Home> Technology
Advertisement

Apple iPhone: 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್

Apple iPhone 12 Mini: ಐಫೋನ್ ಇಷ್ಟು ಅಗ್ಗವಾಗುತ್ತಿರುವುದು ಇದೇ ಮೊದಲು. ಆಪಲ್ ಐಫೋನ್ 12 ಸರಣಿಯ ಭಾಗವಾಗಿ ಬಿಡುಗಡೆ ಮಾಡಿದ ಕಂಪನಿಯ ಮೊದಲ ಮಿನಿ ಮಾಡೆಲ್ ಆಪಲ್ ಐಫೋನ್ 12 ಮಿನಿ ಆಗಿದೆ. ಇದು ನಿಮಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ.

Apple iPhone: 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್

ನವದೆಹಲಿ: ಐಫೋನ್ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದೆ. ಪ್ರತಿಯೊಬ್ಬರೂ ಐಫೋನ್ ಹೊಂದಲು ಬಯಸುತ್ತಾರೆ. ಆದರೆ ಹೆಚ್ಚಿನ ಬೆಲೆಯಿಂದಾಗಿ ಅದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಮಾರಾಟದ ಸಮಯದಲ್ಲಿ ಐಫೋನ್‌ಗಳ ಬೆಲೆಯನ್ನು ಹೆಚ್ಚು ಕಡಿತಗೊಳಿಸಲಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ iPhone 12 Miniಯನ್ನು 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಐಫೋನ್ ಇಷ್ಟು ಅಗ್ಗವಾಗುತ್ತಿರುವುದು ಇದೇ ಮೊದಲು.

ಹೌದು, Apple iPhone 12 Mini ಸ್ಮಾರ್ಟ್‍ಫೋನ್ Apple iPhone 12 ಸರಣಿಯ ಮೊದಲ ಮಿನಿ ಮಾದರಿಯಾಗಿದೆ. ಫೋನ್‌ನ ಗಾತ್ರ ಚಿಕ್ಕದಾಗಿದೆ, ಆದರೆ ಇದರಲ್ಲಿನ ವೈಶಿಷ್ಟ್ಯಗಳು ಅದ್ಭುತವಾಗಿದೆ. ಐಫೋನ್ 12 ಮಿನಿಯನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎಂದು ತಿಳಿಯಿರಿ.  

ಇದನ್ನೂ ಓದಿ: Christmas Day Offer: ಬರೀ ಒಂದು ಟ್ವೀಟ್ ಮಾಡಿದರೆ ಸಾಕು ಕಂಪನಿ ಉಚಿತವಾಗಿ ನೀಡುತ್ತಿದೆ Nothing Phone 1.!

Apple iPhone 12 ಮಿನಿ ಕೊಡುಗೆ & ರಿಯಾಯಿತಿ

Apple iPhone 12 miniನ ಮೂಲ ಬೆಲೆ 59,900 ರೂ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದು 38,499 ರೂ.ಗೆ ಲಭ್ಯವಿದೆ. ಫೋನ್ ಮೇಲೆ ಶೇ.35ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರ ನಂತರ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇವೆ. ಈ ಆಫರ್‍ಗಳನ್ನು ಬಳಸಿದರೆ ಅತ್ಯಂತ ಕಡಿಮೆ ಬೆಲೆಗೆ ನೀವು ಈ ಫೋನ್ ಖರೀದಿಸಬಹುದು.  

Apple iPhone 12 mini ಬ್ಯಾಂಕ್ ಕೊಡುಗೆ

Apple iPhone 12 mini ಖರೀದಿಸಲು ಕೋಟಕ್ ಬ್ಯಾಂಕ್‌ನ ಕಾರ್ಡ್ ಬಳಸಿದರೆ, ನಿಮಗೆ 1 ಸಾವಿರ ರೂ. ರಿಯಾಯಿತಿ ಸಿಗುತ್ತದೆ. ಇದರ ನಂತರ ಫೋನ್ ಬೆಲೆ 37,499 ರೂ. ಆಗುತ್ತದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ಅದನ್ನು ಸಹ ಬಳಸಿದರೆ ನಿಮಗೆ ಕಡಿಮೆ ಬೆಲಗೆ ಐಫೋನ್ ಸಿಗುತ್ತದೆ.

ಇದನ್ನೂ ಓದಿ: Airtel ಬಳಕೆದಾರರಿಗೆ ಸಿಹಿ ಸುದ್ದಿ : ಈ ಪ್ಲಾನ್​ನಲ್ಲಿ ಸಿಗಲಿದೆ 1 ವರ್ಷ Free ಕರೆ, ಹೈ ಸ್ಪೀಡ್ ಡೇಟಾ!

Apple iPhone 12 mini Exchange ಆಫರ್

Apple iPhone 12 miniನಲ್ಲಿ 17,500 ರೂ.ಗಳ ವಿನಿಮಯ ಕೊಡುಗೆ ಇದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ ಫೋನ್‌ನ ಸ್ಥಿತಿ ಉತ್ತಮವಾಗಿದ್ದಾಗ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ 17,500 ರೂ. ಆಫರ್ ಸಿಗುತ್ತದೆ. ನೀವು ಈ ಎಲ್ಲಾ ಸಂಪೂರ್ಣ ಆಫರ್‍ಗಳನ್ನು ಬಳಸಿಕೊಂಡು ಐಫೋನ್ ಖರೀದಿಸಿದರೆ 19,999 ರೂ.ಗೆ ಫೋನ್ ದೊರೆಯುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More