Home> Sports
Advertisement

ಟೀಂ ಇಂಡಿಯಾ ಸ್ಪಿನ್ನರ್ ಚಹಾಲ್‌ ಪತ್ನಿ ಧನಶ್ರೀ ಆಸ್ಪತ್ರೆಗೆ ದಾಖಲು

ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಾಲ್‌ ಪತ್ನಿ ಧನಶ್ರೀ ವರ್ಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮೊಣಕಾಲಿನ ಗಾಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 

ಟೀಂ ಇಂಡಿಯಾ ಸ್ಪಿನ್ನರ್ ಚಹಾಲ್‌ ಪತ್ನಿ ಧನಶ್ರೀ ಆಸ್ಪತ್ರೆಗೆ ದಾಖಲು

ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಾಲ್‌ ಪತ್ನಿ ಧನಶ್ರೀ ವರ್ಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 

ಮೊಣಕಾಲಿನ ಗಾಯದ ಸಮಸ್ಯೆಯಿಂದ ಧನಶ್ರೀ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಕುರಿತು ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹಿನ್ನಡೆ ಜೀವನದಲ್ಲಿ ಮತ್ತೆ ಮುಂದೆ ಬರಲು ಉತ್ತಮ ವೇದಿಕೆಯಾಗಿದೆ. ನಾನು ಸಹ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡ್ತೀನಿ. ಇದು ದೇವರ ಇಚ್ಛೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು‘ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ತಾರಕಕ್ಕೇರಿದ ಲಂಕಾ-ಅಫ್ಘನ್ ಆಟಗಾರರ ಕಿತ್ತಾಟ: ಮಧ್ಯ ಪ್ರವೇಶಿಸಿದ ಅಂಪೈರ್! 

ಇನ್ನು ಈ ಚಹಲ್‌ ಮತ್ತು ಧನುಶ್ರೀ ನಡುವೆ ಬಿಕುರು ಮೂಡಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಇಬ್ಬರು ಪ್ರತಿಕ್ರಿಯಿಸುವ ಮೂಲಕ ಗಾಸಿಫ್‌ಗೆ ಸ್ಪಷ್ಟನೆ ನೀಡಿದ್ದರು. ಸದ್ಯ ಏಷ್ಯಾ ಕಪ್​ಗಾಗಿ ಚಹಾಲ್​ ದುಬೈನಲ್ಲಿದ್ದಾರೆ. ಇತ್ತ ಅವರ ಪತ್ನಿ ಧನಶ್ರೀ ವರ್ಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಪತ್ನಿಯ ಪೋಸ್ಟ್‌ಗೆ ಚಹಾಲ್ ಕಾಮೆಂಟ್‌ ಮಾಡಿದ್ದು, ಬೇಗ ಗುಣಮುಖರಾಗಿ ಎಂದು ಆರೈಸಿದ್ದಾರೆ. ಅಲ್ಲದೇ ಅಶ್ವಿನ್ ಪತ್ನಿ ಪ್ರೀತಿ, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಕಾಮೆಂಟ್​ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More