Home> Sports
Advertisement

ಉದ್ಯೋಗ ಖಾತ್ರಿ ದಿನಗೂಲಿಗಿಂತಲೂ ಕಡಿಮೆ ಉತ್ತರ ಖಂಡದ ರಣಜಿ ಆಟಗಾರರ ಕೂಲಿ....!

ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಎಂದರೆ ನಾವು ಕೋಟ್ಯಾಧೀಶರು, ಅವರಿಗೆ ಹಣದ ಹೊಳೆಯೇ ಹರಿಯುತ್ತದೆ ಎಂದು ಭಾವಿಸಿರುತ್ತೇವೆ,  ಆದರೆ ಇದು ಐಪಿಎಲ್ ನಂತಹ ಟೂರ್ನಿಗಳನ್ನು ನೋಡಿದಾಗ ಒಂದರ್ಥದಲ್ಲಿ ಇದು ನಿಜವಾಗಿದೆ. 

ಉದ್ಯೋಗ ಖಾತ್ರಿ ದಿನಗೂಲಿಗಿಂತಲೂ ಕಡಿಮೆ ಉತ್ತರ ಖಂಡದ ರಣಜಿ ಆಟಗಾರರ ಕೂಲಿ....!

ನವದೆಹಲಿ: ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಎಂದರೆ ನಾವು ಕೋಟ್ಯಾಧೀಶರು, ಅವರಿಗೆ ಹಣದ ಹೊಳೆಯೇ ಹರಿಯುತ್ತದೆ ಎಂದು ಭಾವಿಸಿರುತ್ತೇವೆ, ಆದರೆ ಇದು ಐಪಿಎಲ್ ನಂತಹ ಟೂರ್ನಿಗಳನ್ನು ನೋಡಿದಾಗ ಒಂದರ್ಥದಲ್ಲಿ ಇದು ನಿಜವೆನಿಸುತ್ತದೆ. ಆದರೆ ಈಗ ಬಂದಿರುವ ಆಘಾತಕಾರಿ ಮಾಹಿತಿ ಪ್ರಕಾರ ಉತ್ತರ ಖಂಡದ ರಣಜಿ ಆಟಗಾರರು ಈಗ ದಿನದ ಭತ್ಯೆಯಾಗಿ 100 ರೂಪಾಯಿ ಪಡೆಯುವುದಕ್ಕೂ ಕಷ್ಟಪಡುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?

ಇದನ್ನೂ ಓದಿ: Rajya Sabha Elections 2022: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ  

ಹೌದು, ಈಗ ನ್ಯೂಸ್ 9 ಮಾಡಿರುವ ವರದಿ ಪ್ರಕಾರ ಹಿರಿಯ ಕ್ರಿಕೆಟಿಗರಿಗೆ ದಿನದ ಭತ್ಯೆಯಾಗಿ ಕೇವಲ 100 ರೂ.ಗಳನ್ನು ನೀಡಲಾಗುತ್ತಿದೆ. ಇದು ಸರ್ಕಾರದ ಭತ್ಯೆಯ ಪ್ರಕಾರ ಅವರಿಗೆ ನೀಡಬೇಕಾದಕ್ಕಿಂತ 8 ಪಟ್ಟು ಕಡಿಮೆಯಾಗಿದೆ. ನ್ಯೂಸ್ 9 ವರದಿ ಪ್ರಕಾರ, ಹಿರಿಯ ಕ್ರಿಕೆಟಿಗರಿಗೆ ದಿನದ ಭತ್ಯೆಯನ್ನು 1,500 ರೂ.ಗಳಿಂದ ಹಿಡಿದು 1,000 ರೂ.ವರೆಗೂ ನೀಡಲಾಗುತ್ತಿದೆ, ಕೆಲವೊಮ್ಮೆ ಇದು 2000 ರೂ ಗಳ ವರೆಗೂ ಏರಿಕೆಯಾಗುತ್ತದೆ, ಆದರೆ ಈಗ ಕಳೆದ 12 ತಿಂಗಳಿಂದ ದಿನದ ಭತ್ಯೆಯಾಗಿ ಕೇವಲ 100 ರೂ.ಗಳನ್ನು ನೀಡಲಾಗುತ್ತಿದೆ.

ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ ​​ಲೆಕ್ಕದ ವರದಿಯ ಪ್ರಕಾರ, ಆಹಾರ ಮತ್ತು ಊಟೋಪಚಾರಕ್ಕಾಗಿ 1,74,07,346 ರೂ. ಜೊತೆಗೆ ದೈನಂದಿನ ಭತ್ಯೆಗಾಗಿ 49,58,750 ರೂ.ಗಳನ್ನು 'ಟೂರ್ನಮೆಂಟ್ ಮತ್ತು ಟ್ರಯಲ್ ಕ್ಯಾಂಪ್ ವೆಚ್ಚಗಳು' ಎಂದು ಉಲ್ಲೇಖಿಲಾಗಿದೆ. ಅಚ್ಚರಿ ಎಂದರೆ ಈ ವರದಿಯಲ್ಲಿ ಬಾಳೆಹಣ್ಣಿಗೆ 35 ಲಕ್ಷ ರೂಪಾಯಿ ಮತ್ತು ನೀರಿನ ಬಾಟಲಿಗಳಿಗೆ 22 ಲಕ್ಷ ರೂಪಾಯಿ ಎಂದು ಉಲ್ಲೇಖಿಸಲಾಗಿದೆ.

ಉತ್ತರ ಖಂಡದ ರಣಜಿ ತಂಡದ ಹಿರಿಯ ಆಟಗಾರರು ಬಾಕಿ ಉಳಿದಿರುವ ಮೊತ್ತದ ಬಗ್ಗೆ ಮ್ಯಾನೇಜರ್ ಬಳಿ ಕೇಳಿದ್ದಕ್ಕೆ, ಅವರು ಉತ್ತರಿಸುತ್ತಾ "ಅರೆ ಕ್ಯೂ ಬಾರ್ ಬಾರ್ ಯೇ ಸವಾಲ್ ಪೂಚ್ಟೆ ರೆಹತೆ ಹೋ, ಭಾಯ್? ಪೈಸೆ ಆ ಜಾಯೆಂಗೆ ... ತಬ್ ತಕ್ ಆಪ್ ಸ್ವಿಗ್ಗಿ-ಝೊಮಾಟೊ ಸೆ ಮಂಗ್ವಾ ಲಿಜಿಯೇ, ನಾ ( ನೀವು ಅದೇ ಪ್ರಶ್ನೆಯನ್ನು ಪದೇ ಪದೇ ಏಕೆ ಕೇಳುತ್ತಿದ್ದೀರಿ? ನಿಮಗೆ ಹಣ ಸಿಗುತ್ತದೆ, ಅಲ್ಲಿಯವರೆಗೆ ನೀವು Swiggy-Zomato ಮೂಲಕ ಆರ್ಡರ್ ಮಾಡಿ)." ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಮದುವೆಗೆ ನಿರಾಕರಿಸಿದ ಮಹಿಳೆ ಮೇಲೆ ಆ್ಯಸಿಡ್ ದಾಳಿ

ಇದಷ್ಟೇ ಅಲ್ಲದೆ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನೇಮಕಾತಿಗಳ ಜೊತೆಗೆ ಭ್ರಷ್ಟಾಚಾರ, ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಕೂಡ ವರದಿಯಾಗಿವೆ ಎನ್ನಲಾಗಿದೆ. ಗುರುವಾರದಂದು ಮುಂಬೈ ವಿರುದ್ಧ ನಡೆದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಉತ್ತರ ಖಂಡದ ಆಟಗಾರರ ಈ ಸ್ಥಿತಿಯನ್ನು ಕೇಳಿ ಈಗ ಬಹುತೇಕ ಕ್ರಿಕೆಟ್ ಪ್ರೇಮಿಗಳು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆಗೆ ಐಪಿಎಲ್ ನಂತಹ ಟೂರ್ನಿಗಳಲ್ಲಿ ಕ್ರಿಕೆಟ್ ಆಟಗಾರಿಗೆ ಕೋಟ್ಯಾಂತರ ರೂ.ಗಳನ್ನು ಹಾಗೂ ಸೌಲಭ್ಯಗಳನ್ನು ಆಟಗಾರರಿಗೆ ನೀಡಲಾಗುತ್ತಿದೆ, ಆದರೆ ಇತ್ತ ಕಡೆ ರಣಜಿ ತಂಡದ ಆಟಗಾರರಿಗೆ ನರೇಗಾ ದಿನಗೂಲಿಗಿಂತಲೂ ಕಡಿಮೆ ಭತ್ಯೆಯನ್ನು ನೀಡುತ್ತಿರುವುದು ನಿಜಕ್ಕೂ ವ್ಯವಸ್ಥೆಯ ಇನ್ನೊಂದು ಲೋಕವನ್ನು ಅನಾವರಣಗೊಳಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More