Home> Technology
Advertisement

ಆನ್‌ಲೈನ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವಾಗ ಎಚ್ಚರ! ಬುಕ್ಕಿಂಗ್ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

Electric Scooter Scam:ಆನ್‌ಲೈನ್‌ನಲ್ಲಿ ಸ್ಕೂಟರ್ ಬುಕ್ಕಿಂಗ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಸ್ಕೂಟರ್ ಬುಕ್ಕಿಂಗ್ ಗೆ ವಂಚಕರು ನಕಲಿ ವೆಬ್ ಸೈಟ್ ಸೃಷ್ಟಿಸಿ ಹಣ ವಸೂಲಿ ಮಾಡಲಾಗುತ್ತಿದೆ. 

ಆನ್‌ಲೈನ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವಾಗ ಎಚ್ಚರ! ಬುಕ್ಕಿಂಗ್ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

Electric Scooter Scam : ದೇಶದಲ್ಲಿ ಆನ್‌ಲೈನ್ ಸ್ಕೂಟರ್‌ಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಇನ್ನೊಂದೆಡೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಈ ಮಾರುಕಟ್ಟೆಗೂ ವಂಚಕರು ಪ್ರವೇಶಿಸಿದ್ದಾರೆ. ಆನ್‌ಲೈನ್ ಸ್ಕೂಟರ್ ಬುಕ್ಕಿಂಗ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಇಂತಹ ದರೋಡೆಕೋರರ ತಂಡವೊಂದು ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ಮೂರು ರಾಜ್ಯಗಳ 20 ವಂಚಕರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ನೆಪದಲ್ಲಿ 1,000 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ. 

ಯಾವ ರೀತಿ ವಂಚಿಸಲಾಗುತ್ತಿದೆ ? :
ಆನ್‌ಲೈನ್‌ನಲ್ಲಿ ಸ್ಕೂಟರ್ ಬುಕ್ಕಿಂಗ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಸ್ಕೂಟರ್ ಬುಕ್ಕಿಂಗ್ ಗೆ ವಂಚಕರು ನಕಲಿ ವೆಬ್ ಸೈಟ್ ಸೃಷ್ಟಿಸಿದ್ದು, ಇಲ್ಲಿ ಗ್ರಾಹಕರಿಂದ ಬುಕ್ಕಿಂಗ್‌ಗಾಗಿ 499 ರೂ.ಗಳನ್ನು ಆನ್‌ಲೈನ್‌ ಮೂಲಕ ತೆಗೆದುಕೊಳ್ಳುತ್ತಿದ್ದರು. ಇದಾದ ನಂತರ ಸಾರಿಗೆ ಮತ್ತು ವಾಹನ ವಿಮೆಗಾಗಿ ಹಣವನ್ನು ವರ್ಗಾಯಿಸುವಂತೆ ಹೇಳುತ್ತಿದ್ದರು. ಹೀಗೆ ಜನಸಾಮಾನ್ಯರಿಂದ ತಮಗೆ ಬೇಕಾದ ಹಣವನ್ನು ಪಡೆದು, ಸ್ಕೂಟರ್ ವಿತರಣೆ ವಿಳಂಬವಾಗುತ್ತದೆ ಎಂದು ಹೇಳಿ ಜನರನ್ನು  ಮೂರ್ಖರನ್ನಾಗಿಸುತ್ತಿದ್ದರು. ಸೋಮವಾರ ಈ ಪ್ರಕರಣದಲ್ಲಿ 20 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರಲ್ಲಿ 11 ಮಂದಿ ಬಿಹಾರ, 4 ತೆಲಂಗಾಣ, 3 ಜಾರ್ಖಂಡ್ ಮತ್ತುಇಬ್ಬರು ಕರ್ನಾಟಕದವರು.

ಇದನ್ನೂ ಓದಿ : ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ iPhone 12 Mini ಮಾರಾಟ! 60 ಸಾವಿರ ಬೆಲೆಯ ಫೋನ್ ಕೇವಲ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ.!

 ವಂಚಕರನ್ನು ಪತ್ತೆ ಹಚ್ಚಿದ್ದು ಹೇಗೆ ? : 
ಈ ರೀತಿ ವಂಚನೆಗೊಳಗಾಗಿ 30,998 ರೂಪಾಯಿ ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದಾಗ ವಂಚನೆ ಬೆಳಕಿಗೆ ಬಂದಿದೆ. ನಂತರ, ಶಂಕಿತರಲ್ಲಿ ಒಬ್ಬನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಲಾಯಿತು.  ಇದಾದ ನಂತರ ಅಂತಿಮವಾಗಿ ಇಡೀ ಗ್ಯಾಂಗ್ ಅನ್ನು ಪತ್ತೆ ಹಚ್ಚುವುಡು ಪೊಲೀಸರಿಗೆ ಸಾಧ್ಯವಾಯಿತು. ಬಂಧಿತರಿಂದ 7 ಲ್ಯಾಪ್‌ಟಾಪ್‌ಗಳು, 38 ಸ್ಮಾರ್ಟ್‌ಫೋನ್‌ಗಳು, 25 ಬೇಸಿಕ್ ಫೋನ್‌ಗಳು, ಎರಡು ಹಾರ್ಡ್ ಡಿಸ್ಕ್‌ಗಳು, ಎರಡು ಸ್ಮಾರ್ಟ್‌ವಾಚ್‌ಗಳು ಮತ್ತು 114 ಸಿಮ್ ಕಾರ್ಡ್‌ಗಳನ್ನು  ವಶಪಡಿಸಿಕೊಳ್ಳಲಾಗಿದೆ.   

ಇದನ್ನೂ ಓದಿ : ಆ ಒಂದು ನಕಲಿ ಖಾತೆಯ ಟ್ವೀಟ್ ನಿಂದಾಗಿ ಸಾವಿರಾರು ಕೋಟಿ ಕಳೆದುಕೊಂಡ Eli Lilly...!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More