Home> Sports
Advertisement

21 ದಿನಗಳಲ್ಲಿ ಎರಡು ಬಾರಿ ಮುರಿಯಿತು ಯುವರಾಜ್ ಸಿಂಗ್ ಈ ದಾಖಲೆ ! ರೆಕಾರ್ಡ್ ಬ್ರೇಕ್ ಮಾಡಿದ ಆಟಗಾರರು ಇವರೇ !

Fastest Fifty Record in T20 : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇನ್ನೂ ಯುವಿ ಹೆಸರಿನಲ್ಲಿದೆ. ಈ ಮಧ್ಯೆ, ಅವರ ಒಂದು ದಾಖಲೆಯು 21 ದಿನಗಳಲ್ಲಿ ಎರಡು ಬಾರಿ ಮುರಿದಿದೆ.
 

21 ದಿನಗಳಲ್ಲಿ ಎರಡು ಬಾರಿ ಮುರಿಯಿತು ಯುವರಾಜ್ ಸಿಂಗ್ ಈ ದಾಖಲೆ ! ರೆಕಾರ್ಡ್  ಬ್ರೇಕ್ ಮಾಡಿದ ಆಟಗಾರರು ಇವರೇ !

Fastest Fifty Record in T20 : ಭಾರತದ  ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಕ್ರಿಕೆಟ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಯುವಿ ಬೃಹತ್ ದಾಖಲೆ  ಬರೆದಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇನ್ನೂ ಯುವಿ ಹೆಸರಿನಲ್ಲಿದೆ. ಈ ಮಧ್ಯೆ, ಅವರ ಒಂದು ದಾಖಲೆಯು 21 ದಿನಗಳಲ್ಲಿ ಎರಡು ಬಾರಿ ಮುರಿದಿದೆ.

21 ದಿನಗಳಲ್ಲಿ ಎರಡು ಬಾರಿ ದಾಖಲೆ  ಬ್ರೇಕ್ : 

ಯುವರಾಜ್ 2007ರ ಟಿ20 ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆ ವೇಳೆ, ಇಂಗ್ಲೆಂಡ್‌ನ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇದೀಗ 16 ವರ್ಷಗಳ ಬಳಿಕ ಯುವರಾಜ್ ದಾಖಲೆಯನ್ನು ಮುರಿಯಲಾಗಿದೆ.  ಅತಿ ವೇಗದಲ್ಲಿ ಅರ್ಧಶತಕ ಪೂರೈಸಿದ ದಾಖಲೆಯನ್ನು ಮೊದಲು ನೇಪಾಳದ ದೀಪೇಂದ್ರ ಸಿಂಗ್  ಮುರಿದರೆ, ಇದಾದ ಬಳಿಕ ಅಶುತೋಷ್ ಶರ್ಮಾ ಕೂಡಾ ಈ ಸಾಲಿಗೆ ಸೇರಿಕೊಂಡಿದ್ದಾರೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಶುತೋಷ್ ಈ ಸಾಧನೆ ಮಾಡಿದ್ದಾರೆ. 

ಇದನ್ನೂ ಓದಿ : ಭಾರತದ ವಿರುದ್ಧ ಹೀನಾಯ ಸೋಲು: ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿಯಿಂದ ದೂರು!

9 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದೀಪೇಂದ್ರ  : 
ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 27 ರಂದು ನಡೆದ ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ 5ನೇ ಸ್ಥಾನದಲ್ಲಿ ಬಂದು 10 ಎಸೆತಗಳಲ್ಲಿ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 52 ರನ್ ಗಳಿಸಿ ಅಜೇಯರಾಗಿ ಉಳಿದರು. 

ಅಬ್ಬರಿಸಿದ ಅಶುತೋಷ್ : 
ಇದೀಗ ನಿನ್ನೆ ನಡೆದ ಟಿ20 ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್ ನಲ್ಲಿ  ಅಶುತೋಷ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. . ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ರೈಲ್ವೇಸ್ ಪ್ರತಿನಿಧಿಸುತ್ತಿರುವ  25 ವರ್ಷದ ಅಶುತೋಷ್ 12 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಅವಧಿಯಲ್ಲಿ 442 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಅವರು 1 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. 

ಇದನ್ನೂ ಓದಿ : ಬಾಂಗ್ಲಾ ವಿರುದ್ದ ರೋಹಿತ್ ಜೊತೆ ಓಪನಿಂಗ್ ಮಾಡುವವರು ಇವರೇ ! ಈ ಬ್ಯಾಟ್ಸ್ ಮ್ಯಾನ್ ತಂಡದಿಂದ ಔಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Read More