Home> Technology
Advertisement

Big Saving Days Sale 2021: ಎಲೆಕ್ರಾನಿಕ್ಸ್ ಉತ್ಪನ್ನಗಳ ಮೇಲೆ ಸಿಗಲಿದೆ ಶೇ 80 ರಷ್ಟು ರಿಯಾಯಿತಿ

ಬಿಗ್ ಸೇವಿಂಗ್ ಡೇಸ್ 2021 ಸೇಲ್ (Flipkart Big Saving Days Sale 2021) ವೇಳೆ ಫ್ಲಿಪ್ಕಾರ್ಟ್ ಮಿನಿ  ಫ್ಲ್ಯಾಷ್ ಸೇಲ್ ಗಳನ್ನೂ ಕೂಡಾ ಹಮ್ಮಿಕೊಳ್ಳಲಿದೆ.
 

 Big Saving Days Sale 2021: ಎಲೆಕ್ರಾನಿಕ್ಸ್  ಉತ್ಪನ್ನಗಳ ಮೇಲೆ ಸಿಗಲಿದೆ ಶೇ 80 ರಷ್ಟು ರಿಯಾಯಿತಿ

ನವದೆಹಲಿ : ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇ ಸೇಲ್ 2021 (Flipkart Big Saving Days Sale 2021)  ನಾಳೆಯಿಂದ ಅಂದರೆ ಜುಲೈ 25 ರಿಂದ ಪ್ರಾರಂಭವಾಗಲಿದೆ. ಐದು ದಿನಗಳವರೆಗೆ ನಡೆಯುವ ಈ ಸೇಲ್ ನಲ್ಲಿ ಮೊಬೈಲ್, ವಿದ್ಯುತ್ ಉಪಕರಣಗಳ ಮೇಲೆ ಭಾರೀ ಡಿಸ್ಕೌಂಟ್ ಲಭ್ಯವಾಗಲಿದೆ.  ಫ್ಲಿಪ್‌ಕಾರ್ಟ್‌ನ ಪ್ಲಸ್ (Flipkart’s Plus) ಸದಸ್ಯರಿಗಾಗಿ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನಡೆಯುವ ಮಿನಿ ಫ್ಲ್ಯಾಷ್ ಸೇಲ್ ನಲ್ಲಿ ಭಾರೀ ಲಾಭವಾಗಲಿದೆ. ಇದರಲ್ಲಿ,  ಹೆಚ್ಚಿನ ರಿಯಾಯಿತಿ ಸಿಗಲಿದೆ. 

ಮಿನಿ ಫ್ಲ್ಯಾಷ್ ಸೇಲ್ : 

ಬಿಗ್ ಸೇವಿಂಗ್ ಡೇಸ್ 2021 ಸೇಲ್ (Flipkart Big Saving Days Sale 2021) ವೇಳೆ ಫ್ಲಿಪ್ಕಾರ್ಟ್ ಮಿನಿ  ಫ್ಲ್ಯಾಷ್ ಸೇಲ್ ಗಳನ್ನೂ ಕೂಡಾ ಹಮ್ಮಿಕೊಳ್ಳಲಿದೆ.  ಫ್ಲಿಪ್‌ಕಾರ್ಟ್‌ನ ಕ್ರೇಜಿ ಡೀಲ್‌ಗಳು ಮಧ್ಯಾಹ್ನ 12ರಿಂದ ನಡೆಯಲಿದೆ. ಬೆಳಿಗ್ಗೆ 8 ಮತ್ತು ಸಂಜೆ 4 ಗಂಟೆಗೆವರೆಗೆ ಆಯ್ದ ಉತ್ಪನ್ನಗಳೊಂದಿಗೆ ಲೈವ್ ನಡೆಯಲಿದೆ. ಫ್ಲಿಪ್‌ಕಾರ್ಟ್‌ನ ಟಿಕ್ ಟಾಕ್ ಡೀಲ್ ಆಯ್ದ ಉತ್ಪನ್ನಗಳ ಸೇಲ್ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ಅತಿ ಕಡಿಮೆ ಬೆಲೆಯಲ್ಲಿ ನಡೆಯಲಿದೆ. 

ಇದನ್ನೂ ಓದಿ: Nokia 110 4G ಫೋನ್ ಬಿಡುಗಡೆ, ಇಲ್ಲಿದೆ ಬೆಲೆ ವೈಶಿಷ್ಟ್ಯ

ಕ್ಯಾಶ್‌ಬ್ಯಾಂಕ್ ಮತ್ತು ಬ್ಯಾಂಕ್ ಆಫರ್ ಗಳು : 
ಐಸಿಐಸಿಐ (ICICI) ಗ್ರಾಹಕರಿಗೆ ಉತ್ತಮ ಶಾಪಿಂಗ್ ಅವಕಾಶ ಸಿಗಲಿದೆ. ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಶಾಪಿಂಗ್‌ನಲ್ಲಿ 10% ವರೆಗೆ ರಿಯಾಯಿತಿ ಲಭ್ಯವಿರುತ್ತದೆ.  ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು(Smartphone), ಮನೆ ಮತ್ತು ಅಡುಗೆ ಮನೆ ವಸ್ತುಗಳ ಮೇಲೆ ಕ್ಯಾಶ್ ಬ್ಯಾಕ್ (Cash back) ಪಡೆಯಬಹುದು. ಎಕ್ಸ್ ಚೇಂಜ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಸೇವೆ ಕೂಡಾ ಇರಲಿದೆ. 

ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ 80 ಪ್ರತಿಶತ ರಿಯಾಯಿತಿ :
ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ, ಲ್ಯಾಪ್‌ಟಾಪ್‌ಗಳು (laptop) , ಹೆಡ್‌ಫೋನ್‌ಗಳು, ಸೌಂಡ್‌ಬಾರ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ಹಲವಾರು ಸಾಧನಗಳಲ್ಲಿ ಫ್ಲಿಪ್‌ಕಾರ್ಟ್ (Flipkart) ಗ್ರಾಹಕರಿಗೆ 80% ವರೆಗೆ ರಿಯಾಯಿತಿ ನೀಡುತ್ತದೆ. (Discount on Electronic Devices). ಸೇಲ್ ನಲ್ಲಿ ಆಯ್ದ ಲ್ಯಾಪ್‌ಟಾಪ್‌ಗಳನ್ನು 40% ರಿಯಾಯಿತಿಯಲ್ಲಿ ಮತ್ತು ಹೆಡ್‌ಫೋನ್‌ಗಳನ್ನು 70% ರಿಯಾಯಿತಿಯಲ್ಲಿ ಖರೀದಿಸಬಹುದು. ಇದಲ್ಲದೆ, ಆಪಲ್, ಒನ್‌ಪ್ಲಸ್ ಮತ್ತು ಮೊಟೊರೊಲಾದ ಉತ್ಪನ್ನಗಳಲ್ಲಿ ಬಂಪರ್ ರಿಯಾಯಿತಿಗಳು ಸಿಗಲಿವೆ. 

ಇದನ್ನೂ ಓದಿ : Made in India Smartphones: ಚೀನಾದ ಬ್ರಾಂಡ್‌ಗಳಿಗೆ ಟಕ್ಕರ್ ನೀಡುವ ಟಾಪ್ 5 ಭಾರತೀಯ ಫೋನ್ ತಯಾರಕರಿವರು

ಸ್ಮಾರ್ಟ್ ಟಿವಿಯಲ್ಲಿ ರಿಯಾಯಿತಿ :
OnePlus U1S 50-inch ಇಂಚಿನ ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ 3000 ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದು. ಇನ್ನು ಮಿ 4 ಎಕ್ಸ್ 50 ಇಂಚಿನ ಅಲ್ಟ್ರಾ ಎಚ್ಡಿ ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 15,999 ರೂಗಳಿಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿ 4,000 ರೂ.ಗೆ ಅಗ್ಗದ ದರದಲ್ಲಿ ಸಿಗಲಿದೆ.  ಇಫಾಲ್ಕಾನ್‌ನ 32 ಇಂಚಿನ ಟಿವಿಯನ್ನು 13,499 ರೂಗಳಿಗೆ ಖರೀದಿಸಬಹುದು. ಅಂದರೆ ಈ ತೀಯ ಮೇಲೆ 5,500 ರೂ. ಡಿಸ್ಕೌಂಟ್ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More