Home> Sports
Advertisement

WPL 2024 DCW vs RCBW: ಹೆಣ್ಮಕ್ಳೆ ಸ್ಟ್ರಾಂಗು ಗುರು, RCBಗೆ ಕೊನೆಗೂ ಸಿಕ್ತು ಕಪ್‌ ಗುರು!

Womens Premier League 2024: ಭಾನುವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಕಪ್‌ ಎತ್ತಿಹಿಡಿದಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

WPL 2024 DCW vs RCBW: ಹೆಣ್ಮಕ್ಳೆ ಸ್ಟ್ರಾಂಗು ಗುರು, RCBಗೆ ಕೊನೆಗೂ ಸಿಕ್ತು ಕಪ್‌ ಗುರು!

Womens Premier League 2024: ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಕಪ್‌ ಎತ್ತಿಹಿಡಿದಿದೆ.

114 ರನ್‌ಗಳ ಸುಲಭ ಗುರಿ ಬೆನ್ನತ್ತಿದ RCB ಕೇವಲ 2 ವಿಕೆಟ್‌ ಕಳೆದುಕೊಂಡು ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಅಭಿಮಾನಿಗಳ ಬಹುವರ್ಷದ ಕನಸನ್ನು ಆರ್‌ಸಿಬಿ ಮಹಿಳೆಯರು ನನಸು ಮಾಡಿದ್ದಾರೆ. 8 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ RCB ಮಹಿಳೆಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆರಂಭಿಕ ಆಟಗಾರ್ತಿಯರಾದ ನಾಯಕಿ ಸ್ಮೃತಿ ಮಂಧಾನ(31), ಸೋಫಿ ಡಿವೈನ್(32) ಮೊದಲ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದರು. ಎಲ್ಲಿಸ್ ಪೆರ್ರಿ ಅಜೇಯ 35 ಮತ್ತು ರಿಚಾ ಘೋಷ್ (17) ರನ್‌ ಗಳಿಸುವ ಮೂಲಕ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. 

ತವರು ನೆಲದಲ್ಲಿ ಬಲಿಷ್ಠ ದೆಹಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿಯುವ ಮೂಲಕ RCB ಮಹಿಳೆಯರು ಮಹತ್ತರ ಸಾಧನೆ ಮಾಡಿದ್ದಾರೆ. ಪುರುಷರೂ ಮಾಡದ ದೊಡ್ಡ ಸಾಧನೆಯನ್ನು ಮಾಡುವ ಮೂಲಕ RCB ವನಿತೆಯರು ʼಈ ಸಲ ಕಪ್‌ ನಮ್ದೆʼ ಅನ್ನೋದನ್ನು ಪ್ರೂವ್‌ ಮಾಡಿದ್ದಾರೆ. 

ಇದನ್ನೂ ಓದಿ: IPL 2024: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾನೆ ಈ ವಿಧ್ವಂಸಕ ಬ್ಯಾಟ್ಸ್ ಮನ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದಾನೆ!

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ RCB ಬೌಲಿಂಗ್‌ ದಾಳಿಗೆ ನಲುಗಿ 18.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 113 ಆಲೌಟ್‌ ಆಯಿತು. ಡೆಲ್ಲಿ ಪರ ಶಫಾಲಿ ವರ್ಮಾ(44), ಮೆಗ್ ಲ್ಯಾನಿಂಗ್(23) ಮತ್ತು ರಾಧಾ ಯಾದವ್(12)‌ ರನ್‌ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರ್ತಿಯೂ ಹೆಚ್ಚುಹೊತ್ತು ನಿಂತು ಆಡಲಿಲ್ಲ.

RCB ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಶ್ರೇಯಾಂಕಾ ಪಾಟೀಲ್‌(12ಕ್ಕೆ 4), ಸೋಫಿ ಮೊಲಿನೆಕ್ಸ್(20ಕ್ಕೆ 3) ಮತ್ತು ಆಶಾ ಸೋಭಾನ(14ಕ್ಕೆ 2) ಡೆಲ್ಲಿ ಬ್ಯಾಟಿಂಗ್‌ ಬಲವನ್ನೇ ಮುರಿದುಹಾಕಿದರು. ಪರಿಣಾಮ ಅಲ್ಪಮೊತ್ತಕ್ಕೆ ಡೆಲ್ಲಿ ಆಲೌಟ್‌ ಆಗಬೇಕಾಯಿತು.

ಇದನ್ನೂ ಓದಿ: ಭಾರತಕ್ಕೆ ಕೊಹ್ಲಿ ವಾಪಾಸ್ : ಶೀಘ್ರದಲ್ಲೇ RCB ತಂಡದ ಪೂರ್ವ ಸಿದ್ಧತಾ ಕ್ಯಾಂಪ್ ಗೆ ಸೇರ್ಪಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More