Home> Technology
Advertisement

ಕೈಗೆಟಕುವ ಬೆಲೆಯ Realme 11 ಮತ್ತು Realme 11x ಬಿಡುಗಡೆ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Realme 11 5G & Realme 11X 5G: Realme 11 5Gಯ ಮೊದಲ ಮಾರಾಟ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಆಗಸ್ಟ್ 30ರ ಮಧ್ಯಾಹ್ನ 12 ಗಂಟೆಗೆ ನೀವು ಖರೀದಿಸಬಹುದು. ಈ ಎರಡೂ ಸ್ಮಾರ್ಟ್‍ಫೋನ್‍ಗಳು realme.com ಮತ್ತು flipkartನಲ್ಲಿ ಲಭ್ಯವಿರುತ್ತವೆ.

ಕೈಗೆಟಕುವ ಬೆಲೆಯ Realme 11 ಮತ್ತು Realme 11x ಬಿಡುಗಡೆ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ನವದೆಹಲಿ: ಭಾರತೀಯ ಮಾರುಕಟ್ಟೆಗೆ Realme ತನ್ನ ಹೊಸ ಸ್ಮಾರ್ಟ್‍ಫೋನ್‍ಗಳನ್ನು ಪರಿಚಯಿಸಿದೆ. ಕೈಗೆಟುಕುವ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ  Realme 11 5G ಮತ್ತು Realme 11X 5G ಎಂಬ 2 ಮಾದರಿಯ ಫೋನ್‍ಗಳನ್ನು ಬಿಡುಗಡೆಗೊಳಿಸಿದೆ.

ಸ್ಮಾರ್ಟ್‍ಫೋನ್‍ಗಳು 120Hz ಡಿಸ್ಪ್ಲೇ, ಡೈಮೆನ್ಸಿಟಿ 6100+, 5000mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್‍ ಬೆಂಬಲ ಮತ್ತು ಫ್ಲಾಟ್ ಪಂಚ್-ಹೋಲ್ ಡಿಸ್ಪ್ಲೇಯೊಂದಿಗೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ

Realme 11 5G & Realme 11X 5G ಬೆಲೆ ಹೀಗಿದೆ ನೋಡಿ  

Realme 11x 5G: 6GB + 128GB - ₹14,999

Realme 11x 5G: 8GB + 128GB - ₹15,999

Realme 11 5G: 8GB + 128GB - ₹18,999

Realme 11 5G: 8GB + 256GB - ₹19,999

ಇದನ್ನೂ ಓದಿ: ಪಡಿತರ ಚೀಟಿದಾರರೇ ಗಮನಿಸಿ ! ಸೆ.30 ರೊಳಗೆ ಈ ಕೆಲಸ ಮಾಡದಿದ್ದರೆ ಸಿಗುವುದಿಲ್ಲ ಉಚಿತ ಪಡಿತರ !

Realme 11 5G ಲಭ್ಯತೆ

Realme 11 5Gಯ ಮೊದಲ ಮಾರಾಟ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಆಗಸ್ಟ್ 30ರ ಮಧ್ಯಾಹ್ನ 12 ಗಂಟೆಗೆ ನೀವು ಖರೀದಿಸಬಹುದು. ಈ ಎರಡೂ ಸ್ಮಾರ್ಟ್‍ಫೋನ್‍ಗಳು realme.com ಮತ್ತು flipkartನಲ್ಲಿ ಲಭ್ಯವಿರುತ್ತವೆ. Realme 11 5G ಗ್ಲೋರಿ ಗೋಲ್ಡ್ ಮತ್ತು ಗ್ಲೋರಿ ಬ್ಲ್ಯಾಕ್‍ ಬಣ್ಣಗಳಲ್ಲಿದ್ರೆ, Realme 11X ಪರ್ಪಲ್ ಡಾನ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.

Realme 11 5G ವೈಶಿಷ್ಟ್ಯಗಳು

Realme 11 5G ಸ್ಮಾರ್ಟ್‍ಫೋನ್‍ 120Hz ರಿಫ್ರೆಶ್ ರೇಟ್ನೊಂದಿಗೆ 6.72 ಇಂಚಿನ FHD+ ಡಿಸ್ಪ್ಲೇ ಹೊಂದಿದ್ದು, ಇದು MediaTek ಡೈಮೆನ್ಸಿಟಿ 6100+ ಪ್ರೊಸೆಸರ್‍ನಿಂದ ಚಾಲಿತವಾಗಿದೆ. ನೀವು 8GB + 128GB ಮತ್ತು 8GB + 256GBಯ 2 ಸ್ಟೋರೇಜ್ ಆಯ್ಕೆಗಳನ್ನು ಪಡೆಯುತ್ತೀರಿ. ಈ ಫೋನ್‍ನಲ್ಲಿ 108MP ಮತ್ತು 2MP ಸೆನ್ಸಾರ್‍ಗಳೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರ ಮುಂಭಾಗ 16MP ಸೆಲ್ಫಿ ಕ್ಯಾಮೆರಾ ಇರುರತ್ತದೆ. ಈ ಫೋನ್ 67W SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ 5,000mAh ಬ್ಯಾಟರಿ ಹೊಂದಿದ್ದು, Android 13 ಆಧರಿಸಿ Realme UI 4.0 OSನಲ್ಲಿ ರನ್ ಆಗುತ್ತದೆ.

Realme 11X 5Gಯ ವೈಶಿಷ್ಟ್ಯಗಳು  

Realme 11X 5G 6.72 ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‍ನೊಂದಿಗೆ ಬರುತ್ತದೆ. ಇದು ಲೇಟೆಸ್ಟ್ ಆದ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 13 ಆಧರಿಸಿ Realme UI 4.0 OSನಲ್ಲಿ ರನ್ ಆಗುತ್ತದೆ. ಈ ಸ್ಮಾರ್ಟ್ಫೋನ್ 6GB + 128GB ಮತ್ತು 8GB + 128GB 2 ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ಸಹ 64MP ಮತ್ತು 2MP ಸೆನ್ಸರ್ಗಳೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಈ ಫೋನ್ 5000mAh ಬ್ಯಾಟರಿಯನ್ನು 33W SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಲಭ್ಯವಿದೆ.  

ಇದನ್ನೂ ಓದಿ: Pension Scheme : ಹಳೆಯ ಪಿಂಚಣಿ ಯೋಜನೆ ಪ್ರಮುಖ ಅಪ್‌ಡೇಟ್...ಉದ್ಯೋಗಿಗಳಿಗೆ ಸಿಹಿಸುದ್ದಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More