Home> Technology
Advertisement

ಕೇವಲ 3 ಲಕ್ಷ ರೂಪಾಯಿಗೆ ಖರೀದಿಸಿ ಮಾರುತಿಯ ಹೊಸ ಸಿಎನ್‌ಜಿ ಕಾರು

ಇಂದು ನಾವು ನಿಮಗೆ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಕಾರಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದನ್ನು ಕೇವಲ 3 ಲಕ್ಷ ರೂಪಾಯಿ ಪಾವತಿಸಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ನಿಮಗೆ ಸಾಕಷ್ಟು ಮೈಲೇಜ್ ಕೂಡಾ ನೀಡುತ್ತದೆ. 

 ಕೇವಲ 3 ಲಕ್ಷ ರೂಪಾಯಿಗೆ ಖರೀದಿಸಿ ಮಾರುತಿಯ ಹೊಸ ಸಿಎನ್‌ಜಿ  ಕಾರು

ಬೆಂಗಳೂರು : ಮಾರುತಿ ಸುಜುಕಿ ದೇಶದಲ್ಲೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ಮಾರುತಿ ಸುಜುಕಿಯು ಗರಿಷ್ಠ ಸಂಖ್ಯೆಯ CNG ಕಾರುಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತದೆ. ಆಲ್ಟೊದಿಂದ ಬಲೆನೊ ಮತ್ತು ಎರ್ಟಿಗಾವರೆಗಿನ ಹೆಚ್ಚಿನ ಕಾರುಗಳಲ್ಲಿ ಕಂಪನಿಯು ಸಿಎನ್‌ಜಿ ಸೌಲಭ್ಯವನ್ನು ನೀಡುತ್ತಿದೆ. ಇಂದು ನಾವು ನಿಮಗೆ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಕಾರಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದನ್ನು ಕೇವಲ 3 ಲಕ್ಷ ರೂಪಾಯಿ ಪಾವತಿಸಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ನಿಮಗೆ ಸಾಕಷ್ಟು ಮೈಲೇಜ್ ಕೂಡಾ ನೀಡುತ್ತದೆ. 

ಎಂಜಿನ್ ಮತ್ತು ಮೈಲೇಜ್ : 
ಮಾರುತಿ ಸುಜುಕಿ ಸ್ವಿಫ್ಟ್‌ಗೆ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ (90PS/113Nm) ನೀಡಲಾಗಿದೆ. ಇದರೊಂದಿಗೆ, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMTಯ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. 5-ಸ್ಪೀಡ್ ಮ್ಯಾನುವಲ್ ಆಯ್ಕೆಯೊಂದಿಗೆ ಮಾತ್ರ ಈ ಕಾರು ಲಭ್ಯವಿದೆ. CNG ಜೊತೆಗೆ ಇದರ ಮೈಲೇಜ್ 30.90km/kg ವರೆಗೆ ಇರುತ್ತದೆ. 

ಇದನ್ನೂ ಓದಿ : Nanoಗಿಂತಲೂ ಪುಟ್ಟ ಕಾರು ಇದು! ವಿನ್ಯಾಸ ನೋಡಿ ಮನಸೋತ ಗ್ರಾಹಕರು

ಕಾರಿನ ಬೆಲೆ ಎಷ್ಟು ? : 
ಮಾರುತಿ ಸುಜುಕಿ ಸ್ವಿಫ್ಟ್ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು. ಇದರ ಬೆಲೆ 6 ಲಕ್ಷದಿಂದ ಪ್ರಾರಂಭವಾಗಿ 8.98 ಲಕ್ಷದವರೆಗೆ ಇರುತ್ತದೆ. ಇದು LXi, VXi, ZXi ಮತ್ತು ZXi+ ರೂಪಾಂತರಗಳಲ್ಲಿ ಲಭ್ಯವಿದೆ. ಕಂಪನಿಯು CNGಯ VXi ಮತ್ತು ZXi ರೂಪಾಂತರಗಳನ್ನು ಸಹ ಮಾರಾಟ ಮಾಡುತ್ತದೆ. VXI CNG ಬೆಲೆ7.80 ಲಕ್ಷ (ಎಕ್ಸ್ ಶೋ ರೂಂ). ನೀವು ಈ ಕಾರನ್ನು ಲೋನ್‌ ಮೂಲಕ ಖರೀದಿಸುವುದಾದರೆ 3 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.   ಉಳಿದ ಮೊತ್ತವನ್ನು  EMI ಮೂಲಕ ಪಾವತಿಸುತ್ತಾ ಬರಬಹುದು.  

3 ಲಕ್ಷಕ್ಕೆ ಕಾರನ್ನು ಮನೆಗೆ ತನ್ನಿ :
ಕಾರಿನ VXI CNG ರೂಪಾಂತರ ಕೊಳ್ಳುವುದಾದರೆ 8.83 ಲಕ್ಷ ರೂ. ಪಾವತಿಸಬೇಕಾಗುತ್ತದೆ. ನೀವು ಈ  ಕಾರನನ್ನು ಲೋನ್ ಮೇಲೆ  ಖರೀದಿಸುವುದಾದರೆ ನಿಮ್ಮ ಆಯ್ಕೆಯ ಪ್ರಕಾರ ಡೌನ್ ಪೇಮೆಂಟ್ ಮಾಡಬಹುದು. ವಿವಿಧ ಬ್ಯಾಂಕ್‌ಗಳಲ್ಲಿ ಬಡ್ಡಿದರವು ವಿಭಿನ್ನವಾಗಿರುತ್ತದೆ.  ಸಾಲದ ಅವಧಿಯನ್ನು 1 ರಿಂದ 7 ವರ್ಷಗಳವರೆಗೆ ಆಯ್ಕೆ ಮಾಡಬಹುದು. 

ಇದನ್ನೂ ಓದಿ : 40KM ವರೆಗೆ ಮೈಲೇಜ್ ನೀಡಬಲ್ಲ ಮಾರುತಿಯ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿವು

ಉದಾಹರಣೆಗೆ, 3 ಲಕ್ಷದ ಮುಂಗಡ ಪಾವತಿ ನೀಡಿ 9.8 ಶೇಕಡಾ ಬಡ್ಡಿದರದಂತೆ 5 ವರ್ಷಗಳ ಸಾಲದ ಅವಧಿಯನ್ನು ತೆಗೆದುಕೊಂಡರೆ ಪ್ರತಿ ತಿಂಗಳು 12,331 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More