Home> Technology
Advertisement

ಒಂದೇ ಚಾರ್ಜ್ ನಲ್ಲಿ 300ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಬಲ್ಲ ಅಗ್ಗದ ಬೆಲೆಯ ಮೂರು ಎಲೆಕ್ಟ್ರಿಕ್ ಸ್ಕೂಟರ್ ಗಳಿವು !

 200-300ಕಿ.ಮೀ ವ್ಯಾಪ್ತಿಯನ್ನು ನೀಡುವ ಅನೇಕ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿವೆ.  ಈ ಪೈಕಿ ಗರಿಷ್ಠ  ರೇಂಜ್ ನೀಡುವ ಮೂರು ಸ್ಕೂಟರ್‌ಗಳು ಯಾವುವು ನೋಡೋಣ. 

ಒಂದೇ ಚಾರ್ಜ್ ನಲ್ಲಿ 300ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಬಲ್ಲ ಅಗ್ಗದ ಬೆಲೆಯ ಮೂರು ಎಲೆಕ್ಟ್ರಿಕ್ ಸ್ಕೂಟರ್ ಗಳಿವು !

ಬೆಂಗಳೂರು : ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಾಗ, ಗ್ರಾಹಕರು ಅದರ ರೇಂಜ್ ಬಗ್ಗೆ ಭಯಪಡುತ್ತಾರೆ. ಇದೀಗ ಗ್ರಾಹಕರ ಅಗತ್ಯವನ್ನು ಮನಗಂಡ ಕಂಪನಿಗಳು ಲಾಂಗ್ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸುವತ್ತ ಗಮನ ಹರಿಸುತ್ತಿವೆ. ಈಗ 200-300ಕಿ.ಮೀ ವ್ಯಾಪ್ತಿಯನ್ನು ನೀಡುವ ಅನೇಕ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ಗರಿಷ್ಠ  ರೇಂಜ್ ನೀಡುವ ಮೂರು ಸ್ಕೂಟರ್‌ಗಳು ಯಾವುವು ನೋಡೋಣ. 

ಓಲಾ ಎಸ್ 1 ಪ್ರೊ :   

ಇದು ಓಲಾದ ಜನಪ್ರಿಯ ಮತ್ತು ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್‌ನಲ್ಲಿ 181KM ವರೆಗಿನ ರೇಂಜ್ ನೀಡುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 116 ಕಿಮೀ. ಸ್ಕೂಟರ್‌ನ ಬೆಲೆ 1,39,999 ರೂ.  ಈ ಸ್ಕೂಟರ್ ಒಟ್ಟು 14 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 

ಇದನ್ನೂ ಓದಿ : Toll Tax Collection with Number Plate: ಇನ್ಮುಂದೆ FasTag ಅಗತ್ಯವಿಲ್ಲ: ಈ ರೀತಿ ಮಾಡಿದ್ರೆ ಖಾತೆಯಿಂದ ಕಡಿತವಾಗುತ್ತೆ ಟೋಲ್ ಟ್ಯಾಕ್ಸ್

ಸಿಂಪಲ್ ಒನ್  :
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 236 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ.  ಸಿಂಪಲ್ ಒನ್ ಸ್ಕೂಟರ್ ಬೆಲೆ 1,49,999 ರೂ. ಇದು ಎಲ್ಲಾ-LED ಲೈಟಿಂಗ್, 30-ಲೀಟರ್  ಸ್ಟೋರೇಜ್, ಸ್ವಾಪೆಬಲ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಮತ್ತು 7-ಇಂಚಿನ  ಟಿಎಫ್ ಟಿ  ಇನ್ಸ್ಟ್ರುಮೆಂಟ್  ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಗ್ರಾವ್ಟನ್ ಕ್ವಾಂಟಾ :
ಕನ್ಯಾಕುಮಾರಿಯಿಂದ ಖರ್ದುಂಗ್ ಲಾವರೆಗೆ ಪ್ರಯಾಣ ಬೆಳೆಸಿದ ದೇಶದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಇದಾಗಿದೆ. ಇದು 3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 150ಕಿ.ಮೀ ವರೆಗೆ ಚಲಿಸುತ್ತದೆ. ಇದು ಎರಡು ಬ್ಯಾಟರಿಗಳನ್ನು ಒಟ್ಟಿಗೆ ಇರಿಸುವ ಸೌಲಭ್ಯವನ್ನು ಹೊಂದಿದೆ. ಎರಡೂ ಬ್ಯಾಟರಿಗಳನ್ನು ಬಳಸಿಕೊಂಡು  320 ಕಿ.ಮೀ ವರೆಗಿನ ದೂರವನ್ನು ಕ್ರಮಿಸಬಹುದು. ಕಂಪನಿಯ ವೆಬ್ ಸೈಟ್  ಪ್ರಕಾರ ಈ ಸ್ಕೂಟರ್ ಬೆಲೆ 1,15,000 ರೂಪಾಯಿ.  

ಇದನ್ನೂ ಓದಿ 2022ರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ 5 ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿವು .!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More