Home> Sports
Advertisement

T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?

T20 World Cup 2024: ಗ್ರೂಪ್‌ ಸ್ಟೇಜ್ ಕೊನೆಗೊಳ್ಳುತ್ತಿದ್ದು, ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕಣ್ಣು ಇದೀಗ  ವಿಶ್ವಕಪ್‌ ಸೂಪರ್ 8ರ ಹಂತದ ಪಂದ್ಯಗಳ ಮೇಲೆ ನೆಟ್ಟಿದೆ. ಹಾಗಾದ್ರೆ ಈ ಸೂಪರ್ 8ರ ಸ್ವರೂಪ ಏನು? ಭಾಗವಹಿಸಿರುವ ತಂಡಗಳು, ಸೂಪರ್ 8ರ ಹಂತಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?

T20 World Cup 2024: ಪ್ರಸಕ್ತ ಸಾಲಿನ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯು ಪ್ರಾರಂಭದ ದಿನದಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ರೋಚಕ ತಿರುವು ನೀಡಿದೆ. ಟಿ-20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ಅನಿರೀಕ್ಷಿತ ಟೂರ್ನಾಮೆಂಟ್‌ ಆಗಿದೆ. ನ್ಯೂಯಾರ್ಕ್‌ನ ಪಿಚ್‌ಗಳು, ಕಡಿಮೆ ಸ್ಕೋರ್‌ಗಳು ಮತ್ತು ತ್ವರಿತ ವಿಕೆಟ್‌ ಕಬಳಿಸುವಿಕೆಗೆ ಈ ಪಂದ್ಯಾವಳಿ ಸಾಕ್ಷಿಯಾಗಿದೆ. ಗ್ರೂಪ್‌ ಸ್ಟೇಜ್ ಕೊನೆಗೊಳ್ಳುತ್ತಿದ್ದು, ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕಣ್ಣು ಇದೀಗ  ವಿಶ್ವಕಪ್‌ ಸೂಪರ್ 8ರ ಹಂತದ ಪಂದ್ಯಗಳ ಮೇಲೆ ನೆಟ್ಟಿದೆ. ಹಾಗಾದ್ರೆ ಈ ಸೂಪರ್ 8ರ ಸ್ವರೂಪ ಏನು? ಭಾಗವಹಿಸಿರುವ ತಂಡಗಳು, ಸೂಪರ್ 8ರ ಹಂತಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏನಿದು ಸೂಪರ್ 8?

2024ರ ಟಿ-20 ವಿಶ್ವಕಪ್‌ನ ಗ್ರೂಪ್‌ ಸ್ಟೇಜ್‌ನ ಪಂದ್ಯಗಳು ಮುಗಿದ ಬಳಿಕ ಜೂನ್ 19ರಿಂದ ಸೂಪರ್ 8ರ ಹಂತದ ಪಂದ್ಯಗಳು ಪ್ರಾರಂಭವಾಗಲಿವೆ. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಜೂನ್ 27 ಮತ್ತು ಜೂನ್ 29ರಂದು ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 20 ತಂಡಗಳನ್ನು ಪ್ರತಿ ಗುಂಪಿಗೆ 5 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ 8ರಲ್ಲಿ 8 ತಂಡಗಳನ್ನು ಪ್ರತಿ ಗುಂಪಿಗೆ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ವೇಳೆ 1 ಗುಂಪಿನಲ್ಲಿ ಪ್ರತಿ ತಂಡವು 3 ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯ ಆಡಲಿವೆ. ಸೂಪರ್ 8ರ ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಇದನ್ನೂ ಓದಿ: Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?

ಯಾವ ತಂಡಗಳು ಸೂಪರ್ 8ರ ಗುಂಪಿಗೆ ಸೇರಲಿವೆ?

ಎಲ್ಲಾ 4 ಗುಂಪುಗಳಲ್ಲಿ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ 8ರ ಹಂತದಲ್ಲಿ ಆಡಲು ಅರ್ಹತೆ ಪಡೆಯುತ್ತವೆ. ಆದರೆ ಯಾವ ತಂಡಗಳು ಸೂಪರ್ 8ರ ಗುಂಪುಗಳನ್ನು ಸೇರುತ್ತವೆ? ಸೂಪರ್ 8ರ ಹಂತದಲ್ಲಿ ʼAʼ ಮತ್ತು ʼBʼ ಎಂಬ ಎರಡು ಗುಂಪುಗಳಿರಲಿವೆ.

ಟೂರ್ನಿಯ ಗುಂಪು ಹಂತಗಳಲ್ಲಿ ʼAʼ ಮತ್ತು ʼCʼ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ 2 ತಂಡಗಳು ಹಾಗೂ ʼBʼ ಮತ್ತು ʼDʼ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ವೇಳೆ ʼAʼ ಗುಂಪಿನಲ್ಲಿ ಸ್ಥಾನ ಪಡೆಯುತ್ತವೆ. ʼBʼ ಮತ್ತು ʼDʼ ಗುಂಪಿನ ಅಗ್ರ 2 ತಂಡಗಳು ಹಾಗೂ ʼAʼ ಮತ್ತು ʼCʼ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ʼBʼ ಗುಂಪಿಗೆ ಸೇರಲಿವೆ.

ಇದನ್ನೂ ಓದಿ: ಅರ್ಷದೀಪ್ ಧರ್ಮ ನಿಂದಿಸಿದ್ದ ಅಕ್ಮಲ್! ನಾಲಾಯಕ್ ಎಂದು ಆಕ್ರೋಶ ಹೊರಹಾಕಿದ ಹರ್ಭಜನ್ ಸಿಂಗ್

ಸೂಪರ್ 8ಗೆ ಅರ್ಹತೆ ಪಡೆಯುವ ಪ್ರತಿಯೊಂದು ತಂಡವು 3 ಪಂದ್ಯಗಳನ್ನು ಆಡುತ್ತವೆ. ಗುಂಪಿನ ಇತರ ಎಲ್ಲಾ ಸದಸ್ಯರ ವಿರುದ್ಧ ತಲಾ 1 ಪಂದ್ಯ ಆಡಲಿವೆ. ಆ ಬಳಿಕ ʼAʼ ಮತ್ತು ʼBʼ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ತಲುಪಲಿವೆ. ಅಲ್ಲಿ ಗೆಲ್ಲುವ ತಂಡಗಳು 2024ರ ಟಿ-20 ವಿಶ್ವಕಪ್ ಪ್ರಶಸ್ತಿಗಾಗಿ ಫೈನಲ್‌ನಲ್ಲಿ ಕಾದಾಡಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More