Home> Sports
Advertisement

IND vs PAK: ಟೀಂ ಇಂಡಿಯಾ-ಪಾಕ್‌ ನಡುವಣ ರೋಚಕ ಕದನಕ್ಕೆ ಕೊನೆಗೂ ಫಿಕ್ಸ್‌ ಆಯ್ತು ಡೇಟ್‌

ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳು ಜುಲೈ 31 ರಂದು ಮುಖಾಮುಖಿಯಾಗಲಿವೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. 24 ವರ್ಷಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದೆ. ಈ ಬಾರಿ ಮಹಿಳಾ ಕ್ರಿಕೆಟ್‌ಗೆ ಮಾತ್ರ ಅವಕಾಶ ಸಿಕ್ಕಿದ್ದು ಇದೇ ಮೊದಲು.

IND vs PAK: ಟೀಂ ಇಂಡಿಯಾ-ಪಾಕ್‌ ನಡುವಣ ರೋಚಕ ಕದನಕ್ಕೆ ಕೊನೆಗೂ ಫಿಕ್ಸ್‌ ಆಯ್ತು ಡೇಟ್‌

ಕ್ರಿಕೆಟ್ ಮೈದಾನದಲ್ಲಿ ಯಾವ ಪಂದಕ್ಕೂ ಇಲ್ಲದ ಕ್ರೇಜ್‌ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯದಲ್ಲಿ ಕಂಡುಬರುತ್ತದೆ. ಇದೀಗ ಕ್ರಿಕೆಟ್‌ ಅಭಿಮಾನಿಗಳಿಗೆ ಅಂತಹ ಕ್ರೇಜ್‌ ಹುಟ್ಟಿಸಲು ಮತ್ತೆ ಇಂಡೋ ಪಾಕ್‌ ಕ್ರಿಕೆಟ್‌ ಪಂದ್ಯಾಟ ಮತ್ತೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬೃಹತ್ ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ತಂಡವೂ ಬರ್ಮಿಂಗ್ಹ್ಯಾಮ್‌ಗೆ ತಲುಪಿದೆ.

ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳು ಜುಲೈ 31 ರಂದು ಮುಖಾಮುಖಿಯಾಗಲಿವೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. 24 ವರ್ಷಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದೆ. ಈ ಬಾರಿ ಮಹಿಳಾ ಕ್ರಿಕೆಟ್‌ಗೆ ಮಾತ್ರ ಅವಕಾಶ ಸಿಕ್ಕಿದ್ದು ಇದೇ ಮೊದಲು. 

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಸಿಕ್ಕಿದ್ದಾನೆ ಅಪಾಯಕಾರಿ ಫಿನಿಶರ್ : ಈ ಭಾರಿ ಟಿ20 ವಿಶ್ವಕಪ್ ಗೆಲುವು ಗ್ಯಾರಂಟಿ!

ಆಗಸ್ಟ್ 7 ರಂದು ಫೈನಲ್ ಪಂದ್ಯ: 
ಕಾಮನ್‌ವೆಲ್ತ್ ಗೇಮ್ಸ್ 2022 ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ. ಇದರಲ್ಲಿ 72 ದೇಶಗಳ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡ ಜುಲೈ 29 ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಭಾರತವನ್ನು ಹೊರತುಪಡಿಸಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾರ್ಬಡೋಸ್ ತಂಡಗಳಿವೆ. ಎಲ್ಲಾ ಪಂದ್ಯಗಳು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಗಸ್ಟ್ 7 ರಂದು ಚಿನ್ನ ಮತ್ತು ಕಂಚಿನ ಪದಕದ ಪಂದ್ಯಗಳು ನಡೆಯಲಿವೆ.

ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ: 
ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ತಂಡದ ಆಟವು ಜುಲೈ 29 ರಿಂದ ಪ್ರಾರಂಭವಾಗಲಿದೆ. ಟೀಮ್ ಇಂಡಿಯಾದ ಮೊದಲ ಪಂದ್ಯವು ಆಸ್ಟ್ರೇಲಿಯಾದ ವಿರುದ್ಧ ಜುಲೈ 29 ರಂದು ಸಂಜೆ 4.30 ರಿಂದ ನಡೆಯಲಿದೆ. ಈ ಪಂದ್ಯದ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಜುಲೈ 31 ರಂದು ನಡೆಯಲಿದೆ. ಈ ಪಂದ್ಯವೂ ಸಂಜೆ 4.30 ಕ್ಕೆ ಪ್ರಾರಂಭವಾಗಲಿದೆ. ಮೂರನೇ ಪಂದ್ಯವು ಬಾರ್ಬಡೋಸ್ ವಿರುದ್ಧ ನಡೆಯಲಿದ್ದಿ, ಆಗಸ್ಟ್ 3 ರಂದು ರಾತ್ರಿ 11:30 ಕ್ಕೆ ನಡೆಯಲಿದೆ.

ಇದನ್ನೂ ಓದಿ: CWC: ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್

ಭಾರತ ಮಹಿಳಾ ತಂಡ: 
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್. ಮೇಘನಾ, ತಾನಿಯಾ ಭಾಟಿಯಾ (ವಿ.ಕೀ), ಯಾಸ್ತಿಕಾ ಭಾಟಿಯಾ (ವಿ.ಕೀ), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More