Home> World Cup 2023
Advertisement

'ಸೆಮಿಫೈನಲ್‌ನಲ್ಲಿ ಶಮಿ 7 ವಿಕೆಟ್‌ಗಳನ್ನು ಪಡೆದ ಕನಸನ್ನು ಕಂಡೆ', ಸೆಮಿಫೈನಲ್ ಪಂದ್ಯಕ್ಕೂ ಮುನ್ನ ವ್ಯಕ್ತಿಯೋರ್ವ ನುಡಿದಿದ್ದ ಭವಿಷ್ಯವಾಣಿ ವೈರಲ್!

Viral World Cup 2023 Dream: ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬನ ಕನಸು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 'X' ವೇದಿಕೆಯಲ್ಲಿ, 2023 ರ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಕ್ಕೆ ಒಂದು ದಿನ ಮೊದಲು, ''ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ 7 ವಿಕೆಟ್‌ಗಳನ್ನು ಕಬಳಿಸಲಿದ್ದಾರೆ ಎಂಬ ಕನಸು ಬಿದ್ದಿದೆ'  ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. (World Cup 2023 News In Kannada)

'ಸೆಮಿಫೈನಲ್‌ನಲ್ಲಿ ಶಮಿ 7 ವಿಕೆಟ್‌ಗಳನ್ನು ಪಡೆದ ಕನಸನ್ನು ಕಂಡೆ', ಸೆಮಿಫೈನಲ್ ಪಂದ್ಯಕ್ಕೂ ಮುನ್ನ ವ್ಯಕ್ತಿಯೋರ್ವ ನುಡಿದಿದ್ದ ಭವಿಷ್ಯವಾಣಿ ವೈರಲ್!

ಬೆಂಗಳೂರು: 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬುಧವಾರ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಬಹುತೇಕ ಎಲ್ಲಾ ಆಟಗಾರರ ಪ್ರದರ್ಶನ ಉತ್ತಮವಾಗಿದ್ದರೂ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಲ್ವರು ಭಾರತೀಯ ಆಟಗಾರರು ಇದ್ದರು. ಈ ಆ ಆಟಗಾರರೆಂದರೆ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ. ಅದರಲ್ಲಿಯೂ ಮೊಹಮ್ಮದ್ ಶಮಿ ಅತ್ಯಂತ ಪ್ರಭಾವಿ ಬೌಲಿಂಗ್ ನಿಂದ ತಂಡವು ನ್ಯೂಜಿಲೆಂಡ್ ತಂಡವನ್ನು ಭಾರಿ ಅಂತರದಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಶಮಿ ಒಟ್ಟು ಏಳು ವಿಕೆಟ್ ಪಡೆದಿದ್ದಾರೆ. ಏತನ್ಮಧ್ಯೆ, ಸೆಮಿಫೈನಲ್‌ಗೂ ಮುನ್ನ ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್‌ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ತನ್ನ ಟ್ವೀಟ್ ನಲ್ಲಿ ಆ ವ್ಯಕ್ತಿ ಶಮಿ 7 ವಿಕೆಟ್‌ ಕಬಳಿಸುವ ಮುನ್ಸೂಚನೆ ನೀಡಿದ್ದರು. (World Cup 2023 News In Kannada)

ಇದನ್ನೂ ಓದಿ-'ಆತ ಒಳ್ಳೆಯ ಕ್ರಿಕೇಟರ್... ಒಳ್ಳೆಯ ವ್ಯಕ್ತಿಯಾಗಿರಬೇಕಿತ್ತು...' ಶಮಿ ಕುರಿತು ಹಸೀನ್ ಜಹಾ ಹೇಳಿದ್ದೇನು?

ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ 'X' ನಲ್ಲಿ  @DonMateo_X14 ಎಂಬ ಹೆಸರಿನ ಬಳಕೆದಾರರು ನವೆಂಬರ್ 14 ರಂದು ಟ್ವೀಟ್ ಮಾಡಿ 'ಸೆಮಿಫೈನಲ್‌ನಲ್ಲಿ ಶಮಿ 7 ವಿಕೆಟ್‌ಗಳನ್ನು ಪಡೆದ ಕನಸನ್ನು ಕಂಡೆ' ಎಂದು ಬರೆದುಕೊಂಡಿದ್ದಾರೆ. ಶಮಿ 7 ವಿಕೆಟ್ ಕಬಳಿಸುವ ಕನಸು ಕಂಡಿದ್ದಾರೋ ಇಲ್ಲವೋ ಎಂಬುದು ಇದೀಗ ಆ ವ್ಯಕ್ತಿಯೇ ಹೇಳಬೇಕು, ಆದರೆ ಸೆಮಿಫೈನಲ್ ನಲ್ಲಿ ಶಮಿ ಒಟ್ಟು ಏಳು ವಿಕೆಟ್ ಗಳನ್ನ ಕಬಳಿಸಿದ್ದು ಮಾತ್ರ ನಿಜ. ಇದೀಗ ಆ ಬಳಕೆದಾರಣೆ ಈ ಟ್ವೀಟ್ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ. ಲಕ್ಷಾಂತರ ಜನರು ಅದನ್ನು ನೋಡುತ್ತಿದ್ದಾರೆ ಮತ್ತು ಸ್ವಾರಸ್ಯಕರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 'ನನ್ನ ಭವಿಷ್ಯವನ್ನೂ ಹೇಳು' ಎಂದು ಯಾರೋ ಕೇಳುತ್ತಿದ್ದರೆ, 'ಫೈನಲ್‌ಗೂ ಮುನ್ನ ಚೆನ್ನಾಗಿ ನಿದ್ದೆ ಮಾಡಿ' ಎಂದು ಮತ್ತೊಬ್ಬರು ಹೇಳುತ್ತಿದ್ದಾರೆ. ಮೂರನೇ ಬಳಕೆದಾರ 'ಭಾಯ್... ನಾವು ವಿಶ್ವ ಕಪ್ ಗೆಲ್ಲುತ್ತೇವೆ ಎಂಬ ಕನಸನ್ನು ಕೂಡ ನೋಡು' ಎಂದು ಬರೆದಿದ್ದಾರೆ. 

ಇದನ್ನೂ ಓದಿ-'ಶಮಿ ಕಬಾಬ್ ಬ್ಯಾನ್...' ಬಾಲಿವುಡ್ ನಟನ ಬ್ರೇಕಿಂಗ್ ನ್ಯೂಸ್ ಗೆ ವೇಗಿ ನೀಡಿದ ರಿಯಾಕ್ಷನ್ ವೈರಲ್!

ಟ್ವೀಟ್ ಮತ್ತು ಜನರ ತಮಾಷೆಯಿಂದ ಕೂಡಿದ ಟ್ವೀಟ್ ಇಲ್ಲಿ ನೋಡಿ

ವಿಶ್ವಕಪ್ ಫೈನಲ್ ಯಾವಾಗ?
ವಿಶ್ವಕಪ್‌ನ ಅಂತಿಮ ಪಂದ್ಯ ನವೆಂಬರ್ 19 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇದೀಗ ಜನರು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಈ ಬಾರಿಯ ವಿಶ್ವಕಪ್ ಭಾರತಕ್ಕೆ ಬರಲಿದೆ ಎಂದು ಭಾರತೀಯ ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More