Home> Technology
Advertisement

ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ನ 49 ರೂ.ಗಳ ಪ್ರಿಪೇಯ್ಡ್ ಯೋಜನೆಯು ಏರ್‌ಟೆಲ್ ಮತ್ತು Vi ಬಳಕೆದಾರರನ್ನು ಕೂಡಾ ತನ್ನತ್ತ ಆಕರ್ಷಿಸುವ ಪ್ಲಾನ್ ಆಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಗ್ರಾಹಕರಿಗೆ  49 ರೂ.ಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತಿತ್ತು.
 

ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್‌

ಬೆಂಗಳೂರು : ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಅನೇಕ ಅಗ್ಗದ ಯೋಜನೆಗಳನ್ನು ಹೊರ ತಂದಿವೆ. ಆದರೆ ಈ ಪ್ಲಾನ್‌ಗಳ ಬೆಲೆ ಹೆಚ್ಚಳದ ನಂತರ, ಬಿಎಸ್‌ಎನ್‌ಎಲ್‌ ಹೊಸ ಯೋಜನೆಗಳ ಮೂಲಕ ಗ್ರಾಹಕರನ್ನು ಓಲೈಸಲು ಪ್ರಾರಂಭಿಸಿವೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗೆ 49 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯ ವಿಶೇಷತೆಯೆಂದರೆ ಇದು ಸಾಕಷ್ಟು ಕೈಗೆಟುಕುವ ಯೋಜನೆಯಾಗಿದ್ದು, ಮೊಬೈಲ್ ಸೇವೆಗಳನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸದ ಬಳಕೆದಾರರಿಗೆ ಸೂಕ್ತವಾಗಿದೆ.

ಈ ಯೋಜನೆಯು ಏರ್‌ಟೆಲ್ ಮತ್ತು ವಿಐ ಬಳಕೆದಾರರನ್ನು ಆಕರ್ಷಿಸಬಹುದು :
ಬಿಎಸ್‌ಎನ್‌ಎಲ್‌ ನ 49 ರೂ.ಗಳ ಪ್ರಿಪೇಯ್ಡ್ ಯೋಜನೆಯು ಏರ್‌ಟೆಲ್ ಮತ್ತು Vi ಬಳಕೆದಾರರನ್ನು ಕೂಡಾ ತನ್ನತ್ತ ಆಕರ್ಷಿಸುವ ಪ್ಲಾನ್ ಆಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ   ತಮ್ಮ ಗ್ರಾಹಕರಿಗೆ  49 ರೂ.ಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತಿತ್ತು.  ಆದರೆ ಸುಂಕವನ್ನು ಹೆಚ್ಚಿಸಿರುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ರೂ 49 ಪ್ರಿಪೇಯ್ಡ್ ಯೋಜನೆಗಳಲ್ಲಿದ್ದ ಬಳಕೆದಾರ, ಇಂಥ ಹಇತರ ಆಯ್ಕೆಗಳನ್ನು ಹುಡುಕುವಂತಾಗಿದೆ. 

ಇದನ್ನೂ ಓದಿ : Crocodile Tears: 'ಮೊಸಳೆ ಕಣ್ಣೀರು' ಎಂದರೇನು ನಿಮಗೆ ಗೊತ್ತಾ? ಈ ನಾಣ್ನುಡಿ ಎಲ್ಲಿಂದ ಬಂತು? ಇಲ್ಲಿದೆ ರೋಚಕ ಸಂಗತಿ

BSNL 49 ರೂ. ಪ್ರಿಪೇಯ್ಡ್ ಯೋಜನೆ :
BSNL ನ 49 ರೂ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು 100 ನಿಮಿಷಗಳ ಧ್ವನಿ ಕರೆ + 1GB ಮೊಬೈಲ್ ಡೇಟಾವನ್ನು ಪಡೆಯುತ್ತಾರೆ. ಯೋಜನೆಯ ಸೇವಾ ಮಾನ್ಯತೆ 20 ದಿನಗಳವರೆಗೆ ಇರುತ್ತದೆ. ಹೆಚ್ಚು ಕರೆ ಮಾಡುವ ಅಥವಾ ಡೇಟಾ ಅವಶ್ಯಕತೆಗಳನ್ನು ಹೊಂದಿಲ್ಲದಿದ್ದರೆ ಖಂಡಿತವಾಗಿಯೂ ಬಳಸಬಹುದಾದ ಯೋಜನೆ ಇದಾಗಿದೆ. 

BSNL 29 ರೂ. ಪ್ರಿಪೇಯ್ಡ್ ಯೋಜನೆ :
ಇನ್ನೂ ಅಗ್ಗದ ಪ್ರಿಪೇಯ್ಡ್  ಯೋಜನೆ ಬೇಕು ಎಂದಿದ್ದರೆ,  BSNLನ 29 ರೂ ಪ್ರಿಪೇಯ್ಡ್   ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಇದು ಅನಿಯಮಿತ ಧ್ವನಿ ಕರೆ ಮತ್ತು 1GB ಮೊಬೈಲ್ ಡೇಟಾ ಜೊತೆಗೆ ಐದು ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

ಇದನ್ನೂ ಓದಿ :  ಟೆಕ್ ದೈತ್ಯರಿಂದ ಸುದ್ದಿ ಪ್ರಕಾಶಕರಿಗೆ ನ್ಯಾಯಯುತ ಆದಾಯ ಒದಗಿಸಲು ಸರ್ಕಾರದ ಕ್ರಮ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More