Home> Technology
Advertisement

Vodafone Idea 199 ರೂ. ರೀಚಾರ್ಜ್‌ನಲ್ಲಿ ಸಿಗುತ್ತೆ 5GB ಫ್ರೀ ಡೇಟಾ ಪ್ರಯೋಜನ

Vodafone Idea (Vi) Recharge Plan: ನೀವು ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಒದಗಿಸುವ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ವೋಡಾಫೋನ್ ಐಡಿಯಾದ ಈ ರಿಚಾರ್ಜ್ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

Vodafone Idea 199 ರೂ.  ರೀಚಾರ್ಜ್‌ನಲ್ಲಿ ಸಿಗುತ್ತೆ 5GB ಫ್ರೀ ಡೇಟಾ ಪ್ರಯೋಜನ

Vodafone-Idea (Vi) Free Data Benefits Recharge Plan: ವೋಡಾಫೋನ್ ಐಡಿಯಾ ತನ್ನ ಬಳಕೆದಾರರಿಗಾಗಿ ವಿಶೇಷ ರಿಚಾರ್ಜ್ ಪ್ರಯೋಜನವನ್ನು ಪರಿಚಯಿಸಿದೆ. ತನ್ನ ಬಳಕೆದಾರರಿಗೆ ಬಂಪರ್ ಕೊಡುಗೆ ನೀಡಿರುವ ವೋಡಾಫೋನ್ ಐಡಿಯಾ ಟೆಲಿಕಾಂ ಕಂಪನಿ 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಯೋಜನೆಗಳಲ್ಲಿ ಹೆಚ್ಚುವರಿ 5GB ಡೇಟಾ ಪ್ರಯೋಜನವನ್ನು ನೀಡಲಿದೆ. 

ಹೌದು, ನೀವು ವೋಡಾಫೋನ್ ಐಡಿಯಾ ಬಳಕೆದಾರರಾಗಿದ್ದರೆ 199 ರೂ. ಅಥವಾ ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡುವ ಮೂಲಕ 5GB ಹೆಚ್ಚುವರಿ ಡೇಟಾವನ್ನು ಉಚಿತವಾಗಿ ಪಡೆಯಬಹುದಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಇದು ಸೀಮಿತ ಅವಧಿಯ ಯೋಜನೆ ಆಗಿದ್ದರೂ ಕೂಡ ಕಂಪನಿ ಇದರ ಮುಕ್ತಾಯದ ದಿನಾಂಕದ ಬಗ್ಗೆ ಇನ್ನೂ ಸಹ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. 

ವಾಸ್ತವವಾಗಿ, ವೋಡಾಫೋನ್ ಐಡಿಯಾ (ವಿಐ) ಕಂಪನಿಯು ತನ್ನ ಗ್ರಾಹಕರಿಗಾಗಿ ಇಂತಹ ಬ್ಯಾಂಗ್ ಕೊಡುಗೆಯನ್ನು ನೀಡುತ್ತಿರುವುದು ಇದೇ ಮೊದಳೇನಲ್ಲ. ಈ ಮೊದಲೂ ಕೂಡ ವೋಡಾಫೋನ್ ಐಡಿಯಾ (ವಿಐ)  ಕೆಲವು ವಿಶೇಷ ದಿನಗಳ ಸಂದರ್ಭದಲ್ಲಿ ಇಂತಹ ಹಲವು ಕೊಡುಗೆಗಳನ್ನು ಪರಿಚಯಿಸಿತ್ತು. ಇದೀಗ ರೀಚಾರ್ಜ್ ಯೋಜನೆಯಲ್ಲಿ ನೀಡಲಾಗುತ್ತಿರುವ 5ಜಿಬಿ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ... 

ಇದನ್ನೂ ಓದಿ- ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!

Vi 199 ರೂ. &  ಅದಕ್ಕಿಂತ ಹೆಚ್ಚಿನ  ರೀಚಾರ್ಜ್‌ನಲ್ಲಿ ಸಿಗಲಿದೆ ಹೆಚ್ಚುವರಿ 5GB ಡೇಟಾ ಪ್ರಯೋಜನ! ಅದನ್ನು ಈ ರೀತಿ ಪಡೆಯಿರಿ: 
ಮೊದಲೇ ತಿಳಿಸಿದಂತೆ  ವೋಡಾಫೋನ್ ಐಡಿಯಾ (ವಿಐ) 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ರಿಚಾರ್ಜ್ ಮಾಡುವ ಬಳಕೆದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದೆ. Vi ಈ ರೀಚಾರ್ಜ್ ಯೋಜನೆಗಳನ್ನು ಮಹಾ ರೀಚಾರ್ಜ್ ಎಂದು ಹೆಸರಿಸಿದೆ.

ವೋಡಾಫೋನ್ ಐಡಿಯಾ (ವಿಐ)  199 ರೂ. ಮತ್ತು 299 ರೂ. ಗಳ ನಡುವೆಯ ರೀಚಾರ್ಜ್ ಯೋಜನೆಗಳಲ್ಲಿ ಬಳಕೆದಾರರಿಗೆ  2GB ಹೆಚ್ಚುವರಿ ಫ್ರೀ ಡೇಟಾ ಪ್ರಯೋಜನ ಲಭ್ಯವಾಗಿದೆ. ಅಂತೆಯೇ,  299 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಹೆಚ್ಚುವರಿಯಾಗಿ 5ಜಿಬಿ ಡೇಟಾವನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ.  ಗಮನಾರ್ಹವಾಗಿ ಈ ಎರಡೂ ಹೆಚ್ಚುವರಿ ಡೇಟಾ ಪ್ರಯೋಜನಗಳ ಮಾನ್ಯತೆ ಮೂರು ದಿನಗಳವರೆಗೆ ಮಾತ್ರ ಇರಲಿದೆ. 

ವೋಡಾಫೋನ್ ಐಡಿಯಾ (ವಿಐ) ಮಾಹಿತಿಯ ಪ್ರಕಾರ, ಬಳಕೆದಾರರು i ಅಪ್ಲಿಕೇಶನ್‌ಗಳಲ್ಲಿ ಕ್ರಿಕೆಟ್ ವೀಕ್ಷಿಸಲು, ಚಲನಚಿತ್ರಗಳನ್ನು ವೀಕ್ಷಿಸಲು, ವೀಡಿಯೊಗಳನ್ನು ವೀಕ್ಷಿಸಲು, ಸಂಗೀತವನ್ನು ಆಲಿಸಲು ಇತ್ಯಾದಿ ಮನರಂಜನೆಗಳಿಗಾಗಿ ಈ ಹೆಚ್ಚುವರಿ ಡೇಟಾವನ್ನು ಬಳಸಬಹುದು ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಪಾಕಿಸ್ತಾನಿ ಭಯೋತ್ಪಾದಕರ ಮೇಲೆ 'ಡಿಜಿಟಲ್ ಸ್ಟ್ರೈಕ್' 14 ಮೊಬೈಲ್ ಅಪ್ಲಿಕೇಶನ್‌ಗಳು ಬ್ಯಾನ್

ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ, ನೀವು Vi20FANfest ಚಾಲೆಂಜ್‌ನಲ್ಲಿ ಸಹ ಪಾಲ್ಗೊಳ್ಳಬಹುದು. ಇದರಲ್ಲಿ ನಿತ್ಯ ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶವಿದ್ದು ಅದೃಷ್ಟ ವಿಜೇತರಿಗೆ  T20 ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಎರಡು ಟಿಕೆಟ್‌ಗಳನ್ನು ಪಡೆಯುವ ಅವಕಾಶವೂ ಲಭ್ಯವಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More