Home> Sports
Advertisement

Wimebledon 2023: ನೊವಾಕ್ ಜೊಕೊವಿಕ್ ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕಾರಝ್

ಕಾರ್ಲೋಸ್ ಅಲ್ಕಾರಝ್ ಭಾನುವಾರದಂದು ನಡೆದ ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕಾರಝ್ 1-6, 7-6 (8/6), 6-1, 3-6, 6-4 ಗೇಮ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 Wimebledon 2023: ನೊವಾಕ್ ಜೊಕೊವಿಕ್ ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕಾರಝ್

ಲಂಡನ್ : ಕಾರ್ಲೋಸ್ ಅಲ್ಕಾರಝ್ ಭಾನುವಾರದಂದು ನಡೆದ ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕಾರಝ್ 1-6, 7-6 (8/6), 6-1, 3-6, 6-4 ಗೇಮ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದ ಆರಂಭದಲ್ಲಿ ಜೊಕೊವಿಕ್ ಅವರು ಮೊದಲ ಸೆಟ್‌ನಲ್ಲಿ 6-1 ರಿಂದ ಮುನ್ನಡೆ ಸಾಧಿಸಿದರು.ಟೈಬ್ರೇಕರ್‌ನ ಎರಡನೇ ಸೆಟ್‌ನಲ್ಲಿ ಅಲ್ಕರಾಜ್ ತಿರುಗೇಟು ನೀಡಿದರು.ವಿಶ್ವ ನಂಬರ್ 1 ಆಟಗಾರನಾಗಿರುವ ಅಲ್ಕರಾಜ್ 7-6 (8/6) ರಿಂದ ಗೆಲುವು ಸಾಧಿಸಿದರು.ತಮ್ಮ ಪ್ರಾಬಲ್ಯವನ್ನು ಮುಂದುವರಿಸಿಸುವ ಮೂಲಕ ಅವರು ಮೂರನೇ ಸೆಟ್ ಅನ್ನು 6-1 ರಿಂದ ತಮ್ಮದಾಗಿಸಿಕೊಂಡರು. 

ಆದಾಗ್ಯೂ, ಜೊಕೊವಿಕ್ ಕೂಡ ಗಮನಾರ್ಹವಾದ ಪುನರಾಗಮನವನ್ನು ಮಾಡಿ ನಾಲ್ಕನೇ ಸೆಟ್‌ನಲ್ಲಿ 6-3 ಗೆಲುವು ಸಾಧಿಸುವುದರೊಂದಿಗೆ ಪಂದ್ಯವನ್ನು ಅಂತಿಮ ಸೆಟ್‌ಗೆ ಕೊಂಡೊಯ್ದರು. ಆದರೆ ಅಲ್ಕರಾಜ್ ಅಂತಿಮ ಸೆಟ್‌ನಲ್ಲಿ ಜೊಕೊವಿಕ್‌ ವಿರುದ್ಧ ಮುನ್ನಡೆ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More