Home> Technology
Advertisement

Flipkart Big Bachat Dhamaal sale: ಇಂದಿನಿಂದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಕಾ ಸೇಲ್ ಆರಂಭ

Flipkart Big Bachat Dhamaal sale: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಚತ್ ಧಮಾಲ್ ಸೇಲ್ ಇಂದು ಜುಲೈ 1 ರಿಂದ ಪ್ರಾರಂಭವಾಗಿದೆ. ಈ ಬಾರಿ ಫ್ಲಿಪ್‌ಕಾರ್ಟ್ ಗ್ಯಾಜೆಟ್‌ಗಳ ಮೇಲೆ ಉತ್ತಮ ಕೊಡುಗೆಯನ್ನು ನೀಡಿದೆ. ಈ ಸೇಲ್ನಲ್ಲಿ ಲಭ್ಯವಿರುವ ರಿಯಾಯಿತಿಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿಯೋಣ...

Flipkart Big Bachat Dhamaal sale:  ಇಂದಿನಿಂದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಕಾ ಸೇಲ್ ಆರಂಭ

ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಚತ್ ಧಮಾಲ್ ಸೇಲ್: ಫ್ಲಿಪ್‌ಕಾರ್ಟ್‌ನ ಬಿಗ್ ಬಚತ್ ಧಮಾಲ್ ಮಾರಾಟ ಇಂದಿನಿಂದ ಪ್ರಾರಂಭವಾಗಿದೆ ಮತ್ತು ನೀವು ಸ್ಮಾರ್ಟ್‌ಫೋನ್ ಅಥವಾ ಇನ್ನಾವುದೇ ಗ್ಯಾಜೆಟ್ ಖರೀದಿಸಲು ಬಯಸಿದರೆ, ಈ ಅವಕಾಶವನ್ನು  ಮಿಸ್ ಮಾಡಿಕೊಳ್ಳಬೇಡಿ. ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಮಾರಾಟವು ಜುಲೈ 1 ರಿಂದ ಜುಲೈ 3 ರವರೆಗೆ ನಡೆಯಲಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ  ಈ ಸೇಲ್ನಲ್ಲಿ ಇಎಂಐ ಮತ್ತು ಉಚಿತ ಡೆಲಿವರಿ ಸೇವೆಯಂತಹ ಸೌಲಭ್ಯಗಳನ್ನು ನೀಡುತ್ತಿದೆ. 

ಗ್ರಾಹಕರ ಶಾಪಿಂಗ್ ಅನುಕೂಲಕ್ಕಾಗಿ, ಫ್ಲಿಪ್‌ಕಾರ್ಟ್ ಹೊಸ ಪುಟವನ್ನು ರಚಿಸಿದೆ, ಅಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಲಭ್ಯವಿರುವ ಎಲ್ಲಾ ರಿಯಾಯಿತಿ ವಸ್ತುಗಳು ಮತ್ತು ಕೊಡುಗೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ನೀವು ಫೋನ್ ಖರೀದಿಸಲು ಈ ಸೇಲ್ನಲ್ಲಿ ಹಲವು ಕೊಡುಗೆಗಳು ಲಭ್ಯವಿವೆ. ಈ ಸೇಲ್ನಲ್ಲಿ ಲಭ್ಯವಿರುವ ಮೊಬೈಲ್ ಫೋನ್‌ಗಳ ಆಫರ್‌ಗಳ ಇಲ್ಲಿದೆ ಮಾಹಿತಿ....

Vivo X70 Pro:
ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಮಾರಾಟದ ಸಮಯದಲ್ಲಿ, 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯದೊಂದಿಗೆ Vivo X70 Pro ಬೆಲೆ ರೂ.46,990 ಆಗಿದೆ. ಕ್ಯಾಮೆರಾವನ್ನು ಹೆಚ್ಚು ಬಳಸುವಂತಹ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಜೊತೆಗೆ ಅಂತರ್ನಿರ್ಮಿತ ಗಿಂಬಲ್ ಸ್ಟೆಬಿಲೈಸೇಶನ್ ಬೆಂಬಲವನ್ನು ಹೊಂದಿದೆ.

ಇದನ್ನೂ ಓದಿ- ಇಂತಹ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಜೀವ ಉಳಿಸುತ್ತೆ ಸ್ಮಾರ್ಟ್‌ಫೋನ್

Motorola Edge 20 Pro:
ಮೋಟೊರೋಲಾ ಕಂಪನಿಯ ಎಡ್ಜ್ 20 ಪ್ರೊ ಕ್ವಾಲ್ಕಾಮ್ Snap Dragon 870 5G ಪ್ರೊಸೆಸರ್ ಅನ್ನು ಹೊಂದಿದೆ. ಇದು ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಮಾರಾಟದಲ್ಲಿ ರೂ.32,999 ಕ್ಕೆ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 45,999. Motorola Edge 20 Pro ನ ಡಿಸ್ಪ್ಲೇ 6.7 ಇಂಚುಗಳಾಗಿರುತ್ತದೆ. ಇದು 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಈ ಫೋನಿನ ಕ್ಯಾಮರಾದ ಬಗ್ಗೆ ಹೇಳುವುದಾದರೆ,  ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರುತ್ತದೆ ಅದು 108MP + 16MP + 8MP ಆಗಿರುತ್ತದೆ. ಸೆಲ್ಫಿ ಕ್ಯಾಮೆರಾ ಅಥವಾ ಮುಂಭಾಗದ ಕ್ಯಾಮರಾ 32MP ಆಗಿರುತ್ತದೆ. ಫೋಟೋಗಳನ್ನು ಇಷ್ಟಪಡುವವರಿಗೂ ಇದು ಉತ್ತಮ ಆಯ್ಕೆಯಾಗಿದೆ.

Poco M3 Pro 5G: 
ಇದು ಬಜೆಟ್ 5G ಸ್ಮಾರ್ಟ್‌ಫೋನ್ ಆಗಿದೆ. ನೀವು ಈ ಫೋನ್ ಅನ್ನು (Poco M3 Pro 5G) 14,499 ರೂ.ಗೆ ಖರೀದಿಸಬಹುದಾಗಿದೆ.   6GB RAM ರೂಪಾಂತರದ ಮೂಲ ಬೆಲೆ 16,499 ಆಗಿದೆ. ಇದರ ಬ್ಯಾಟರಿ ಬಲಿಷ್ಠವಾಗಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ವಿಶೇಷತೆ ಎಂದರೆ ನೀವು ಈ ಫೋನಿನಲ್ಲಿ ಇಡೀ ದಿನ ಗೇಮ್ ಆಡಿದ ನಂತರವೂ ಬ್ಯಾಟರಿ ತ್ವರಿತವಾಗಿ ಖಾಲಿ ಆಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ- Google Search: ಗೂಗಲ್‌ನಲ್ಲಿ ಮರೆತೂ ಸಹ ಈ ವಿಷಯಗಳನ್ನು ಹುಡುಕಬೇಡಿ, ಜೈಲು ಪಾಲಾಗಬಹುದು ಎಚ್ಚರ!

ಐಫೋನ್ 12 ಮಿನಿ:
ಸ್ನೇಹಿತರೇ, ನೀವು ಐಫೋನ್ ಪ್ರಿಯರಾಗಿದ್ದರೆ, ಈ ಸೇಲ್ ಸೀಸನ್‌ನಲ್ಲಿ ನೀವು ಐಫೋನ್ ಅನ್ನು ಸಹ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಈ ಸೇಲ್ ನಲ್ಲಿ 128GB ಸಂಗ್ರಹ ಸಾಮರ್ಥ್ಯದೊಂದಿಗೆ Apple iPhone 12 mini ರೂ.49,999ಕ್ಕೆ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 59,900. ರಿಯಾಯಿತಿ ನಡೆಯುತ್ತಿರುವ Apple ನ ಉತ್ಪನ್ನಗಳಲ್ಲಿ iPhone 13 ಸರಣಿಯನ್ನು ಸಹ ಸೇರಿಸಲಾಗಿದೆ.  

Poco F4 5G:
Poco F4 5G ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರೂ.27,999 ಕ್ಕೆ ಲಭ್ಯವಿದೆ. ಇದಲ್ಲದೆ, ಗ್ರಾಹಕರು SBI ಮತ್ತು HDFC ಕಾರ್ಡ್‌ಗಳೊಂದಿಗೆ ಫೋನ್ ಖರೀದಿಸಿದರೆ, ಅವರು ಹೆಚ್ಚುವರಿ 3,000 ರಿಯಾಯಿತಿಯನ್ನು ಪಡೆಯುತ್ತಾರೆ. ಫೋನ್ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ ಮತ್ತು Qualcomm Snapdragon 870 ಪ್ರೊಸೆಸರ್ ಹೊಂದಿದೆ. ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಸಹ ಹೊಂದಿದೆ. ಇದರಲ್ಲಿ 64MP ಪ್ರಾಥಮಿಕ ಕ್ಯಾಮೆರಾ ಮತ್ತು 20MP ಮುಂಭಾಗದ ಕ್ಯಾಮೆರಾ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More