Home> Sports
Advertisement

T20 World Cup 2022: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ, ಈ ದಿನ ನಡೆಯಲಿದೆ IND vs PAK ಪಂದ್ಯ

T20 World Cup 2022: ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ಪಂದ್ಯಾವಳಿಯ ಮೊದಲ 6 ದಿನಗಳು ಅಂದರೆ ಅಕ್ಟೋಬರ್ 16 ರಿಂದ ಅಕ್ಟೋಬರ್ 21 ರವರೆಗೆ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಅದರ ನಂತರ ಸೂಪರ್ 12 ರ ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗುತ್ತವೆ.

T20 World Cup 2022: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ, ಈ ದಿನ ನಡೆಯಲಿದೆ IND vs PAK ಪಂದ್ಯ

T20 World Cup 2022: 2022ರ ಟಿ20 ವಿಶ್ವಕಪ್‌ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. T20 ವಿಶ್ವಕಪ್ 2022ರ ಪಂದ್ಯಾವಳಿಯು ಅಕ್ಟೋಬರ್ 16 ರಿಂದ ನಡೆಯಲಿದೆ ಮತ್ತು ಅದರ ಫೈನಲ್ ಪಂದ್ಯವು ನವೆಂಬರ್ 13 ರಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.  ಪಂದ್ಯಾವಳಿಯ ಮೊದಲ 6 ದಿನಗಳು ಅಂದರೆ ಅಕ್ಟೋಬರ್ 16 ರಿಂದ ಅಕ್ಟೋಬರ್ 21 ರವರೆಗೆ ಭಾರತ  ಪಂದ್ಯಾವಳಿಯ ಮೊದಲ ಸುತ್ತಿನ ವಿರುದ್ಧ ಆಡಲಾಗುತ್ತದೆ. ಅದರ ನಂತರ ಸೂಪರ್ 12 ರ ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗುತ್ತವೆ.

ಈ ದಿನ ಭಾರತದ ಪಂದ್ಯಗಳು ನಡೆಯಲಿವೆ:
ಇಡೀ ಟೂರ್ನಿಯಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಭಾರತವು ಅಕ್ಟೋಬರ್ 23 ರಂದು ಪಾಕಿಸ್ತಾನದ (Ind Vs Pak) ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ, ಅಕ್ಟೋಬರ್ 27 ರಂದು ಎರಡನೇ ಪಂದ್ಯ ಎ ಗುಂಪಿನ ರನ್ನರ್ ಅಪ್ ತಂಡದೊಂದಿಗೆ ನಡೆಯಲಿದೆ. ಮೂರನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 30, ನಂತರ ನಾಲ್ಕನೇ ಪಂದ್ಯ ನವೆಂಬರ್ 2 ರಂದು ಬಾಂಗ್ಲಾದೇಶ ಮತ್ತು ಐದನೇ ಪಂದ್ಯ ನವೆಂಬರ್ 6 ರಂದು ಬಿ ಗುಂಪಿನ ವಿಜೇತರೊಂದಿಗೆ ನಡೆಯಲಿದೆ. 

ಇದನ್ನೂ ಓದಿ- ಈ ಕಾರಣದಿಂದಲೇ ಕೆಎಲ್ ರಾಹುಲ್ ಟೀಂ ಇಂಡಿಯಾ ಮುಂದಿನ ನಾಯಕನಾಗುವುದು ಕಷ್ಟ

ಟೂರ್ನಿಯಲ್ಲಿ 16 ತಂಡಗಳು ಆಡಲಿವೆ :
ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022 (T20 World Cup 2022) ಬಹಳ ರೋಚಕವಾಗಿರಲಿದೆ. ಇದರಲ್ಲಿ 16 ತಂಡಗಳು ಭಾಗವಹಿಸಲಿವೆ. ಟೂರ್ನಿಯ 12 ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ ಎಂಟರಲ್ಲಿವೆ. ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಮುಖ್ಯ ಸುತ್ತಿನ ಮೊದಲು ಅರ್ಹತಾ ಪಂದ್ಯಗಳನ್ನು ಆಡಲಿವೆ. ಉಳಿದ ನಾಲ್ಕು ತಂಡಗಳು ಕೂಡ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿವೆ. 

ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ :
2022ರ ಟಿ20 ವಿಶ್ವಕಪ್ (T20 Worldcup) ಆಸ್ಟ್ರೇಲಿಯಾದಲ್ಲಿ 7 ಮೈದಾನಗಳಲ್ಲಿ ನಡೆಯಲಿದೆ. 2022ರ ಟಿ20 ವಿಶ್ವಕಪ್ ಪಂದ್ಯಗಳು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಏಳು ಸ್ಥಳಗಳಲ್ಲಿ ನಡೆಯಲಿವೆ. ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್ ಫೈನಲ್ ನಡೆಯಲಿದೆ. ಅದೇ ಸಮಯದಲ್ಲಿ, ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10 ರಂದು ಸಿಡ್ನಿ ಕ್ರಿಕೆಟ್ ಮೈದಾನ ಮತ್ತು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಫೆಬ್ರವರಿ 7 ರಿಂದ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳ ಮಾರಾಟ ಪ್ರಾರಂಭವಾಗಲಿದೆ. 

ಇದನ್ನೂ ಓದಿ- ICC Test Rankings: ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ, ಮೂರನೇ ಸ್ಥಾನಕ್ಕೆ ಕುಸಿದ ಭಾರತ

15 ವರ್ಷಗಳ ಹಿಂದೆ ಭಾರತ ಪ್ರಶಸ್ತಿ ಗೆದ್ದಿತ್ತು :
ಮಹೇಂದ್ರ ಸಿಂಗ್ ಧೋನಿ (Mahendra Singh Dhoni)  ನಾಯಕತ್ವದಲ್ಲಿ ಭಾರತ 2007 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಆ ಬಳಿಕ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 2014ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಟೀಂ ಇಂಡಿಯಾ ಸೋಲನುಭವಿಸಿತ್ತು. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟ್ರೋಫಿ ಗೆದ್ದಿದೆ. ವೆಸ್ಟ್ ಇಂಡೀಸ್ 2012 ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಮತ್ತು 2016 ರಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. 

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಪ್ರೇಕ್ಷಕರ ಕಾತುರ:
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ವಿಶ್ವದಾದ್ಯಂತದ ಪ್ರೇಕ್ಷಕರು ಕಾಯುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 6 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 5 ರಲ್ಲಿ ಗೆದ್ದಿದೆ ಮತ್ತು ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 

ಟಿ20 ವಿಶ್ವಕಪ್ ವಿಜೇತ ತಂಡಗಳು: 
2007 -ಭಾರತ 
2009 -ಪಾಕಿಸ್ತಾನ 
2010 -ಇಂಗ್ಲೆಂಡ್ 
2012 -ವೆಸ್ಟ್ ಇಂಡೀಸ್
2014  -ಶ್ರೀಲಂಕಾ
2016 -ವೆಸ್ಟ್ ಇಂಡೀಸ್ 
2021  -ಆಸ್ಟ್ರೇಲಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More