'ಪೋರ್ಟಬಲ್' ಫ್ಯಾನ್- ಮಿನಿ ಎಸಿ: ದೇಶದಲ್ಲಿ ಮುಂಗಾರು ಆಗಮನವಾಗಿದ್ದರೂ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ದಿನೇ ದಿನೇ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ಕೇವಲ ಫ್ಯಾನ್ ಅನ್ನು ಬಳಸಿ ತಂಪಾದ ಹವಾ ಪಡೆಯುವುದು ಕಷ್ಟಸಾಧ್ಯ. ಆದರೆ, ಈ ಹಣದುಬ್ಬರದ ಜಗತ್ತಿನಲ್ಲಿ ಎಲ್ಲರಿಗೂ ಎಸಿ, ಕೂಲರ್ ಕೊಳ್ಳುವುದು ಸುಲಭದ ಮಾತಲ್ಲ. ಆದರೆ, 'ಪೋರ್ಟಬಲ್' ಫ್ಯಾನ್- ಮಿನಿ ಎಸಿ ನಿಮಗೆ ಪರಿಹಾರ ನೀಡಬಹುದು. ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿರುವ ಈ ಪೋರ್ಟಬಲ್ ಏರ್ ಕಂಡಿಷನರ್ ಅನ್ನು ನೀವು ಸುಲಭವಾಗಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು ಎಂಬುದು ಇದರ ವಿಶೇಷತೆ.
'ಪೋರ್ಟಬಲ್' ಫ್ಯಾನ್ -ಮಿನಿ ಎಸಿ ವೈಶಿಷ್ಟ್ಯಗಳು:
ಇದು ಹಲವು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. 2200mAh ಬ್ಯಾಟರಿಯೊಂದಿಗೆ ಬರುವ 'ಪೋರ್ಟಬಲ್' ಫ್ಯಾನ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದನ ನಂತರ ಸತತ ಗಂಟೆಗಳ ಕಾಲ ಬಳಸಬಹುದು. ಮೂರು ಸ್ಪೀಡ್ ಮೋಡ್ಗಳನ್ನು ಹೊಂದಿರುವ ಈ ಫ್ಯಾನ್ ತುಂಬಾ ಚಿಕ್ಕದಾಗಿದ್ದು, ಎಲ್ಇಡಿ ದೀಪಗಲೊಂದಿಗೆ ಬರುತ್ತದೆ. ಇದನ್ನು ಯುಎಸ್ಬಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು ಮತ್ತು ನಿಮಗೆ ಅದರಲ್ಲಿ ಒಂದು ವರ್ಷದ ವಾರಂಟಿಯನ್ನು ಸಹ ನೀಡಲಾಗುತ್ತಿದೆ.
ಇದನ್ನೂ ಓದಿ- ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ಗಳು ಲೋಕೇಶನ್ ಟ್ರ್ಯಾಕ್ ಮಾಡುವುದನ್ನು ಈ ರೀತಿ ನಿಲ್ಲಿಸಿ
ಲಭ್ಯತೆ:
ಈ 'ಪೋರ್ಟಬಲ್' ಫ್ಯಾನ್ ಅನ್ನು ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಅಮೆಜಾನ್ನಿಂದ ಖರೀದಿಸಬಹುದು. ಮೊದಲೇ ತಿಳಿಸಿದಂತೆ ನೀವು ಈ 'ಪೋರ್ಟಬಲ್' ಫ್ಯಾನ್ ಅನ್ನು ನೀವು ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಬಹುದು. ನೀವು ಎಲ್ಲಿ ಬೇಕಾದರೂ ಬಳಸಬಹುದು.
ಇದನ್ನೂ ಓದಿ- ಬಿಸಿಲಲ್ಲಿ ಚಾರ್ಜ್ ಆಗುವ ಸ್ಮಾರ್ಟ್ ವಾಚ್ ಬಿಡುಗಡೆ, ಇದರಂತಹ ವೈಶಿಷ್ಟ್ಯ ಬೇರೆ ವಾಚ್ ನಲ್ಲಿಲ್ಲ
ಬೆಲೆ:
ನೀವು ಈ ಪೋರ್ಟಬಲ್ ರೀಚಾರ್ಜ್ ಮಾಡಬಹುದಾದ ಎಲ್ಇಡಿ ಫ್ಯಾನ್ ಅನ್ನು ಕೇವಲ 200 ರೂ.ಗಳಿಗೆ ಖರೀದಿಸಬಹುದು. ವಾಸ್ತವವಾಗಿ, ಈ ಪೋರ್ಟಬಲ್ ರೀಚಾರ್ಜ್ ಮಾಡಬಹುದಾದ ಫ್ಯಾನ್ನ ಬೆಲೆ 499 ರೂಪಾಯಿಗಳು. ಆದರೆ ನೀವು ಇದನ್ನು ಅಮೆಜಾನ್ನಿಂದ 60% ರಿಯಾಯಿತಿಯ ನಂತರ 199ರೂ.ಗಳಿಗೆ ಮನೆಗೆ ತರಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.