Home> Technology
Advertisement

iPhone 12 ನಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ !

Apple iPhone 12: ಆಪಲ್ ಐಫೋನ್ 12 (Apple iPhone 12) ಅನ್ನು 41 ಸಾವಿರದ ಭಾರೀ ರಿಯಾಯಿತಿಯಲ್ಲಿ ಖರೀದಿಸಲು ಸುವರ್ಣಾವಕಾಶವಿದೆ. ಇದು ಈ ಫೋನ್ ಮೇಲೆ ಇದುವರೆಗೆ ಲಭ್ಯವಿರುವ ಅತಿದೊಡ್ಡ ರಿಯಾಯಿತಿ ಆಗಿದೆ. ಈ ಹಿಂದೆ ಫೋನ್ ಮೇಲೆ ಇಷ್ಟೊಂದು ರಿಯಾಯಿತಿ ಸಿಕ್ಕಿಲ್ಲ. ಇಷ್ಟು ಅಗ್ಗವಾಗಿ ಫೋನ್ ಖರೀದಿಸುವುದು ಹೇಗೆ ಎಂದು ತಿಳಿಯೋಣ.

iPhone 12 ನಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ !

Apple iPhone 12:  ಆಪಲ್ ಐಫೋನ್ 12 (Apple iPhone 12) ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿದೊಡ್ಡ ಪ್ರೀಮಿಯಂ ಸೆಲ್ ಫೋನ್‌ಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ 2020 ರಲ್ಲಿ 79,900 ರೂ.ಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಯಿತು, ಆದರೆ ಕಳೆದ ವರ್ಷ ಐಫೋನ್ 13 (iPhone 13) ಬಿಡುಗಡೆಯಾದ ನಂತರ, ಆಪಲ್ ಇದರ ಬೆಲೆಯನ್ನು 65,900 ರೂ.ಗಳಿಗೆ ಇಳಿಸಿತು. ಆದಾಗ್ಯೂ, ನೀವು iPhone 12 ಅನ್ನು ಕೇವಲ 24,900 ರೂ. ಗೆ ಖರೀದಿಸಲು ಒಂದು ಒಳ್ಳೆಯ ಅವಕಾಶವಿದೆ. 

Apple iPhone 12 ಅನ್ನು 41 ಸಾವಿರದ ಭಾರೀ ರಿಯಾಯಿತಿಯಲ್ಲಿ ಖರೀದಿಸಲು ಸುವರ್ಣಾವಕಾಶ!

ಭಾರತದಲ್ಲಿ Apple ನ ಪ್ರೀಮಿಯಂ ಮರುಮಾರಾಟಗಾರರಲ್ಲಿ ಒಂದಾದ Aptronix, ಆಪಲ್ ಐಫೋನ್ 12 (Apple iPhone 12) ಅನ್ನು ರೂ. 24,900 ಗೆ ಮಾರಾಟ ಮಾಡುತ್ತಿದೆ. ಇದಕ್ಕೆ ಷರತ್ತುಗಳು ಸಹ ಸರಳವಾಗಿದೆ... ಗಮನಾರ್ಹವಾದ ಕಡಿತ, ಗಮನಾರ್ಹವಾದ ಕ್ಯಾಶ್‌ಬ್ಯಾಕ್ ಮತ್ತು ಪ್ಲಾಟ್‌ ಡಿಸ್ಕೌಂಟ್ ಕೊಡುಗೆಯು iPhone 12 ನ ಬೆಲೆಯನ್ನು 65,900 ರಿಂದ 24,900 ರೂ.ಗಳಿಗೆ ಇಳಿಸುತ್ತದೆ. ಈ ಎಲ್ಲಾ ಕೊಡುಗೆಗಳ ಲಾಭ ಪಡೆಯುವುದರಿಂದ ಒಟ್ಟು 41,000 ರೂ. ಉಳಿಸಬಹುದು.

ಇದನ್ನೂ ಓದಿ- ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಶಾಕ್!: ಎಲ್ಲಾ ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ

iPhone 12 ನಲ್ಲಿ ದೊಡ್ಡ ರಿಯಾಯಿತಿ:
ಮೊದಲನೆಯದಾಗಿ, iPhone 12 ನಲ್ಲಿ 9,900 ರೂಪಾಯಿಗಳ ಫ್ಲಾಟ್ ರಿಯಾಯಿತಿ ಇದೆ, ಇದನ್ನು ನೀವು ಯಾವುದೇ ಕಾರ್ಡ್ ಅಥವಾ ರಿಯಾಯಿತಿ ವೋಚರ್ ಇಲ್ಲದೆ ಪಡೆಯಬಹುದು. ರಿಯಾಯಿತಿಯ ನಂತರ, iPhone 12 64GB ಬೆಲೆ 56,000 ರೂ. ಆಗಲಿದೆ. ನಂತರ ನೀವು ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಅಥವಾ ಎಸ್‌ಬಿಐನಿಂದ ಕ್ರೆಡಿಟ್ ಕಾರ್ಡ್ (Credit Card) ಬಳಸಿ ಪಾವತಿಸುವುದರೊಂದಿಗೆ  ರೂ.5,000 ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್ ಅನ್ನು ರಿಯಾಯಿತಿ ಎಂದು ಪರಿಗಣಿಸಿದರೆ, ನಂತರ iPhone 12 ಬೆಲೆ 51,000 ರೂ.ಗಳಿಗೆ ಇಳಿಯಲಿದೆ. ಉತ್ತಮ ವ್ಯವಹಾರವನ್ನು ಪಡೆಯಲು ಮುಂದಿನ ಹಂತವೆಂದರೆ ನಿಮ್ಮ ಹಳೆಯ ಐಫೋನ್‌ನ ವಿನಿಮಯ ಕೊಡುಗೆ ಬಳಸುವುದು.

ವಿನಿಮಯ ಕೊಡುಗೆಯಲ್ಲಿ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ:
ನೀವು iPhone 11 ನಲ್ಲಿ ವಿನಿಮಯ ಕೊಡುಗೆಯ ಲಾಭವನ್ನು ಪಡೆದರೆ ಅದು ನಿಮಗೆ ಗರಿಷ್ಠ 23,100 ರೂ.ವರೆಗೆ ರಿಯಾಯಿತಿ ನೀಡುತ್ತದೆ ಎಂದು Aptronix ಹೇಳಿಕೊಂಡಿದೆ. ಆದಾಗ್ಯೂ, ಒಂದು ಷರತ್ತು ಇದೆ. Aptronix ಪ್ರಕಾರ, ನಿಮ್ಮ iPhone 11 ಉತ್ತಮ ಕೆಲಸದ ಸ್ಥಿತಿಯಲ್ಲಿರಬೇಕು, ಆದರೂ ವಿನಿಮಯ ಮೌಲ್ಯಕ್ಕೆ ಯಾವ ನಿಯತಾಂಕಗಳನ್ನು ಬಳಸಲಾಗುವುದು ಎಂಬುದನ್ನು ಅದು ನಿರ್ದಿಷ್ಟಪಡಿಸಿಲ್ಲ. ಹೇಗಾದರೂ, ಪ್ರಮುಖ ವಿಷಯವೆಂದರೆ ನಿಮ್ಮ iPhone 11 ಉತ್ತಮ ಸ್ಥಿತಿಯಲ್ಲಿದ್ದರೆ, ನೀವು 23,100 ರೂಪಾಯಿಗಳ ಮರುಪಾವತಿಗೆ ಅರ್ಹರಾಗಿದ್ದೀರಿ ಎಂದರ್ಥ. Aptronix ನಿಮಗೆ ಈ ಮೌಲ್ಯದ ಜೊತೆಗೆ ರೂ. 3,000 ಬೋನಸ್ ಸಹ ನೀಡುತ್ತದೆ. ಇದು ಒಟ್ಟು ರೂ. 26,100 ಮೌಲ್ಯಕ್ಕೆ ಸಮಾನವಾಗಿದೆ.

ಇದನ್ನೂ ಓದಿ-  Vivo Holi Offer: ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಈ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್

ಒಟ್ಟು ವಿನಿಮಯ ಮೌಲ್ಯವನ್ನು ಕಡಿತಗೊಳಿಸಿದ ನಂತರ, iPhone 12 ರೂ.24,900 ಕ್ಕೇ ಲಭ್ಯವಾಗಲಿದೆ. ಇದು iPhone 12 ನಲ್ಲಿ ಲಭ್ಯವಾಗುತ್ತಿರುವ ಇದುವರೆಗಿನ ಭರ್ಜರಿ ಕೊಡುಗೆ ಆಗಿದೆ.  ನೀವೂ ಸಹ iPhone 12 ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More