Home> Technology
Advertisement

Amazon Great Republic Day Saleನಲ್ಲಿ ಭಾರೀ ಆಫರ್..! ಶೇ.50ಕ್ಕೂ ಹೆಚ್ಚು ಡಿಸ್ಕೌಂಟ್, 999 ಇಎಂಐನಲ್ಲೂ ಟೀವಿ ಲಭ್ಯ

Amazon Great Republic Day Sale ನಲ್ಲಿ ಈ ದಿನಗಳಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ನಡೆಯುತ್ತಿದೆ.  ಇಲ್ಲಿ AKAI 43 ಇಂಚಿನ ಟೀವಿಗೆ ಶೇ. 54 ರಷ್ಟು ರಿಯಾಯಿತಿ ಇದೆ.

Amazon Great Republic Day Saleನಲ್ಲಿ ಭಾರೀ ಆಫರ್..! ಶೇ.50ಕ್ಕೂ ಹೆಚ್ಚು ಡಿಸ್ಕೌಂಟ್, 999 ಇಎಂಐನಲ್ಲೂ ಟೀವಿ ಲಭ್ಯ

ನವದೆಹಲಿ : ಮನೆಗೆ ದೊಡ್ಡ ಪರದೆಯ ಟೀವಿ ತರುವ ಯೋಚನೆ ಏನಾದರೂ ನಿಮಗಿದ್ದರೆ, ಈಗ ಬಂದಿದೆ ಸುವರ್ಣಾವಕಾಶ.   ಈ ದಿನಗಳಲ್ಲಿ ಜನರಲ್ಲಿ ಹೈ ಡೆಫಿನಿಶನ್ ಟೀವಿಯ ಕ್ರೇಜ್ ಹೆಚ್ಚಾಗುತ್ತಿದೆ.   ಅಂಥಹ ಟೀವಿಗಳನ್ನು ಮನೆಗೆ ತರಲು ಇದಕ್ಕಿಂತ ಒಳ್ಳೆಯ ಅವಕಾಶ ಇರದು. ಅಂಥಹ ಕೆಲವು ಟೀವಿಗಳು ಈಗ  ಒಳ್ಳೆಯ ಆಫರ್ ನಲ್ಲಿ  ಲಭ್ಯವಿವೆ. 

43 ಇಂಚಿನ ಟೀವಿಗೆ ಶೇ. 54ರಷ್ಟು ಡಿಸ್ಕೌಂಟ್ :

Amazon Great Republic Day Sale ನಲ್ಲಿ ಈ ದಿನಗಳಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ನಡೆಯುತ್ತಿದೆ.  ಇಲ್ಲಿ AKAI 43 ಇಂಚಿನ ಟೀವಿಗೆ ಶೇ. 54 ರಷ್ಟು ರಿಯಾಯಿತಿ ಇದೆ. 51,990 ಮೌಲ್ಯದ ಟೀವಿ (TV) ಕೇವಲ  23,999 ರೂಪಾಯಿಗೆ ಲಭ್ಯವಾಗುತ್ತಿದೆ.  ಇಷ್ಟೇ ಅಲ್ಲ, ಕಂಪನಿ ಇಎಂಐ (EMI) ಕೂಡಾ ನೀಡುತ್ತಿದೆ. ಕೇವಲ 1,130 ರೂಪಾಯಿ ಮಾಸಿಕ ಕಂತಿನಲ್ಲಿ ಈ ಟೀವಿಯನ್ನು ಮನೆಗೆ ತರಬಹುದು. 

ಇದನ್ನೂಓದಿಹತ್ತು ಸಾವಿರಕ್ಕಿಂತ ಕಡಿಮೆ ದರದಲ್ಲಿ ಹೊಸ Realme ಫೋನ್, ಇಲ್ಲಿದೆ ಬೆಲೆ, ವೈಶಿಷ್ಟ್ಯ

ಅಮೆಝಾನ್ (Amazon) ಈಗ ಇದೇ ರೀತಿಯ ಹಲವು ಅಫರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. AmazonBasics ರೂಪದಲ್ಲಿ 50 ಇಂಚಿನ 4K Ultra HD ಟೀವಿಯನ್ನು  ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ. ಅಂದರೆ, ಈ ದೊಡ್ಡ ಟೀವಿಗೆ ಶೇ. 45 ರಷ್ಟು ಡಿಸ್ಕೌಂಟ್ (Discount)  ಘೋಷಿಸಿದೆ. 30,399 ಇದ್ದರೆ ಸಾಕು ಈ ಟೀವಿ ನಿಮ್ಮದಾಗುತ್ತದೆ. ಅಷ್ಟೊಂದು ದುಡ್ಡಿಲ್ಲವಾ..? 1,431 ಮಾಸಿಕ ಕಂತಿನಲ್ಲೂ ಟೀವಿ ಮನೆಗೆ ಒಯ್ಯಬಹುದು.

40 ಇಂಚಿನಟೀವಿಗೆ ಕೇವಲ 941 ರೂಪಾಯಿ ಇಎಂಐ :
Great Republic Day Saleನಲ್ಲಿ ಚೀನಿ ಕಂಪನಿ Mi ಆಕರ್ಷಕ ಮೊತ್ತದಲ್ಲಿ ತನ್ನ ಟೀವಿ ಮಾರಾಟ ಮಾಡುತ್ತಿದೆ. Full HD Android TV ಯಾಗಿರುವ Mi TV 4A (40 ಇಂಚು) ಕೇವಲ 19,999 ರೂಪಾಯಿಗಳಿಗೆ ಸಿಗುತ್ತಿದೆ. ಕೇವಲ 941 ರೂಪಾಯಿ ಇಎಂಐ ಮೇಲೂ ಇದನ್ನು ಖರೀದಿಸಬಹುದು.

ಇದನ್ನೂಓದಿ : Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ

32 ಇಂಚಿನ ಟೀವಿಗೆ ಕೇವಲ 13,999  ರೂಪಾಯಿ: 
ಕಡಿಮೆ ದುಡ್ಡಿನಲ್ಲಿ ಒಂದು ಒಳ್ಳೆಯ Android TV ಖರೀದಿಸುವ ಯೋಚನೆ ನಿಮಗಿದ್ದರೆ, ಅದಕ್ಕೂ ಅವಕಾಶಗಳಿವೆ. AmazonBasics ನ 32  ಇಂಚಿನ ಟೀವಿ ಕೇವಲ 13,999 ರೂಪಾಯಿಗಳಿಗೆ ಸಿಗುತ್ತಿದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ (Credit cards) ಇದ್ದರೆ, ಇದರ ಮೇಲೂ ಶೇ. 10 ಡಿಸ್ಕೌಂಟ್ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More