Home> Technology
Advertisement

Airtel ಮತ್ತು Vi ನಿಂದ ಬಂಪರ್ ರಿಚಾರ್ಜ್ ಪ್ಲಾನ್ : 730GB ಡೇಟಾ ಜೊತೆಗೆ ಉಚಿತ OTT ಚಂದಾದಾರಿಕೆ ಲಭ್ಯ!

ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಇಂತಹ ಹಲವು ರಿಚಾರ್ಜ್ ಪ್ಲಾನ್ ಗಳನ್ನು ಹೊಂದಿದ್ದು, ಇದು ಉಚಿತ OTT ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಮೊಬೈಲ್‌ನಲ್ಲಿ OTT ನಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ವೀಕ್ಷಿಸಲು ಇಷ್ಟಪಡುವ ಜನರಿಗೆ ಇದು ತುಂಬಾ ಉಪಯೋಗಕ್ಕಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಗಳು ಸಹ ಲಭ್ಯವಿವೆ. ಈ ಯೋಜನೆಗಳ ವ್ಯಾಲಿಡಿಟಿಯು ಒಂದು ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಸಹ ಇದೆ. ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಯೋಜನೆಗಳ ಜೊತೆಗೆ, ಅಮೆಜಾನ್ ಪ್ರೈಮ್ ಮತ್ತು ಏರ್‌ಟೆಲ್ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಈ ಯೋಜನೆಗಳ ಬಗ್ಗೆ ತಿಳಿಯೋಣ....

Airtel ಮತ್ತು Vi ನಿಂದ ಬಂಪರ್ ರಿಚಾರ್ಜ್ ಪ್ಲಾನ್ : 730GB ಡೇಟಾ ಜೊತೆಗೆ ಉಚಿತ OTT ಚಂದಾದಾರಿಕೆ ಲಭ್ಯ!

ನವದೆಹಲಿ : ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಇಂತಹ ಹಲವು ರಿಚಾರ್ಜ್ ಪ್ಲಾನ್ ಗಳನ್ನು ಹೊಂದಿದ್ದು, ಇದು ಉಚಿತ OTT ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಮೊಬೈಲ್‌ನಲ್ಲಿ OTT ನಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ವೀಕ್ಷಿಸಲು ಇಷ್ಟಪಡುವ ಜನರಿಗೆ ಇದು ತುಂಬಾ ಉಪಯೋಗಕ್ಕಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಗಳು ಸಹ ಲಭ್ಯವಿವೆ. ಈ ಯೋಜನೆಗಳ ವ್ಯಾಲಿಡಿಟಿಯು ಒಂದು ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಸಹ ಇದೆ. ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಯೋಜನೆಗಳ ಜೊತೆಗೆ, ಅಮೆಜಾನ್ ಪ್ರೈಮ್ ಮತ್ತು ಏರ್‌ಟೆಲ್ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಈ ಯೋಜನೆಗಳ ಬಗ್ಗೆ ತಿಳಿಯೋಣ....

ಏರ್‌ಟೆಲ್ 349 ರೂ. ಧನ್ಸು ಯೋಜನೆ 

ನೀವು ಏರ್‌ಟೆಲ್(Airtel) ಬಳಕೆದಾರರಾಗಿದ್ದರೆ ಮತ್ತು ಕಡಿಮೆ ವೆಚ್ಚದ ಯೋಜನೆಯೊಂದಿಗೆ OTT ಚಂದಾದಾರಿಕೆಯನ್ನು ತೆಗೆದುಕೊಳ್ಳಲು ಬಯಸಿದರೆ, ಏರ್‌ಟೆಲ್ 349 ರೂ. ಗಳ ಅದ್ಭುತ ಯೋಜನೆಯನ್ನು ಹೊಂದಿದೆ. ಇದು ಏರ್‌ಟೆಲ್‌ನ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆಯೊಂದಿಗೆ 28 ​​ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದು ದಿನಕ್ಕೆ 2.5GB ಡೇಟಾ, ಅನಿಯಮಿತ ಕರೆ ಮತ್ತು ಉಚಿತ SMS ನೀಡುತ್ತದೆ. ಇದಲ್ಲದೆ, ಅಮೆಜಾನ್ ಪ್ರೈಮ್ ಚಂದಾದಾರಿಕೆಯು ಯೋಜನೆಯೊಂದಿಗೆ ಉಚಿತವಾಗಿ ಲಭ್ಯವಿದೆ.

ಇದನ್ನೂ ಓದಿ : Amazon: ಕೇವಲ 2,000 ರೂ.ಗೆ OPPO 5G ಸ್ಮಾರ್ಟ್‌ಫೋನ್ ಖರೀದಿಸಿ

ಏರ್‌ಟೆಲ್ 398 ರೂ. ಯೋಜನೆ

ಏರ್‌ಟೆಲ್‌ನ ಈ ಯೋಜನೆಯೊಂದಿಗೆ, ಬಳಕೆದಾರರಿಗೆ 28 ​​ದಿನಗಳವರೆಗೆ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಉಚಿತ SMS, ನೀವು Amazon Prime ಸದಸ್ಯತ್ವವನ್ನು ಪಡೆಯುತ್ತೀರಿ.

ಏರ್‌ಟೆಲ್‌ನ 2798 ರೂ. ಧನ್ಸು ಯೋಜನೆ

ಏರ್‌ಟೆಲ್‌ನ 2798 ರೂ ಯೋಜನೆ(Airtel Plans)ಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ. ಇದಲ್ಲದೆ, ಅನಿಯಮಿತ ಕರೆ ಮತ್ತು ಉಚಿತ SMS ಸಹ ಲಭ್ಯವಿದೆ. ಹೆಚ್ಚುವರಿ ಪ್ರಯೋಜನಗಳು Amazon Prime ನ ಉಚಿತ ಪ್ರಯೋಗ ಮತ್ತು Disney+ Hotstar ಗೆ ಚಂದಾದಾರಿಕೆಯನ್ನು ಒಳಗೊಂಡಿವೆ.

ವೊಡಾಫೋನ್-ಐಡಿಯಾದ 501 ರೂ. ಯೋಜನೆ

ವೊಡಾಫೋನ್-ಐಡಿಯಾ(Vodafone-Idea) ನ 501 ರೂ. ಪ್ಲಾನ್ ಕೂಡ ಅದ್ಭುತವಾಗಿದೆ. ಇದರಲ್ಲಿ ಪ್ರತಿದಿನ 3 GB ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು, ಇದು ಅನಿಯಮಿತ ಕರೆ ಜೊತೆಗೆ ಎಲ್ಲಾ ರಾತ್ರಿಯ ಪ್ರಯೋಜನವನ್ನು ಸಹ ಪಡೆಯುತ್ತದೆ. ಕಂಪನಿಯು ಈ ಯೋಜನೆಯೊಂದಿಗೆ 16GB ಹೆಚ್ಚುವರಿ ಡೇಟಾ ಜೊತೆಗೆ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಪ್ರವೇಶವನ್ನು ನೀಡುತ್ತಿದೆ.

ಇದನ್ನೂ ಓದಿ : Jio Vs Vodafone Idea: ಈ ಪ್ರಿಪೇಯ್ಡ್ ಯೋಜನೆಯಲ್ಲಿ 84 ದಿನಗಳವರೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ ಸಿಗಲಿದೆ 3GB ಡೇಟಾ

ವೊಡಾಫೋನ್-ಐಡಿಯಾದ 901 ರೂ. ಯೋಜನೆ

ವೊಡಾಫೋನ್-ಐಡಿಯಾ(Vi)ದ 901 ರೂ. ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತದೆ. ಅನಿಯಮಿತ ಕರೆ, ಎಲ್ಲಾ ರಾತ್ರಿಯ ಪ್ರಯೋಜನಗಳು ಯೋಜನೆಯಲ್ಲಿ ಲಭ್ಯವಿದೆ. ಅಲ್ಲದೆ, ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯು ಯೋಜನೆಯೊಂದಿಗೆ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More