Home> World Cup 2023
Advertisement

World Cup 2023 Final: ಭಾರತದ ಈ ಕ್ರಿಕೆಟ್ ದಿಗ್ಗಜನ ಮಾತು ರೋಹಿತ್ ಪಡೆ ಕೇಳಿದರೆ ಗೆಲುವು ಪಕ್ಕಾ ನಮ್ದೆ!

World Cup 2023 Final Ind Vs Aus: ಐಸಿಸಿ ಏಕದಿನ ವಿಶ್ವಕಪ್ 2023 ರ ಫೈನಲ್‌ಗೆ ಸಂಬಂಧಿಸಿದಂತೆ, ಮಾಜಿ ಕೋಚ್ ರವಿಶಾಸ್ತ್ರಿ ಟೀಮ್ ಇಂಡಿಯಾಕ್ಕೆ ಮೊದಲ 10 ಓವರ್‌ಗಳು ತುಂಬಾ ಮುಖ್ಯ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಯಾವುದೇ ತಂಡವು ಗೆಲುವು ಮತ್ತು ಸೋಲಿನತ್ತ ಸಾಗುತ್ತದೆ. (World Cup 2023 Final News In Kannada)
 

World Cup 2023 Final: ಭಾರತದ ಈ ಕ್ರಿಕೆಟ್ ದಿಗ್ಗಜನ ಮಾತು ರೋಹಿತ್ ಪಡೆ ಕೇಳಿದರೆ ಗೆಲುವು ಪಕ್ಕಾ ನಮ್ದೆ!

ಅಹಮದಾಬಾದ್: 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ನವೆಂಬರ್ 19 ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಟೂರ್ನಿಯುದ್ದಕ್ಕೂ ಟೀಂ ಇಂಡಿಯ ಸ್ಫೋಟಕ ಆಟ ಪ್ರದರ್ಶಿಸಿದೆ. ಲೀಗ್ ಹಂತದಿಂದಲೂ ಅಜೇಯವಾಗಿ ಟೀಮ್ ಇಂಡಿಯಾ ಮುಂದಕ್ಕೆ ದಾಪುಗಾಲು ಇಟ್ಟಿದೆ. ಇದಲ್ಲದೇ, ಕೆಟ್ಟ ಆರಂಭದ ಬಳಿಕ ಆಸ್ಟ್ರೇಲಿಯಾ ತಂಡ ಕಮ್ ಬ್ಯಾಕ್ ಮಾಡಿದ ರೀತಿ ಕೂಡ ಶ್ಲಾಘನೀಯವಾಗಿದೆ. (World Cup 2023 Final News In Kannada)

ಈಗ ಎರಡು ತಂಡಗಳು ಫೈನಲ್‌ನಲ್ಲಿ ಪೈಪೋಟಿಗೆ ಇಳಿಯಲಿವೆ. ಲೀಗ್ ಹಂತದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಣಾಹಣಿ ಚೆನ್ನೈನಲ್ಲಿ ನಡೆದಿತ್ತು. ಹೀಗಿರುವಾಗ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಫೈನಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ ಅವರು ಎರಡೂ ತಂಡಗಳ ಮೊದಲ 10 ಓವರ್‌ಗಳು ಫೈನಲ್‌ನಲ್ಲಿ ಗೆಲುವು ಅಥವಾ ಸೋಲನ್ನು ನಿರ್ಧರಿಸುತ್ತವೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ 'ಪಂದ್ಯದ ಮೊದಲ 10 ಓವರ್‌ಗಳು ತುಂಬಾ ಮುಖ್ಯ ಸಾಬೀತಾಗುತ್ತವೆ ಎಂಬುದು ನನ್ನ ಅನಿಸಿಕೆ. ಈ ಓವರ್‌ಗಳಲ್ಲಿ ಭಾರತಕ್ಕೆ ಸ್ಫೋಟಕ ಆರಂಭದ ಅಗತ್ಯವಿದೆ. ಅದರಲ್ಲೂ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿಯಲ್ಲಿಯೇ ಮುಂದುವರಿಯಬೇಕಿದೆ. ಆಸ್ಟ್ರೇಲಿಯದಲ್ಲೂ ಇದೇ ರೀತಿಯ ಘಟನೆ ನಡೆಯಬೇಕು. ಮೊದಲ 10 ಓವರ್‌ಗಳಲ್ಲಿ ಉತ್ತಮ ಆಟವಾಡಿದರೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಅವರ ತಂಡದಲ್ಲಿ ಅತ್ಯಂತ ಅಪಾಯಕಾರಿ ಆಟಗಾರರಾಗಿದ್ದಾರೆ.

ಇದನ್ನೂ ಓದಿ-ICC World Cup 2003 ಮತ್ತು 2023 ಫೈನಲ್ ಪಂದ್ಯಗಳ ನಡುವೆ ಅದ್ಭುತ ಹೋಲಿಕೆ, ಭಾರತ ಚಾಂಪಿಯನ್ ಆಗುವುದು ಪಕ್ಕಾ!

ಇದಲ್ಲದೇ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆಯೂ ಕೂಡ ರವಿಶಾಸ್ತ್ರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, 'ವಿರಾಟ್ ತನ್ನ ಕಥೆಯನ್ನು ತಾನೇ ಬರೆಯುತ್ತಿದ್ದಾರೆ. ಪ್ರಸ್ತುತ ಅವರು ಇರುವ ಫಾರ್ಮ್ ನೋಡಿದರೆ. ಅವರ ಬ್ಯಾಟ್‌ನಿಂದ ಮತ್ತೊಂದು ಶತಕ ಬಂದರೂ ಅಚ್ಚರಿಪಡಬೇಕಿಲ್ಲ. ಅವರು ಅದನ್ನು ಸೆಮಿಫೈನಲ್‌ನಲ್ಲಿ ತೋರಿಸಿದ್ದಾರೆ ಮತ್ತು ಅದು ಫೈನಲ್‌ನಲ್ಲಿಯೂ ತೋರಿಸಲಿದ್ದಾರೆ ಮತ್ತು ಅದಕ್ಕಿಂತ ದೊಡ್ಡದು ಯಾವುದು ಇರದು.

ಇದನ್ನೂ ಓದಿ-ICC World Cup 2023 Final ಕುರಿತು ಜೋತಿಷ್ಯ ಪಂಡಿತರು ನುಡಿದ ಭವಿಷ್ಯವಾಣಿ ಇಲ್ಲಿದೆ! ಈ ತಂಡ ಗೆಲ್ಲುತ್ತಂತೆ!

ಫೈನಲ್‌ಗೆ ಮುನ್ನ ಬೌಲಿಂಗ್ ಡಿಪಾರ್ಟ್ಮೆಂಟ್ ಕುರಿತು ಮಾತನಾಡಿರುವ ರವಿಶಾಸ್ತ್ರಿ, 'ಪ್ರಸ್ತುತ ನಮ್ಮ ತಂಡ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ. ಇದಲ್ಲದೇ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ರೂಪದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳೂ ಇದ್ದಾರೆ. ಈ ಕಾರಣಕ್ಕಾಗಿಯೇ ನಾವು ಬೌಲಿಂಗ್‌ನಲ್ಲಿ ಉತ್ತಮ ವೈವಿಧ್ಯತೆಯನ್ನು ಹೊಂದಿದ್ದೇವೆ ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More