Home> Sports
Advertisement

WATCH: ಇಂಜಮಾಮ್ ಉಲ್ ಹಕ್ ಅಬ್ಬರದ ಹೊಡೆತಕ್ಕೆ ನಾಲಿಗೆ ಕಚ್ಚಿದ ಆಫ್ರಿದಿ..!

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನದ ಮೆಗಾ ಸ್ಟಾರ್ಸ್ ಲೀಗ್‌ನಲ್ಲಿ ಕೇವಲ 16 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.

WATCH: ಇಂಜಮಾಮ್ ಉಲ್ ಹಕ್ ಅಬ್ಬರದ ಹೊಡೆತಕ್ಕೆ ನಾಲಿಗೆ ಕಚ್ಚಿದ ಆಫ್ರಿದಿ..!

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನದ ಮೆಗಾ ಸ್ಟಾರ್ಸ್ ಲೀಗ್‌ನಲ್ಲಿ ಕೇವಲ 16 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.

ಅವರ ಕ್ರಿಸ್ ನಲ್ಲಿ ನಿಂತು ಈ ಪರಿ ಆಟವಾಡುವುದನ್ನು ಕಂಡ ಪ್ರೇಕ್ಷಕರಂತೂ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.52 ವರ್ಷ ವಯಸ್ಸಿನ ಇಂಜಮಾಮ್ ಉಲ್ ಹಕ್ 2007 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಮತ್ತು ಒಂದು ವರ್ಷದ ನಂತರ ಈಗ ನಿಷ್ಕ್ರಿಯಗೊಂಡ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ತಮ್ಮ ಕೊನೆಯ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು.

ಪಾಕಿಸ್ತಾನದ ಇತಿಹಾಸದಲ್ಲಿ ಹೆಚ್ಚು ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಇಂಜಮಾಮ್ ಉಲ್ ಹಕ್ ನಾಯಕರಾಗಿ 87 ಏಕದಿನ ಪಂದ್ಯಗಳಲ್ಲಿ 51 ಪಂದ್ಯಗಳಲ್ಲಿ ಗೆಲುವಿನತ್ತ ಮುನ್ನೆಡೆಸಿದ್ದರು.ಆದರೆ ಟೆಸ್ಟ್‌ಗಳಲ್ಲಿ ಅವರ ನಾಯಕತ್ವದ ದಾಖಲೆಯು 11 ಗೆಲುವುಗಳು ಮತ್ತು 31 ಪಂದ್ಯಗಳಲ್ಲಿ ಸೋಲುಗಳೊಂದಿಗೆ ಚರ್ಚಾಸ್ಪದವಾಗಿತ್ತು. ಅವರು 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಆಡಿದ್ದರು.ಆ ಪಂದ್ಯದಲ್ಲಿ ಪಾಕ್ ತಂಡವು ಐದು ವಿಕೆಟ್ ಗಳ ಅಂತರದಿಂದ ಗೆಲುವನ್ನು ಸಾಧಿಸಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿ ಗೂಗಲ್ ಸಿಇಓ ಸುಂದರ್ ಪಿಚ್ಚೈ ಹೇಳಿದ್ದೇನು ಗೊತ್ತಾ?

ಇಂಜಮಾಮ್ ಅವರು ಒಟ್ಟಾರೆಯಾಗಿ 120 ಟೆಸ್ಟ್ ಮತ್ತು 378 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ ಮತ್ತು ಏಕದಿನ ಪಂದ್ಯಗಳಲ್ಲಿ ಅವರು 11,701 ರನ್ ಗಳಿಸಿದ್ದಾರೆ, ಆ ಮೂಲಕ ಇದು ಒಟ್ಟಾರೆಯಾಗಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.1992 ರ ವಿಶ್ವಕಪ್ ವಿಜಯೋತ್ಸವದಲ್ಲಿಇಂಜಮಾಮ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು 1999 ರ ಮಾರ್ಕ್ಯೂ ಪಂದ್ಯಾವಳಿಯ ಫೈನಲ್ ತಲುಪಿದ ತಂಡದ ಭಾಗವಾಗಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್ ಗಳಿಗೆ ನಿಯಮಗಳೇ ಇಲ್ವಾ: ಹೈದರಾಬಾದ್ ಪೊಲೀಸರೇ ಬೆಟರ್ ಆದ್ರೂ...?

ಮೆಗಾ ಸ್ಟಾರ್ಸ್ ಲೀಗ್ ಮಾಜಿ ಕ್ರಿಕೆಟಿಗರ ಸರಣಿಯಲ್ಲಿ ಶಾಹಿದ್ ಅಫ್ರಿದಿ, ಮಿಸ್ಬಾ-ಉಲ್-ಹಕ್ ಮತ್ತು ಮೊಹಮ್ಮದ್ ಹಫೀಜ್ ಅವರನ್ನು ಒಳಗೊಂಡಿದೆ.

ಕ್ರೀಡೆಯಿಂದ ನಿವೃತ್ತರಾದ ನಂತರ, 2012 ರಲ್ಲಿ ರಾಷ್ಟ್ರೀಯ ಪುರುಷರ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿದ್ದರು. ಅಫ್ಘಾನಿಸ್ತಾನದ ಮುಖ್ಯ ಕೋಚ್ ಆಗಿ ಸ್ವಲ್ಪ ಸಮಯದ ನಂತರ, ಹಿರಿಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರನ ಪಾತ್ರವನ್ನು ವಹಿಸಿಕೊಳ್ಳಲು ಇಂಜಮಾಮ್ ಪಾಕಿಸ್ತಾನಕ್ಕೆ ಮರಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Read More