Home> Sports
Advertisement

ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌

sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌

sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ಗೆ ಬಿಸಿಸಿಐ ರೋಹಿತ್, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ ಬುಮ್ರಾಗೆ ವಿಶ್ರಾಂತಿ ನೀಡುವುದು ಸರಿಯೇ, ಆದರೆ ಕೊಹ್ಲಿ-ರೋಹಿತ್ ಆಯ್ಕೆ ಯಾಕೆ ಮಾಡಿಲ್ಲ ಎಂದು ಬಿಸಿಸಿಐ ನಿರ್ಧಾರದ ಕುರಿತು ಗವಾಸ್ಕರ್ ಕಿಡಿ ಕಾರಿದ್ದಾರೆ.

ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಅಭ್ಯಾಸವಿಲ್ಲದೆ ಕಣಕ್ಕೆ ಇಳಿದರೆ ಅದು ಆಟದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘ ವಿರಾಮವು ಸ್ನಾಯುವಿನ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ, ಆದರಿಂದಾಗಿ ಸ್ಟಾರ್ ಬ್ಯಾಟ್ಸ್‌ಮನ್‌ಗಳು ದುಲೀಪ್ ಟ್ರೋಫಿಯನ್ನು ಆಡುವುದು ತುಂಬಾ ಮುಖ್ಯ ಎಂದು ಸುನಿಲ್‌ ಗವಾಸ್ಕರ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೂ, ಭಾರತ ಸೆಪ್ಟೆಂಬರ್ 19 ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಇದನ್ನೂ ಓದಿ: CSK ಗಾಗಿ ಧೋನಿ ಮಹಾ ತ್ಯಾಗ..8 ಕೋಟಿ ನಷ್ಟವಾದ್ರು ʻಈʼ ಡೀಲ್‌ ಒಪ್ಪಿದೇಕೆ ಮಾಹಿ..?

ದುಲೀಪ್ ಟ್ರೋಫಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಲಿಲ್ಲ. ಇದರೊಂದಿಗೆ ವಿಶ್ರಾಂತಿಯಲ್ಲಿರುವ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಯಾವುದೇ ಅಭ್ಯಾಸವಿಲ್ಲದೆ ನೇರವಾಗಿ ಆಡಲಿದ್ದಾರೆ. ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಬುಮ್ರಾಗೆ ವಿಶ್ರಾಂತಿ ನೀಡಿರುವುದರಲ್ಲಿ ಒಂದು ಅರ್ಥವಿದೆ. ಆದರೆ ಬ್ಯಾಟರ್‌ಗಳು ಮೈದಾನದಲ್ಲಿ ಸಮಯ ಕಳೆಯಬೇಕು. 35+ ವಯಸ್ಸಿನ ನಂತರ ನಿಯಮಿತವಾಗಿ ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದು ಆಟಗಾರರು ನಿಗದಿತ ಮಾನದಂಡಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಸುನಿಲ್‌ ಗವಾಸ್ಕರ್‌ ಹೇಳಿದ್ದಾರೆ.

"ಆದರೆ ದೀರ್ಘ ವಿರಾಮ ಉಂಟಾದರೆ, ಅವರ ಸ್ನಾಯುವಿನ ಸ್ಮರಣೆಯು ದುರ್ಬಲಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅವರು ಈ ಹಿಂದೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದು ಸುಲಭವಲ್ಲ" ಎಂದು ಗವಾಸ್ಕರ್ ಹೇಳಿದ್ದಾರೆ. 

ಏತನ್ಮಧ್ಯೆ, ಶುಭ್‌ಮನ್ ಗಿಲ್ ಅವರು ಟೀಮ್-ಎ ನಾಯಕರಾಗಿ, ಅಭಿಮನ್ಯು ಈಶ್ವರನ್ ಟೀಮ್-ಬಿ ನಾಯಕರಾಗಿ, ರುತುರಾಜ್ ಗಾಯಕ್ವಾಡ್ ಅವರು ಟೀಮ್-ಸಿ-ಸಿ ನಾಯಕರಾಗಿ ಮತ್ತು ಶ್ರೇಯಸ್ ಅಯ್ಯರ್ ಅವರು ದುಲೀಪ್ ಟ್ರೋಫಿಯಲ್ಲಿ ಟೀಮ್-ಡಿ-ಡಿ ನಾಯಕರಾಗಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More