Home> Sports
Advertisement

ದೇವರನಾಡಲ್ಲಿ ಟೀಂ ಇಂಡಿಯಾ ಹೊಸ ದಾಖಲೆ:15 ಬಾಲ್, 5 ವಿಕೆಟ್-ಹರಿಣಗಳ ಬೆಂಡೆತ್ತಿದ ಭಾರತದ ಆಟಗಾರರು

ಹೌದು ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ವಿಭಾಗಕ್ಕೆ ಸೂಕ್ತವಿಲ್ಲ ಎನ್ನಲಾಗುತ್ತದೆ. ಅದರಂತೆ ಇಂದು ನಡೆದ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್ ಮಾಡಲು ಸಂಕಷ್ಟ ಅನುಭವಿಸಿದ್ದು ಕಂಡು ಬಂತು.

ದೇವರನಾಡಲ್ಲಿ ಟೀಂ ಇಂಡಿಯಾ ಹೊಸ ದಾಖಲೆ:15 ಬಾಲ್, 5 ವಿಕೆಟ್-ಹರಿಣಗಳ ಬೆಂಡೆತ್ತಿದ ಭಾರತದ ಆಟಗಾರರು

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಸದ್ಯ ಟೀ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇಂದು ತಿರುವನಂತಪುರದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದೀಪಕ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ ಸೌತ್ ಆಫ್ರಿಕಾ ತಂಡದ ಆಟಗಾರರಿಗೆ ಬೆವರಿಳಿಸಿದ್ದಾರೆ. 

ಇದನ್ನೂ ಓದಿ: IND vs SA T20I: ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು: ದ.ಆಫ್ರಿಕಾಗೆ ಹೀನಾಯ ಸೋಲು

ಹೌದು ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ವಿಭಾಗಕ್ಕೆ ಸೂಕ್ತವಿಲ್ಲ ಎನ್ನಲಾಗುತ್ತದೆ. ಅದರಂತೆ ಇಂದು ನಡೆದ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್ ಮಾಡಲು ಸಂಕಷ್ಟ ಅನುಭವಿಸಿದ್ದು ಕಂಡು ಬಂತು. ಆದರೆ ಟೀಂ ಇಂಡಿಯಾದ ಬಲಿಷ್ಟ ಆಟಗಾರರಾರ ಸೂರ್ಯ ಕುಮಾರ್ ಯಾದವ್ ಮತ್ತು ಕನ್ನಡಿಗ ಕೆ ಎಲ್ ರಾಹುಲ್, ತಂಡವನ್ನು ಗೆಲುವಿನ ದಡಕ್ಕೆ ತಂದರು.

ಇನ್ನೊಂದೆಡೆ ಬೌಲಿಂಗ್ ವಿಭಾಗದಲ್ಲಿ ಕಮಾಲ್ ಮಾಡಿರುವ ಅರ್ಷದೀಪ್ ಸಿಂಗ್, ಸೌತ್ ಆಫ್ರಿಕಾದ ಮೂರು ವಿಕೆಟ್ ಕಬಳಿಸಿದ್ದಾರೆ. ದೀಪಕ್ ಚಹಾರ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಉರುಳಿಸಿದ್ದಾರೆ. ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕೇವಲ 15 ಬಾಲ್ ಗೆ 5 ವಿಕೆಟ್ ಪಡೆದು ಸೌತ್ ಆಫ್ರಿಕಾ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಸುಮಾರು ಮೂರು ವರ್ಷಗಳ ನಂತರ, ತಿರುವನಂತಪುರಂನ ಗ್ರೀನ್‌ಫೀಲ್ಡ್ ಮೈದಾನದಲ್ಲಿ ಆಡಿದ ಟೀಂ ಇಂಡಿಯಾ ಮೊದಲು ಟಾಸ್‌ ಗೆದ್ದು, ಸೌತ್ ಆಫ್ರಿಕಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಟೀಂ ಇಂಡಿಯಾ ಈ ಪಂದ್ಯವನ್ನು ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ಆಟಗಾರರ ಕೊರತೆಯಲ್ಲಿ ಆಡಿದೆ. ಆದರೂ ಪಂದ್ಯ ಮಾತ್ರ ರೋಚಕವಾಗಿ ಗೆದ್ದಿದೆ ಎನ್ನಬಹುದು.

ಇದನ್ನೂ ಓದಿ: Dinesh Karthik: ಯುವತಿ ಜಸ್ಟ್ ಟಚ್ ಮಾಡಿದಕ್ಕೆ ಉರಿದು ಕೆಂಡವಾದ್ರು ದಿನೇಶ್ ಕಾರ್ತಿಕ್: ಮುಂದೇನಾಯ್ತು!

ಐತಿಹಾಸಿಕ ಸಾಧನೆ:

ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 20 (ಇಂದು ನಡೆದ ಪಂದ್ಯ ಹೊರತುಪಡಿಸಿ) ಟಿ20 ಪಂದ್ಯಗಳು ನಡೆದಿತ್ತು. ಅದರಲ್ಲಿ ಟೀಂ ಇಂಡಿಯಾ 11 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳನ್ನು ಗೆದ್ದಿತ್ತು. ಭಾರತದಲ್ಲಿ ಉಭಯ ತಂಡಗಳ ನಡುವೆ ಮೂರು ಟಿ20 ಸರಣಿಗಳು ನಡೆದಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ಒಂದನ್ನು ಗೆದ್ದು ಎರಡು ಸರಣಿಗಳನ್ನು ಡ್ರಾದಲ್ಲಿ ಅಂತ್ಯಗೊಳಿಸಿದೆ. ಆದರೆ ಇದುವರೆಗೆ ಭಾರತ ತಾಯ್ನಾಡಿನಲ್ಲಿ ಒಂದು ಪಂದ್ಯವನ್ನೂ ಸಹ ಗೆದ್ದಿರಲಿಲ್ಲ. ಇಂದು ರೋಚಕ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More