Home> World Cup 2023
Advertisement

ವಿಶ್ವಕಪ್’ನಲ್ಲಿ ಶಮಿ ಪ್ರದರ್ಶನ ಹೇಗಿತ್ತು?- ಪತ್ರಕರ್ತ ಕೇಳಿದ ಪ್ರಶ್ನೆಗೆ ಪತ್ನಿ ಹಸಿನ್ ಜಹಾನ್ ಕೊಟ್ಟ ಉತ್ತರ ಹೀಗಿದೆ…

Hasin Jahan Statement About Mohammed Shami: ಮೊಹಮ್ಮದ್ ಶಮಿ ಕಳೆದ 3 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಅವರ ಪ್ರದರ್ಶನದಿಂದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಆದರೆ ಶಮಿ ಪತ್ನಿ ಹಸಿನ್ ಜಹಾನ್ ಅವರು ಮಾತ್ರ ಇಂತಾ ಹೇಳಿಕೆ ಕೊಟ್ಟಿದ್ದಾರೆ.

ವಿಶ್ವಕಪ್’ನಲ್ಲಿ ಶಮಿ ಪ್ರದರ್ಶನ ಹೇಗಿತ್ತು?- ಪತ್ರಕರ್ತ ಕೇಳಿದ ಪ್ರಶ್ನೆಗೆ ಪತ್ನಿ ಹಸಿನ್ ಜಹಾನ್ ಕೊಟ್ಟ ಉತ್ತರ ಹೀಗಿದೆ…

Hasin Jahan reaction: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರ ವೈವಾಹಿಕ ಬದುಕು ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಶಮಿ ಅವರ ಪತ್ನಿ ಹಸಿನ್ ಜಹಾನ್ ಸಲ್ಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಕೋಲ್ಕತ್ತಾದ ಅಲಿಪೋರ್ ಕೋರ್ಟ್ ಶಮಿಗೆ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಶಮಿ ಸದ್ಯ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ: 2024ರ ವರ್ಷಾರಂಭದಲ್ಲಿ ಲಕ್ಷಾಧಿಪತಿ ಯೋಗ: ಈ ರಾಶಿಯವರ ಕೈಹಿಡಿಯುವಳು ಅದೃಷ್ಟಲಕ್ಷ್ಮೀ- ಮುಂದಿನ 18 ತಿಂಗಳು ಸಂಪತ್ತಿನ ಸುರಿಮಳೆ

ಮೊಹಮ್ಮದ್ ಶಮಿ ಕಳೆದ 3 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಅವರ ಪ್ರದರ್ಶನದಿಂದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಆದರೆ ಶಮಿ ಪತ್ನಿ ಹಸಿನ್ ಜಹಾನ್ ಅವರು ಮಾತ್ರ ಇಂತಾ ಹೇಳಿಕೆ ಕೊಟ್ಟಿದ್ದಾರೆ.

ಹಸಿನ್ ಜಹಾನ್ ಹೇಳಿದ್ದೇನು?

“ನಾನು ಎಂದಿಗೂ ಕ್ರಿಕೆಟ್ ನೋಡುವುದಿಲ್ಲ. ಹಾಗಾಗಿ ನಾನು ಯಾವುದೇ ಕ್ರಿಕೆಟಿಗರ ಅಭಿಮಾನಿಯೂ ಅಲ್ಲ, ಕ್ರಿಕೆಟ್ ಅಭಿಮಾನಿಯೂ ಅಲ್ಲ. ಅವರು ಎಷ್ಟು ವಿಕೆಟ್ ಪಡೆದರು ಎಂಬುದು ನನಗೆ ತಿಳಿದಿಲ್ಲ. ಅವರು ಉತ್ತಮವಾಗಿ ಆಡುತ್ತಿದ್ದಾರೆ, ಆದ್ದರಿಂದ ಅವರು ತಂಡದಲ್ಲಿ ಉಳಿಯುತ್ತಾರೆ. ಹಾಗಾಗಿ ಆತನ ಸಂಪಾದನೆಯೂ ಚೆನ್ನಾಗಿರುವುದರಿಂದ ಭವಿಷ್ಯ ಸುಭದ್ರವಾಗಿರುತ್ತದೆ. ನಾನು ಟೀಂ ಇಂಡಿಯಾಗೆ ಶುಭ ಹಾರೈಸುತ್ತೇನೆ, ಆದರೆ ಆತನಿಗೆ ಶುಭ ಹಾರೈಸುವುದಿಲ್ಲ” ಎಂದು ಹಸಿನ್ ಜಹಾನ್ ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಸೊಪ್ಪಿನ ನೀರನ್ನು ಕುಡಿದರೆ ಒಂದೇ ವಾರದಲ್ಲಿ ಇಳಿಯುತ್ತೆ ಸೊಂಟದ ಬೊಜ್ಜು

“ಮೊಹಮ್ಮದ್ ಶಮಿ ನನ್ನನ್ನು ಯಾವುದೇ ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲ. ಯಾವಾಗಲೂ ನನ್ನನ್ನು ಒತ್ತಡದಲ್ಲಿ ಇಡುತ್ತಿದ್ದರು. ಅದಕ್ಕೆ ನಾನು ಅವನೊಂದಿಗೆ ಜಗಳವಾಡಿದೆ. ಇಡೀಗ ಜೀವನದಲ್ಲಿ 3 ಅಥವಾ 4 ಹೊರಗಡೆ ಸುತ್ತಾಡಲು ಹೋಗಿದ್ದೆವು. ಆದರೆ, ಅಲ್ಲಿಯೂ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ನನ್ನೊಂದಿಗೆ ಜಗಳ ಮಾಡಿ, ನನ್ನನ್ನು ಕೋಣೆಯಲ್ಲಿ ಕಟ್ಟಿಹಾಕಲಾಯಿತು. ಅದೇ ಸಂದರ್ಭದಲ್ಲಿ ಹಸಿನ್ ಜೊತೆ ಯಾರೂ ಮಾತನಾಡಬಾರದು ಎಂದು ಆಟಗಾರರ ಪತ್ನಿಯರಿಗೆ ಬಿಸಿಸಿಐ ಹೇಳಿತ್ತು. ಆದರೆ ನಾನು ಯಾವುದೇ ಆಟಗಾರನ ಪತ್ನಿಯನ್ನು ಸಂಪರ್ಕಿಸಿಲ್ಲ” ಎಂದು ಹಸಿನ್ ಜಹಾನ್ ಉತ್ತರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More