Home> Sports
Advertisement

RCB vs CSK: ರಚಿನ್ ರವೀಂದ್ರ ಔಟಾಗ್ತಿದ್ದಂತೆ ಬೆರಳು ತೋರಿಸಿದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್‌ !

virat kohli rachin ravindra fight: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದು ಫ್ಯಾನ್ಸ್‌ ಬೇಸರಕ್ಕೂ ಕಾರಣವಾಗಿದೆ. 

RCB vs CSK: ರಚಿನ್ ರವೀಂದ್ರ ಔಟಾಗ್ತಿದ್ದಂತೆ ಬೆರಳು ತೋರಿಸಿದ ವಿರಾಟ್ ಕೊಹ್ಲಿ,  ವಿಡಿಯೋ ವೈರಲ್‌ !

ಚೆನ್ನೈ: ಐಪಿಎಲ್ 2024 ರ ಆರಂಭಿಕ ಪಂದ್ಯವು ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ತಂಡ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಬೆಂಗಳೂರು ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಅವರ ಈ ಸಂದರ್ಭದ ವಿಡಿಯೋ ವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ. 

ವಿರಾಟ್ ಕೊಹ್ಲಿ 19 ಎಸೆತಗಳಲ್ಲಿ 21 ರನ್ ಪಡೆದು ಔಟಾದರು. ಪ್ರತಿ ವರ್ಷ ಒಂದಲ್ಲ ಒಂದು ವಿವಾದಗಳು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಆಟಗಾರರ ನಡುವೆ ತೀವ್ರ ವಾಗ್ವಾದ ಮತ್ತು ಘರ್ಷಣೆ ನಡೆದ ಉದಾಹರಣೆಗಳಿವೆ. ಅಂತೆಯೇ ಈ ವರ್ಷದ ಮೊದಲ ಪಂದ್ಯದಲ್ಲಿ ಸಹ ರಚಿನ್ ರವೀಂದ್ರ ಅವರಿಗೆ ವಿರಾಟ್ ಕೊಹ್ಲಿ ಸಾರ್ವಜನಿಕವಾಗಿ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಐಪಿಎಲ್‌ ಆಂಕರ್ ಶೆಫಾಲಿ ಬಗ್ಗಾ ಯಾರು ಗೊತ್ತೇ! ಆಂಕರಿಂಗ್‌ಗಾಗಿ ಟೀಕೆಗೊಳಗಾದ ಈಕೆಯ ಸಂಭಾವನೆ ಕೇಳಿದ್ರೆ ಶಾಕ್‌ ಆಗುತ್ತೆ! 

ನ್ಯೂಜಿಲೆಂಡ್‌ನ ಯುವ ಮತ್ತು ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಆರ್‌ಸಿಬಿ ವಿರುದ್ಧ ಚೆನ್ನೈ ಪರ ಚೊಚ್ಚಲ ಪಂದ್ಯವಾಡಿದರು. ರಚಿನ್ ರವೀಂದ್ರ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಭಾರತದ ಅನುಭವಿ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ಇವರನ್ನು ಔಟ್‌ ಮಾಡಿದರು.

 

 

ರಚಿನ್ ರವೀಂದ್ರ ಔಟಾದಾಗ ಬೌಂಡರಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಅವರ ಆಕ್ಷನ್‌ ಒಂದು ವೈರಲ್‌ ಆಗಿದೆ. ರಚಿನ್ ರವೀಂದ್ರ ಔಟಾಗುತ್ತಿದ್ದಂತೆ ಬೌಂಡರಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಕೈ ಸನ್ನೆ ಮೂಲಕ ಡಗೌಟ್‌ಗೆ ಹೋಗಲು ಸೂಚಿಸಿದರು. ವಿರಾಟ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅವರು ಮಾತನಾಡುವ ರೀತಿ ನೋಡಿದರೆ ಅವಾಚ್ಯ ಶಬ್ದಗಳನ್ನೂ ಬಳಸಿದಂತಿದೆ ಎಂದು ಕೆಲವು ನೆಟ್ಟಿಗರು ಆರೋಪಿಸುತ್ತಿದ್ದಾರೆ. 

ಇದನ್ನೂ ಓದಿ: ದಿನೇಶ್-ರಾವತ್ ಜವಾಬ್ದಾರಿಯುತ ಆಟ : ಗಾಯಕ್ವಾಡ್ ತಂಡಕ್ಕೆ 174ರನ್ ಗಳ ಗೆಲುವಿನ ಗುರಿ ನೀಡಿದ RCB ಪಡೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More