Home> Sports
Advertisement

ದ.ಆಫ್ರಿಕಾಗೆ ವಿಲನ್ ಆದ್ರು ಟೀಂ ಇಂಡಿಯಾದ ಈ ಆಟಗಾರ: ಈತನಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಸಾಹಸ

ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅವರ ವಿಸ್ಮಯಕಾರಿಯಾಗಿ ಆಕ್ರಮಣಕಾರಿ ಬ್ಯಾಟಿಂಗ್ ಅವರನ್ನು ಸದ್ಯಕ್ಕೆ T20 ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ನನ್ನಾಗಿ ಮಾಡಿದೆ. ಈ ಭಾರತೀಯನನ್ನು ಎದುರಿಸಲು ಯಾವುದೇ ಮಾರ್ಗವಿಲ್ಲ ಎಂದು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪರ್ನೆಲ್ ನಂಬಿದ್ದಾರೆ.

ದ.ಆಫ್ರಿಕಾಗೆ ವಿಲನ್ ಆದ್ರು ಟೀಂ ಇಂಡಿಯಾದ ಈ ಆಟಗಾರ: ಈತನಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಸಾಹಸ

India vs South Africa 2nd T20: ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ಸರಣಿಯ ಎರಡನೇ ಪಂದ್ಯವು ಅಕ್ಟೋಬರ್ 2 ರಂದು ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ವೇಯ್ನ್ ಪಾರ್ನೆಲ್ ದೊಡ್ಡ ಹೇಳಿಕೆ ನೀಡಿದ್ದಾರೆ. ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಈ ಆಟಗಾರನ ಆಕ್ರಮಣಕಾರಿ ವರ್ತನೆಯು ದಕ್ಷಿಣ ಆಫ್ರಿಕಾದ ಬೌಲರ್‌ಗಳಿಗೆ ಕಷ್ಟಕರವಾಗಿಲಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಸತತ ಆರನೇ ಬಾರಿಗೆ ಸ್ವಚ್ಛ ನಗರಿ ಸ್ಥಾನ ಪಡೆದ ಇಂದೋರ್

ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅವರ ವಿಸ್ಮಯಕಾರಿಯಾಗಿ ಆಕ್ರಮಣಕಾರಿ ಬ್ಯಾಟಿಂಗ್ ಅವರನ್ನು ಸದ್ಯಕ್ಕೆ T20 ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ನನ್ನಾಗಿ ಮಾಡಿದೆ. ಈ ಭಾರತೀಯನನ್ನು ಎದುರಿಸಲು ಯಾವುದೇ ಮಾರ್ಗವಿಲ್ಲ ಎಂದು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪರ್ನೆಲ್ ನಂಬಿದ್ದಾರೆ. ಅದಕ್ಕಾಗಿ ಬೌಲರ್‌ಗಳು ಸಹ ಬಲಶಾಲಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ ಮೂರು ಸುದೀರ್ಘ ಸಿಕ್ಸರ್ ಸೇರಿ 50 ರನ್ ಗಳಿಸಿದ್ದಾರೆ.

ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್: 

“ವೈಯಕ್ತಿಕವಾಗಿ ನಾನು ಕಳೆದ ಎರಡು ತಿಂಗಳಲ್ಲಿ ನೋಡಿದ ಪ್ರಕಾರ, ಅವರು ಇದೀಗ ಟಿ20ಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನದ ಪ್ರತಿಯೊಂದು ಪ್ರದೇಶಕ್ಕೂ ಬೌಂಡರಿಗಳನ್ನು ಹೊಡಡೆಯುವುದು ಬೌಲರ್‌ಗಳಿಗೆ ಕಷ್ಟಕರವಾಗುತ್ತದೆ. ಹೀಗಾಗಿ ಬೌಲರ್ ಗಳು ಬಲಶಾಲಿಯಾಗಬೇಕು. ಅವರ ಪ್ರತಿಯೊಂದು ಎಸೆತಗಳ ಮೇಲೆ ಉತ್ತಮವಾಗಿ ಗಮನಹರಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ನಲ್ಲಿ ಸಿಲುಕಿದ Mercedes-Benz Indiaದ ಸಿಇಒ: ಮುಂದೆ ಆತ ಮಾಡಿದ್ದೇನು ಗೊತ್ತಾ?

ಮೊದಲ ಟಿ20ಯಲ್ಲಿ ತಂಡದ ಕಳಪೆ ಪ್ರದರ್ಶನ ಕೇವಲ ಕಾಕತಾಳೀಯವಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮೊದಲು ಭಯಪಡುವ ಅಗತ್ಯವಿಲ್ಲ ಎಂದು ಪಾರ್ನೆಲ್ ಹೇಳಿದ್ದಾರೆ. “ನಮ್ಮ ಬ್ಯಾಟ್ಸ್‌ ಮನ್‌ಗಳು ವಿಶ್ವ ದರ್ಜೆಯವರಾಗಿದ್ದಾರೆ. ಆದ್ದರಿಂದ ಗಾಬರಿಯಾಗಲು ಏನೂ ಇಲ್ಲ” ಎಂದು ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More