡೆ ಮಾಡಿದೆ. ಇದು 32 ರಿಂದ 55 ಇಂಚುಗಳ ಟಿವಿಯಾಗಿದೆ. ಕಂಪನಿಯು ಈ ಟಿವಿಗಳನ್ನು ಎಲ್ಇಡಿ ಮತ್ತು ಕ್ಯೂಎಲ್ಇಡಿ ಡಿಸ್ಪ್ಲೇಗಳೊಂದಿಗೆ ಮಾರಾಟ ಮಾಡುತ್ತಿದೆ.ಈ ಎಲ್ಲಾ ಟಿವಿಗಳು ಗೂಗಲ್ ಟಿವಿ 3.0 ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ.ಇದು ಡ್ಯುಯಲ್-ಬ್ಯಾಂಡ್ ವೈ-ಫೈ,2-ವೇ ಬ್ಲೂಟೂತ್ 5.0, ಗೂಗಲ್ ವಾಯ್ಸ್ ಅಸಿಸ್ಟೆಂಟ್ ಮತ್ತು ಇತರ ವೈಶಿಷ್ಟ್ಯಗಳನ್ನು ನೀಡುತ್ತದೆ. 

Daiwa ಗೂಗಲ್ ಟಿವಿ :
32 ಇಂಚಿನ HD LED Google TV (32G1H) ಬೆಲೆ 10,999 ರಿಂದ ಪ್ರಾರಂಭವಾಗುತ್ತದೆ.55 ಇಂಚಿನ 4K QLED Google TV (55G1Q) ಬೆಲೆ 34,990 ರೂಪಾಯಿ ಆಗಿದೆ. ಬ್ಯಾಂಕ್‌ಗಳು ಸಹ ಇವುಗಳಲ್ಲಿ ಕೆಲವು ಆಫರ್ ಗಳನ್ನು ನೀಡುತ್ತಿವೆ. Daiwa ನ 32 ಇಂಚಿನ ಹೊಸ ಟಿವಿ HD ಮಾದರಿಗಳನ್ನು ಹೊಂದಿದೆ.

ಇದನ್ನೂ ಓದಿ : iPhone 16 Seriesನಲ್ಲಿ ಸಿಗಲಿದೆಯಂತೆ ಈ 5 ಅದ್ಭುತ ವೈಶಿಷ್ಟ್ಯ..!

Daiwa ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ. ಇದು LED ಮತ್ತು QLED ಪರದೆಗಳನ್ನು ಹೊಂದಿದೆ.ಹೊಸ Daiwa Google TV ಸರಣಿಯಲ್ಲಿ, 10,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಅಲ್ಲದೆ 100,000 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳು ಮತ್ತು ಲೈವ್ ಟಿವಿಯನ್ನು ವೀಕ್ಷಿಸಬಹುದು ಎಂದು ಕಂಪನಿ ಹೇಳಿದೆ. ಈ ಟಿವಿಗಳು ಕಸ್ಟಮ್ ಟ್ವಿನ್ ಸ್ಪೀಕರ್‌ಗಳನ್ನು ಹೊಂದಿವೆ. ಇದು 20W (32-ಇಂಚಿನ ಟಿವಿಯಲ್ಲಿ) ಮತ್ತು 24W (43-ಇಂಚಿನ ಮತ್ತು 55-ಇಂಚಿನ ಟಿವಿಯಲ್ಲಿ) ಧ್ವನಿಯನ್ನು ಒದಗಿಸುತ್ತದೆ.

ಹೊಸ ಟಿವಿಯು Google ಸೌಂಡ್ ಅಸಿಸ್ಟೆಂಟ್ ಮತ್ತು ಇನ್ ಬಿಲ್ಟ್ ಗೂಗಲ್ ಕ್ರೊಮ್  ಕಾಸ್ಟ್ ಅನ್ನು ಹೊಂದಿದೆ. Google Play Store ನಿಂದ 14,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು Google ಫೋಟೋಗಳನ್ನು ವೀಕ್ಷಿಸಬಹುದು. ಈ Google TVಗಳು ಆಂಬಿಯೆಂಟ್ ಮೋಡ್ ಅನ್ನು ಸಹ ಹೊಂದಿವೆ.ಆದ್ದರಿಂದ ಟಿವಿಯನ್ನು ಆಫ್ ಮಾಡಿದಾಗ, Google ಫೋಟೋಗಳಲ್ಲಿನ ನಿಮ್ಮ ನೆನಪುಗಳು ಅದರಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೀತಿಯಾಗಿ ನೀವು ಉತ್ತಮ ಮತ್ತು ವಿಭಿನ್ನ ಅನುಭವವನ್ನು ಪಡೆಯುವುದು ಸಾಧ್ಯವಾಗುತ್ತದೆ.  ಈ ಟಿವಿಗಳಲ್ಲಿ ಆನ್-ಸ್ಕ್ರೀನ್ ಗೂಗಲ್ ಕೀಬೋರ್ಡ್ ಸಹ ಲಭ್ಯವಿದೆ. 

ಇದನ್ನೂ ಓದಿ : ಜಿಯೋ ಬೆವರಿಳಿಸುವ ಪ್ಲಾನ್ ಪರಿಚಯಿಸಿದ BSNL !ಇಷ್ಟು ಅಗ್ಗದ ರಿಚಾರ್ಜ್ ಪ್ಲಾನ್ ಬೇರೆಲ್ಲೂ ಇಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More