Home> Sports
Advertisement

T20 World Cup: ಈ ತಂಡ ಟಿ-20 ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂದು ಕ್ರಿಕೆಟ್ ದಿಗ್ಗಜನ ಭವಿಷ್ಯ?

ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೂ ಮೊದಲು ಅನೇಕ ಅನುಭವಿಗಳು ಮತ್ತು ಕ್ರಿಕೆಟ್ ತಜ್ಞರು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಆಯ್ಕೆಗಾರ ಸಾಬಾ ಕರೀಮ್ ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ.

T20 World Cup: ಈ ತಂಡ ಟಿ-20 ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂದು ಕ್ರಿಕೆಟ್ ದಿಗ್ಗಜನ ಭವಿಷ್ಯ?

ನವದೆಹಲಿ: ಈ ವರ್ಷ ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ ನಡೆಯಲಿದೆ. ಈ ಚುಟುಕು ಕ್ರಿಕೆಟ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ವಿಶ್ವದ ಎಲ್ಲಾ ತಂಡಗಳು ತಮ್ಮ 15 ಆಟಗಾರರನ್ನು ಆಯ್ಕೆ ಮಾಡಿವೆ. ಈ ಜಾಗತಿಕ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಹಲವು ದಿಗ್ಗಜರು ಹಾಗೂ ಮಾಜಿ ಕ್ರಿಕೆಟಿಗರು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಆಯ್ಕೆಗಾರ ಸಾಬಾ ಕರೀಂ ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ.

ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ  

ಟಿ-20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾಗೆ ಟೀಂ ಇಂಡಿಯಾದ ಜವಾಬ್ದಾರಿ ವಹಿಸಲಾಗಿದೆ. ರೋಹಿತ್ ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಪ್ರಸ್ತುತ ಭಾರತ ತಂಡವು ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ 3ನೇ ಟಿ-20 ಪಂದ್ಯ ಆಡುತ್ತಿದೆ. ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ಸೂಪರ್-4 ಸುತ್ತಿನಲ್ಲಿ ಪಾಕ್ ಮತ್ತು ಶ್ರೀಲಂಕಾ ಎದುರು ಸೋಲು ಕಂಡು ನಿರ್ಗಮಿಸಿತ್ತು.   

ಇದನ್ನೂ ಓದಿ: IND vs AUS : ಮೂರನೇ ಪಂದ್ಯ ಸೋತರೆ, ರೋಹಿತ್ ಇಡಬೇಕಾಗುತ್ತದೆ ಈ 3 ಹೆಜ್ಜೆಗಳನ್ನು!

ಸಬಾ ಕರೀಮ್ ಭವಿಷ್ಯವೇನು..?

ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಗೆ ಇರಬೇಕಾದ ಎಲ್ಲವೂ ತಂಡದಲ್ಲಿದೆ ಎಂದು ಅವರು ಹೇಳಿದ್ದಾರೆ. ‘ಆಸೀಸ್ ತಂಡವು ಹೆಚ್ಚು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಯಾವುದೇ ಸಮಯದಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಈ ಆಟಗಾರರಲ್ಲಿದೆ. ದೊಡ್ಡ ಮೈದಾನದಲ್ಲಿಯೂ ರನ್ ಗಳಿಸುವ ನಿಪುಣತೆಯನ್ನು ಇವರ ಹೊಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಮತ್ತೊಮ್ಮೆ ಚಾಂಪಿಯನ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಅಂತಾ ಹೇಳಿದ್ದಾರೆ.,   

ಆಸೀಸ್ ತಂಡ ಬಲಿಷ್ಠವಾಗಿದೆ

‘ಆಸ್ಟ್ರೇಲಿಯಾದಲ್ಲಿ ಮೈದಾನಗಳು ದೊಡ್ಡದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಅವಶ್ಯಕತೆ ಇದೆ. ಆಸ್ಟ್ರೇಲಿಯಾದ ತಂಡವು ತುಂಬಾ ಬಲಿಷ್ಠವಾಗಿದೆ. ತವರು ನೆಲದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಆಸೀಸ್ ತಂಡವು ಖಂಡಿತ ಇದರ ಪ್ರಯೋಜನ ಪಡೆಯಲಿದೆ’ ಅಂತಾ ಸಬಾ ಕರೀಮ್ ಹೇಳಿದ್ದಾರೆ.

ಇದನ್ನೂ ಓದಿ: IND vs AUS: 3ನೇ T20 ಪಂದ್ಯದಿಂದ ಈ ಫ್ಲಾಪ್ ಆಟಗಾರ ಹೊರಕ್ಕೆ! ರೋಹಿತ್ ಬದಲಾವಣೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More