Home> Sports
Advertisement

ಇಶಾನ್ ಬದಲು ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಧ್ರುವ್ ಜುರೆಲ್ ಯಾರು ಗೊತ್ತಾ? ವಿಕೆಟ್ ಕೀಪರ್ ಆಗಿ ಈತನ ಸಾಧನೆ ಏನು?

Who is Dhruv Jurel: ಯುವ ಧ್ರುವ್ ಜುರೆಲ್ 21 ಜನವರಿ 2001 ರಂದು ಆಗ್ರಾದಲ್ಲಿ ಜನಿಸಿದರು. ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಧ್ರುವ್, ನಂತರ ಕ್ರಿಕೆಟ್ ಅನ್ನೇ ತಮ್ಮ ನೆಚ್ಚಿನ ಕ್ರೀಡೆಯಾಗಿ ಆಯ್ದುಕೊಂಡರು.

ಇಶಾನ್ ಬದಲು ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಧ್ರುವ್ ಜುರೆಲ್ ಯಾರು ಗೊತ್ತಾ? ವಿಕೆಟ್ ಕೀಪರ್ ಆಗಿ ಈತನ ಸಾಧನೆ ಏನು?

Who is Dhruv Jurel: ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ ಜನವರಿ 25ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರಾರಂಭಿಸಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಮೊದಲ ಎರಡು ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾದ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಲಿದ್ದು, ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

ಅಂದಹಾಗೆ ಈ ತಂಡದಲ್ಲಿ 22 ವರ್ಷದ ಅನ್‌ ಕ್ಯಾಪ್ಡ್ ವಿಕೆಟ್‌ ಕೀಪರ್ ಬ್ಯಾಟ್ಸ್‌’ಮನ್ ಧ್ರುವ್ ಜುರೆಲ್ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದದ್ದು ಪ್ರಿ ಡಿಸೈಡೆಡ್? ಅತಿ ಹೆಚ್ಚು ಅಂಕ ಗಳಿಸಿಯೂ ಫೈನಲ್‌ ತಲುಪದ ಪ್ರತಾಪ್!

ಧ್ರುವ್ ಜುರೆಲ್ ಯಾರು?

ಯುವ ಧ್ರುವ್ ಜುರೆಲ್ 21 ಜನವರಿ 2001 ರಂದು ಆಗ್ರಾದಲ್ಲಿ ಜನಿಸಿದರು. ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಧ್ರುವ್, ನಂತರ ಕ್ರಿಕೆಟ್ ಅನ್ನೇ ತಮ್ಮ ನೆಚ್ಚಿನ ಕ್ರೀಡೆಯಾಗಿ ಆಯ್ದುಕೊಂಡರು. ಇನ್ನು ಧ್ರುವ್ ಅವರು ಉತ್ತರ ಪ್ರದೇಶದ ಅಂಡರ್-14, ಅಂಡರ್-16 ಮತ್ತು ಅಂಡರ್-19 ತಂಡಗಳಿಗಾಗಿ ಕ್ರಿಕೆಟ್ ಆಡಿದ್ದಾರೆ. 10 ಜನವರಿ 2021 ರಂದು 2020-21 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಪರ ತನ್ನ T20 ಚೊಚ್ಚಲ ಪಂದ್ಯವನ್ನು ಕೂಡ ಆಡಿದ್ದಾರೆ.

ಅಂದಹಾಗೆ ಜುರೆಲ್ ಭಾರತದ 2020 ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಉಪನಾಯಕನಾಗಿ ಆಡಿದ್ದರು. ಆದರೆ, ಭಾರತ ಫೈನಲ್‌’ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲನುಭವಿಸಬೇಕಾಯಿತು. ಈ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಟೂರ್ನಿಯಲ್ಲಿ 6 ಪಂದ್ಯಗಳನ್ನು ಆಡಿದ್ದಾರೆ. ಮೂರು ಇನ್ನಿಂಗ್ಸ್‌’ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 44.50 ಸರಾಸರಿಯಲ್ಲಿ 89 ರನ್ ಗಳಿಸಿದರು. ಅದರಲ್ಲಿ ಅರ್ಧಶತಕವೂ ಸೇರಿದೆ. ಜುರೆಲ್ 2022 ರಲ್ಲಿ ಉತ್ತರ ಪ್ರದೇಶದ ರಣಜಿ ತಂಡಕ್ಕೆ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.

2023ರಲ್ಲಿ ಐಪಿಎಲ್‌ ಪಾದಾರ್ಪಣೆ

22 ವರ್ಷದ ಧ್ರುವ್ ಜುರೆಲ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್)ಗೆ ಪಾದಾರ್ಪಣೆ ಮಾಡಿದರು. ರಾಜಸ್ಥಾನ್ ರಾಯಲ್ಸ್ ಮೂಲ ಬೆಲೆ 20 ಲಕ್ಷಕ್ಕೆ ಜುರೆಲ್ ಅವರನ್ನು ತಂಡಕ್ಕೆ ಸೇರಿಸಿತ್ತು. ಅನೇಕ ಪಂದ್ಯಗಳಲ್ಲಿ ಪ್ರಭಾವಿ ಆಟಗಾರರಾಗಿಯೂ ಆಡಿದ್ದರು. ತನ್ನ ಚೊಚ್ಚಲ IPL ಋತುವಿನಲ್ಲಿ 172.73 ರ ಅತ್ಯುತ್ತಮ ಸ್ಟ್ರೈಕ್ ರೇಟ್‌’ನಲ್ಲಿ 152 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 38 ರನ್ ಆಗಿತ್ತು.

ಭಾರತ ಎ ತಂಡದ ಭಾಗ

ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲಾಗದೆ ಖಾತೆ ತೆರೆಯದೆ ಔಟಾದರೂ ಎರಡನೇ ಪಂದ್ಯದಲ್ಲಿ 69 ರನ್’ಗಳ ಇನಿಂಗ್ಸ್ ಆಡುವ ಮೂಲಕ ತಮ್ಮ ಬ್ಯಾಟಿಂಗ್ ಶಕ್ತಿ ತೋರಿಸಿದ್ದರು. ಕಳೆದ ವರ್ಷ ಎಸಿಸಿ ಏಷ್ಯನ್ ಎಮರ್ಜಿಂಗ್ ಕಪ್‌’ಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಭಾಗವಾಗಿ ಜುರೆಲ್ ಇದ್ದರು. ಈ ಟೂರ್ನಿಯಲ್ಲಿ ಫೈನಲ್ ತಲುಪಿದ ಭಾರತ ತಂಡದಲ್ಲಿ ಜುರೆಲ್ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: India vs England: ಟೀಮ್‌ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ಎಂಟ್ರಿ.!

ದೇಶೀಯ ಕ್ರಿಕೆಟ್‌’ನಲ್ಲಿ ದಾಖಲೆ

ಜುರೆಲ್ ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಇದುವರೆಗೆ 15 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 1 ಶತಕ ಮತ್ತು 5 ಅರ್ಧ ಶತಕ ಒಳಗೊಂಡಂತೆ, 790 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಗರಿಷ್ಠ ಸ್ಕೋರ್ 249 ರನ್. ಇನ್ನು ಲಿಸ್ಟ್-ಎ ನಲ್ಲಿ, ಅವರು ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, 189 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಅವರು 77 ರನ್‌’ಗಳ ಗರಿಷ್ಠ ಸ್ಕೋರ್‌’ನೊಂದಿಗೆ ಎರಡು ಅರ್ಧ ಶತಕಗಳನ್ನು ಹೊಂದಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿ 2023-2024 ರಲ್ಲಿ ಉತ್ತರ ಪ್ರದೇಶ ತಂಡದ ಭಾಗವಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More