Home> Sports
Advertisement

IND vs WI ಟೆಸ್ಟ್ ಸರಣಿಗೆ ತಂಡ ಪ್ರಕಟ: ಕೊನೆಗೂ ಈ ಕಿಲಾಡಿ ಚಾಂಪಿಯನ್’ಗೆ ಮಣೆ ಹಾಕಿದ ಸಮಿತಿ!

India vs West Indies Series: ಕಳೆದ ವರ್ಷ ಕೂಡ ವಿಂಡೀಸ್ ನೆಲದಲ್ಲಿ ಭಾರತ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಆಡಿದ್ದು ಎರಡರಲ್ಲೂ ಗೆಲುವು ಕಂಡಿತ್ತು. ಆದರೆ ಈ ಬಾರಿ ಟೆಸ್ಟ್ ಸರಣಿಯೊಂದಿಗೆ ಉಭಯ ತಂಡಗಳ ಪ್ರವಾಸ ಆರಂಭವಾಗಲಿದೆ.

IND vs WI ಟೆಸ್ಟ್ ಸರಣಿಗೆ ತಂಡ ಪ್ರಕಟ: ಕೊನೆಗೂ ಈ ಕಿಲಾಡಿ ಚಾಂಪಿಯನ್’ಗೆ ಮಣೆ ಹಾಕಿದ ಸಮಿತಿ!

India vs West Indies Series: ಜುಲೈ 12 ರಿಂದ ಆಗಸ್ಟ್ 13 ರವರೆಗೆ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು, ಮೂರು ODIಗಳು ಮತ್ತು ಐದು T20 ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಟೀಮ್ ಇಂಡಿಯಾ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಪ್ರವಾಸವನ್ನು 2019 ರಲ್ಲಿ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಮೂರು ಫಾರ್ಮ್ಯಾಟ್‌ ಪಂದ್ಯಗಳು ನಡೆದಿದ್ದಲ್ಲದೆ, ಎಲ್ಲಾ ಸ್ವರೂಪಗಳಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು ಭಾರತ.

ಕಳೆದ ವರ್ಷ ಕೂಡ ವಿಂಡೀಸ್ ನೆಲದಲ್ಲಿ ಭಾರತ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಆಡಿದ್ದು ಎರಡರಲ್ಲೂ ಗೆಲುವು ಕಂಡಿತ್ತು. ಆದರೆ ಈ ಬಾರಿ ಟೆಸ್ಟ್ ಸರಣಿಯೊಂದಿಗೆ ಉಭಯ ತಂಡಗಳ ಪ್ರವಾಸ ಆರಂಭವಾಗಲಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: ಇನ್ನೇಕೆ 7 ಸೀಟರ್… ಬಂದೇಬಿಡ್ತು 10 ಸೀಟರ್ ಕಾರು: ಹಿಂದೆಂದೂ ಕಂಡಿರದ ಅದ್ಭುತ ಫೀಚರ್: ಬೆಲೆಯೂ ಭಾರೀ ಅಗ್ಗ!

ವೆಸ್ಟ್ ಇಂಡೀಸ್ ಕ್ರಿಕೆಟ್ ಆಯ್ಕೆ ಸಮಿತಿಯು ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ಸಮಿತಿಯು 13 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಜುಲೈ 12 ರಿಂದ 16 ರವರೆಗೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಬ್ಬರು ಮೀಸಲು ಆಟಗಾರರನ್ನು ಹೆಸರಿಸಿದೆ.

ಎಡಗೈ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ಮೊದಲ ಬಾರಿಗೆ ತಂಡಕ್ಕೆ ಸೇರ್ಪಡೆಗೊಂಡರೆ, ಎಡಗೈ ಅಲಿಕ್ ಅಥಾನಾಜೆ ತಂಡದಲ್ಲಿರುವ ಇತರ ಅನ್‌ ಕ್ಯಾಪ್ ಆಟಗಾರರಾಗಿದ್ದಾರೆ. ನವೆಂಬರ್ 2021 ರಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಿದ ಆಲ್ ರೌಂಡರ್ ರಹಕೀಮ್ ಕಾರ್ನ್‌ವಾಲ್ ಮತ್ತು ಎಡಗೈ ಸ್ಪಿನ್ನರ್ ಜೋಮೆಲ್ ವಾರಿಕನ್ ತಂಡಕ್ಕೆ ಮರಳಿದ್ದಾರೆ.

ಎರಡೂ ದೇಶಗಳಿಗೆ ವಿಶೇಷ ಸರಣಿ:

ಭಾರತ-ವೆಸ್ಟ್ ಇಂಡೀಸ್ 2023-2025 ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಈ ಎರಡು ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಜುಲೈ 12-16 ರವರೆಗೆ ಮೊದಲ ಟೆಸ್ಟ್ ಅನ್ನು ಆಯೋಜಿಸಲಿದೆ ಇನ್ನೊಂದೆಡೆ. ಎರಡನೇ ಟೆಸ್ಟ್ ಜುಲೈ 20-24 ರವರೆಗೆ ಟ್ರಿನಿಡಾಡ್‌ ನ ಕ್ವೀನ್ಸ್ ಪಾರ್ಕ್ ಓವಲ್‌ ನಲ್ಲಿ ನಡೆಯಲಿದೆ. ಇನ್ನು ಈ ಟೆಸ್ಟ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ 100 ನೇ ಟೆಸ್ಟ್ ಪಂದ್ಯವಾಗಿದೆ.

ಮೊದಲ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ:

ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜ್, ಟಾಗೆನರಿನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಮನ್ ರೊಯಿಫರ್, ಕೆಮರ್ರಿಕ್ ರೀಫರ್, ಜೋಮೆಲ್ ರೀಫರ್.

ಇದನ್ನೂ ಓದಿ: ಹೇರ್ ಡೈ ಬೇಡವೇ ಬೇಡ… ಈ ತರಕಾರಿಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತೆ!

ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್ ಮತ್ತು ನವದೀಪ್ ಸೈನಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More