Home> Sports
Advertisement

Suresh Raina Retire : ಈ ಋತುವಿನ ನಂತರ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆಯೇ ಸುರೇಶ್ ರೈನಾ ?

ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ ಐಪಿಎಲ್ 2021 ರಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್‌ನಿಂದ ಅವರನ್ನು ಕೈಬಿಡುವಂತೆ ಸಂಜಯ್ ಮಂಜ್ರೇಕರ್ ಒತ್ತಾಯಿಸಿದ್ದಾರೆ.
 

Suresh Raina Retire : ಈ ಋತುವಿನ ನಂತರ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆಯೇ ಸುರೇಶ್ ರೈನಾ ?

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್‌ನ ಹಿರಿಯ ಆಟಗಾರ ಸುರೇಶ್ ರೈನಾ (Suresh Raina) ಕೆಲ ದಿನಗಳಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2021 ರ ಮೊದಲ ಹಂತದಲ್ಲಿಯೂ ಸಹ, ರೈನಾ ತನ್ನ ಬ್ಯಾಟ್‌ನಿಂದ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ ಮತ್ತು ಎರಡನೇ ಹಂತದಲ್ಲಿಯೂ ರೈನಾ ತನ್ನನ್ನು ತಾನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಸಂಜಯ್ ಮಂಜ್ರೇಕರ್ ಸುರೇಶ್ ರೈನಾ ಕುರಿತು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. 

ಸುರೇಶ್ ರೈನಾರನ್ನು ಕೈಬಿಡುವಂತೆ ಸಂಜಯ್ ಮಂಜ್ರೇಕರ್ ಒತ್ತಾಯ:

ಸಂಜಯ್ ಮಾಂಜ್ರೇಕರ್ (Sanjay Manjrekar) ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ಮೂಲಕ ಅವರು ಸುರೇಶ್ ರೈನಾ (Suresh Raina) ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. 'ಸಿಎಸ್‌ಕೆ (CSK) ಅಬುಧಾಬಿಯಲ್ಲಿ ಕನಿಷ್ಠ ಒಂದು ಬದಲಾವಣೆಯನ್ನು ಮಾಡಬೇಕಾಗಬಹುದು, ಏಕೆಂದರೆ ಸ್ಪಿನ್ನರ್‌ಗಳು ಈ ವಿಕೆಟ್ ನಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ. ಕರಣ್ ಶರ್ಮಾ ಈ ತಂಡದಲ್ಲಿ ಸ್ಥಾನ ಪಡೆಯಬೇಕು ಮತ್ತು ಜಡೇಜಾ ಅವರನ್ನು ವಿಶೇಷ ಬ್ಯಾಟ್ಸ್‌ಮನ್ ಆಗಿ ಆಡಬೇಕೆಂದು ನಾನು ಬಯಸುತ್ತೇನೆ. ಕೆಕೆಆರ್ ವಿರುದ್ಧ, ಸುರೇಶ್ ರೈನಾರನ್ನು ನಾನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲು ಬಯಸುತ್ತೇನೆ' ಎಂದಿದ್ದಾರೆ.

ಇದನ್ನೂ ಓದಿ- IPL 2021: ವಿರಾಟ್ ಕೊಹ್ಲಿ ಮಾಡಿದ ಈ ಸಾಧನೆ ಏನು ಗೊತ್ತಾ?

ಕಳಪೆ ಫಾರ್ಮ್‌ನಲ್ಲಿ ರೈನಾ:
ಐಪಿಎಲ್ 2021 (IPL 2021) ರ ಎರಡನೇ ಹಂತದ ಬಗ್ಗೆ ಹೇಳುವುದಾದರೆ, ಸುರೇಶ್ ರೈನಾ (Suresh Raina) ನಿರಂತರವಾಗಿ ಫ್ಲಾಪ್ ಆಗಿದ್ದಾರೆ. ಕೆಕೆಆರ್ ವಿರುದ್ಧದ ಮೂರನೇ ಪಂದ್ಯದಲ್ಲಿ, ಅವರು ತಮ್ಮನ್ನು ತಾವು ಸಾಬೀತುಪಡಿಸುವ ಅವಕಾಶವನ್ನು ಹೊಂದಿದ್ದರು ಆದರೆ ಅವರು ವಿಫಲರಾದರು ಮತ್ತು 7 ಎಸೆತಗಳಲ್ಲಿ 11 ರನ್ ಗಳಿಸಿದ ನಂತರ ಪೆವಿಲಿಯನ್ಗೆ ಮರಳಿದರು. ಎರಡನೇ ಹಂತದ ಮೊದಲ ಪಂದ್ಯದಲ್ಲೂ ರೈನಾ ಉತ್ತಮ ಫಾರ್ಮ್‌ನಲ್ಲಿ ಆಡಲಿಲ್ಲ.  ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು. ಇಂತಹ ಪರಿಸ್ಥಿತಿಯಲ್ಲಿ, ರೈನಾ ನಿರಂತರ ಫ್ಲಾಪ್ CSK ಯ ದೊಡ್ಡ ದೌರ್ಬಲ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಅವರನ್ನು ತಂಡದಿಂದ ಕೈಬಿಡುವ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.

ಈ ಐಪಿಎಲ್ ಋತುವಿನ ನಂತರ ರೈನಾ ನಿವೃತ್ತಿ ಹೊಂದುತ್ತಾರೆಯೇ?
34 ವರ್ಷದ ಸುರೇಶ್ ರೈನಾ ಅವರು ಎಂ. ಎಸ್. ಧೋನಿ (MS Dhoni) ಕ್ರಿಕೆಟ್ ಗೆ ವಿದಾಯ ಹೇಳಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಈ ಐಪಿಎಲ್ ಋತುವಿನ ನಂತರ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ವಿದಾಯ ಹೇಳಲಿದ್ದಾರೆ ಎಂದು ವರದಿಗಳಿವೆ. ಇದರ ಬೆನ್ನಲ್ಲೇ ಸುರೇಶ್ ರೈನಾ ಕೂಡ ಐಪಿಎಲ್‌ನಿಂದ ನಿವೃತ್ತಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ- Bangalore vs Mumbai: ಹರ್ಷಾಲ್ ಪಟೇಲ್, ಚಹಾಲ್ ಬೌಲಿಂಗ್ ದಾಳಿಗೆ ಮುಂಬೈ ಧೂಳಿಪಟ

ಸುರೇಶ್ ರೈನಾ ವೃತ್ತಿಜೀವನ:
ಸುರೇಶ್ ರೈನಾ ಟೆಸ್ಟ್ ಕ್ರಿಕೆಟ್ ನಲ್ಲಿ 768 ರನ್ ಗಳಿಸಿದ್ದಾರೆ. ಇದು ಅವರ ಒಂದು ಶತಕ ಮತ್ತು 7 ಅರ್ಧ ಶತಕಗಳನ್ನು ಒಳಗೊಂಡಿದೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 5615 ರನ್ ದಾಖಲಿಸಿದ್ದಾರೆ, ಇದರಲ್ಲಿ 5 ಶತಕಗಳು ಮತ್ತು 36 ಅರ್ಧ ಶತಕಗಳು ಸೇರಿವೆ. ಏಕದಿನ ಪಂದ್ಯದಲ್ಲಿ ರೈನಾ ಅವರ ಅತ್ಯುತ್ತಮ ಸ್ಕೋರ್ ಅಜೇಯ 116. ಇದಲ್ಲದೇ, ನಾವು ಟಿ 20 ಬಗ್ಗೆ ಹೇಳುವುದಾದರೆ, ಅವರು 78 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು 1605 ರನ್ ಗಳಿಸಿದ್ದಾರೆ, ಟಿ 20 ಯಲ್ಲಿ, ರೈನಾ ಒಂದು ಶತಕ ಮತ್ತು ಐದು ಅರ್ಧ ಶತಕ ಗಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More