Home> Technology
Advertisement

Whatsapp DigiLocker Service: ಈಗ ನಿಮ್ಮೊಂದಿಗೆ RC-DL ಒಯ್ಯುವ ಅಗತ್ಯವಿಲ್ಲ- ಎಲ್ಲವನ್ನು ವಾಟ್ಸಾಪ್‌ನಲ್ಲೇ ಡೌನ್‌ಲೋಡ್ ಮಾಡಿ

Whatsapp DigiLocker Service: ಈಗ ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ವಾಹನದ ಎಲ್ಲಾ ಪೇಪರ್‌ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. ವಾಟ್ಸಾಪ್‌ನ ಇತ್ತೀಚಿನ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ಈ ಪೇಪರ್‌ಗಳನ್ನು ಡೌನ್‌ಲೋಡ್ ಮಾಡಬಹುದು.
 

Whatsapp DigiLocker Service: ಈಗ ನಿಮ್ಮೊಂದಿಗೆ RC-DL ಒಯ್ಯುವ ಅಗತ್ಯವಿಲ್ಲ- ಎಲ್ಲವನ್ನು ವಾಟ್ಸಾಪ್‌ನಲ್ಲೇ ಡೌನ್‌ಲೋಡ್ ಮಾಡಿ

ವಾಟ್ಸಾಪ್ ಡಿಜಿಲಾಕರ್ ಸೇವೆ:  ಹಲವು ಬಾರಿ ನಾವು ಮನೆಯಿಂದ ಹೊರಡುವಾಗ ಆತುರದಲ್ಲಿ ವಾಹನದ ಪೇಪರ್‌ಗಳನ್ನು ಒಯ್ಯುವುದನ್ನು ಮರೆಯುತ್ತೇವೆ. ಬಳಿಕ ತೊಂದರೆ ಅನುಭವಿಸಬೇಕಾಗುತ್ತದೆ. ಈಗ ಜನರ ಈ ಸಮಸ್ಯೆಗೆ ಸರ್ಕಾರ ಬ್ರೇಕ್ ಹಾಕಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಬಳಕೆದಾರರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇದನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್‌ನಲ್ಲಿಯೇ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಈ ವೈಶಿಷ್ಟ್ಯವನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ...

ವಾಟ್ಸಾಪ್‌ನಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಈ ರೀತಿ ಡೌನ್‌ಲೋಡ್ ಮಾಡಿ:

- ಮೊದಲಿಗೆ, ನೀವು ನಮಸ್ತೆ, ಹಲೋ ಅಥವಾ ಹಾಯ್ ಅಥವಾ ಡಿಜಿಲಾಕರ್ ಅನ್ನು +91 9013151515 ಸಂಖ್ಯೆಗೆ ಕಳುಹಿಸಬೇಕು. 
- ಇದಾದ ನಂತರ ಡಿಜಿಲಾಕರ್ ಖಾತೆ ಅಥವಾ ಕೋವಿನ್ ಸೇವೆಯನ್ನು ಪ್ರವೇಶಿಸಬೇಕೆ ಎಂದು ನಿಮ್ಮನ್ನು ಕೇಳಲಾಗುತ್ತದೆ.
- ನೀವು ಡಿಜಿಲಾಕರ್ ಅನ್ನು ಆಯ್ಕೆ ಮಾಡಿದರೆ, ನೀವು ಖಾತೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂದು ನಿಮ್ಮನ್ನು ಕೇಳಲಾಗುತ್ತದೆ. 
- ಡಿಜಿಲಾಕರ್‌ನಲ್ಲಿ ಈಗಾಗಲೇ ಖಾತೆಯನ್ನು ರಚಿಸಿದ್ದರೆ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. 
- ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ  ಒಟಿಪಿ ಬರುತ್ತದೆ. 
- ಇದರ ನಂತರ ನೀವು ನಿಮ್ಮ ದಾಖಲೆಗಳನ್ನು ಡಿಜಿಲಾಕರ್‌ಗೆ ಅಪ್‌ಲೋಡ್ ಮಾಡಬಹುದು.
- ನೀವು ಈಗಾಗಲೇ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ್ದರೆ, ನಂತರ ನೀವು ಅವುಗಳನ್ನು ಇಲ್ಲಿಂದ ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ- Smartphone Tips: ಸ್ಮಾರ್ಟ್ ಫೋನ್ ಮೂಲಕ ಯಾರಾದರು ನಿಮ್ಮ ಬೆಹುಗಾರಿಕೆ ನಡೆಸುತಿದ್ದಾರೆಯೇ? ಈ ರೀತಿ ಸುಲಭವಾಗಿ ತಿಳಿದುಕೊಳ್ಳಿ

ಈ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು :
ವಾಟ್ಸಾಪ್ ಡಿಜಿಲಾಕರ್ ಸೇವೆಯನ್ನು ಬಳಸಿಕೊಂಡು  ನೀವು ಈಗ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ, ವಿಮೆ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಸಿಬಿಎಸ್ಇ 10-12 ನೇ ಪ್ರಮಾಣಪತ್ರ ಮತ್ತು ಜೀವ ವಿಮೆ ಪ್ರಮಾಣಪತ್ರವನ್ನು  ಡೌನ್‌ಲೋಡ್ ಮಾಡಬಹುದು. 

ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಈಗ ನೀವು ಈ ಪೇಪರ್‌ಗಳನ್ನು ಸದಾ ನಿಮ್ಮೊಂದಿಗೆ ಕೊಂಡೊಯ್ಯಲೇ ಬೇಕು ಎನ್ನುವ ಅಗತ್ಯವಿಲ್ಲ. MyGov Helpdesk ಗೆ ವಾಟ್ಸಾಪ್ ಮೂಲಕ ಸಂದೇಶವನ್ನು ಕಳುಹಿಸುವ ಮೂಲಕ ನೀವು ಯಾವಾಗ ಬೇಕಾದರೂ ಈ ದಾಖಲೆಗಳನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ- Most Replayed ವೈಶಿಷ್ಟ್ಯವನ್ನು ಆರಂಭಿಸಿದ ಯುಟ್ಯೂಬ್

ಸರ್ಕಾರದ ಪ್ರಕಾರ, ಇತ್ತೀಚಿನ ಡಿಜಿಲಾಕರ್ ವೈಶಿಷ್ಟ್ಯದ ಹೊರತಾಗಿ, ವಾಟ್ಸಾಪ್‌ನಲ್ಲಿ MyGov ಚಾಟ್‌ಬಾಟ್ ನಾಗರಿಕರಿಗೆ ಸಂಪನ್ಮೂಲಗಳು ಮತ್ತು ಅಗತ್ಯ ಸೇವೆಗಳನ್ನು ಪ್ರವೇಶಿಸಲು ಸಮಗ್ರ ಆಡಳಿತಾತ್ಮಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಡಿಜಿಲಾಕರ್ ಪ್ಲಾಟ್‌ಫಾರ್ಮ್ ಈಗಾಗಲೇ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು ಇಲ್ಲಿಯವರೆಗೆ 5 ಬಿಲಿಯನ್ ದಾಖಲೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More