Home> Sports
Advertisement

IND vs NZ: 2019ರಲ್ಲಿ ಟೀಂ ಇಂಡಿಯಾ, 2023ರಲ್ಲಿ ಕೀವೀಸ್: ಅನುಭವಿಸಿದ್ದು ಒಂದೇ ನೋವು, ವರ್ಷ ಮಾತ್ರ ಬೇರೆ!

IND vs NZ Viral Post: ಇನ್ನು ಇವೆಲ್ಲದರ ಮಧ್ಯೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಪೋಸ್ಟ್ ನಲ್ಲಿ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು.

IND vs NZ: 2019ರಲ್ಲಿ ಟೀಂ ಇಂಡಿಯಾ, 2023ರಲ್ಲಿ ಕೀವೀಸ್: ಅನುಭವಿಸಿದ್ದು ಒಂದೇ ನೋವು, ವರ್ಷ ಮಾತ್ರ ಬೇರೆ!

IND vs NZ Viral Post: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿದ್ದು, ಟೀಂ ಇಂಡಿಯಾ 169 ರನ್ ಗಳ ಭರ್ಜರಿ ಸಾಧಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಅಬ್ಬರಿಸಿತ್ತು. ಅಷ್ಟೇ ಅಲ್ಲದೆ, ನ್ಯೂಜಿಲೆಂಡ್ ತಂಡವನ್ನು ಸಂಪೂರ್ಣವಾಗಿ ನಲುಗಿಹೋಗುವಂತೆ ಮಾಡಿತ್ತು.

ಇದನ್ನೂ ಓದಿ: Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ

ಇನ್ನು ಇವೆಲ್ಲದರ ಮಧ್ಯೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಪೋಸ್ಟ್ ನಲ್ಲಿ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. ಅಷ್ಟೇ ಅಲ್ಲದೆ, ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ 3.1 ಓವರ್ ಸಂದರ್ಭದಲ್ಲಿ ಮೂರು ವಿಕೆಟ್ ನಷ್ಟಕ್ಕೆ 5 ರನ್ ಕಲೆಹಾಕಿತ್ತು. ಅಂದು ಟೀಂ ಇಂಡಿಯಾ ಅನುಭವಿಸಿದ ನೋವನ್ನು ಇಂದು ಭಾರತದಲ್ಲಿ ನ್ಯೂಜಿಲೆಂಡ್ ತಂಡ ಅನುಭವಿಸಿದೆ. ಅದೂ ಸಹ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ.

 

ಇಂದು ನಡೆದ ಭಾರತ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಹೀನಾಯ ಸೋಲುಕಂಡ ಕೀವೀಸ್ ಬಗ್ಗೆ ಮೀಮ್ಸ್ ಹರಿದಾಡುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 235 ರನ್ ಗಳ ಗುರಿ ಬೆನ್ನತ್ತಿದ್ದ ಕೀವೀಸ್ 66 ರನ್ ಗೆ ಆಲ್ ಔಟ್ ಆಗಿತ್ತು. ಇನ್ನೊಂದೆಡೆ 2 ಓವರ್ ಗೆ 3 ವಿಕೆಟ್ ಕಳೆದುಕೊಂಡು 5 ರನ್ ಕಲೆ ಹಾಕಿತ್ತು. ಅಂದು ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್. ಸಣ್ಣ ಸೇಡನ್ನು ಭಾರತ ತೀರಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shubman Gill Record: ಬಿರುಸಿನ ಶತಕದ ಮೂಲಕ 13 ವರ್ಷಗಳ ಹಳೆಯ ದಾಖಲೆ ಮುರಿದ ಶುಭ್ಮನ್ ಗಿಲ್

ಶುಭ್ಮನ್ ಗಿಲ್ ಶತಕ-ದಾಖಲೆ: ಇನ್ನೊಂದೆಡೆ ಭಾರತ ತಂಡದ ಸೂಪರ್ ಸ್ಟಾರ್ ಓಪನರ್ ಶುಭಮನ್ ಗಿಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಬ್ಬರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಿಲ್ 63 ಎಸೆತಕ್ಕೆ 126 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 12 ಫೋರ್, 7 ಸಿಕ್ಸ್ ಸೇರಿದೆ. ಇದು ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಶತಕವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More