Home> Sports
Advertisement

Sunil Gavaskar Dance: ʻಪುಷ್ಪಾʼ ಸಿನಿಮಾದ ʻಸಾಮಿ ಸಾಮಿʼ ಹಾಡಿಗೆ ಸುನಿಲ್ ಗವಾಸ್ಕರ್ ಡ್ಯಾನ್ಸ್

Sunil Gavaskar Dance in IPL 2023 : ಬೆರಗುಗೊಳಿಸುವ ಐಪಿಎಲ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಮೆಗಾಸ್ಟಾರ್‌ಗಳಾದ ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದನ್ಣ ತಮ್ಮ ಪ್ರದರ್ಶನದಿಂದ ಅಹಮದಾಬಾದ್ ಪ್ರೇಕ್ಷಕರನ್ನು ರಂಜಿಸಿದರು. ಈ ವೇಳೆ  'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡಿಗೆ ಸುನಿಲ್ ಗವಾಸ್ಕರ್ ಡ್ಯಾನ್ಸ್ ಮಾಡಿದ್ದು ಸಖತ್‌ ವೈರಲ್‌ ಆಗಿದೆ. 
 

Sunil Gavaskar Dance: ʻಪುಷ್ಪಾʼ ಸಿನಿಮಾದ ʻಸಾಮಿ ಸಾಮಿʼ ಹಾಡಿಗೆ ಸುನಿಲ್ ಗವಾಸ್ಕರ್ ಡ್ಯಾನ್ಸ್

Sunil Gavaskar Dance Video: ಐಪಿಎಲ್ 2023 ರ ಉದ್ಘಾಟನಾ ಸಮಾರಂಭದ ವೇಳೆ ಭಾರತೀಯ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ 'ಸಾಮಿ ಸಾಮಿ' ಹಾಡಿಗೆ ನೃತ್ಯ ಮಾಡುವ ವಿಡಿಯೋವನ್ನು ಆಸ್ಟ್ರೇಲಿಯನ್ ನಿರೂಪಕರಾದ ನೆರೋಲಿ ಮೆಡೋಸ್ ಅವರು Instagram ಗೆ ಪೋಸ್ಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ T20 ಲೀಗ್‌ನ 2023 ರ ಸೀಸನ್ - ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ಶುಕ್ರವಾರ (ಮಾರ್ಚ್ 31) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) vs ಗುಜರಾತ್ ಟೈಟಾನ್ಸ್ (GT) ಪಂದ್ಯದೊಂದಿಗೆ ಆರಂಭವಾಯಿತು. ಇದಕ್ಕೂ ಮುಂಚಿತವಾಗಿ ಬ್ಲಾಕ್‌ಬಾಸ್ಟರ್‌ ಉದ್ಘಾಟನಾ ಸಮಾರಂಭ ನಡೆಯಿತು. ಐಪಿಎಲ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಚಲನಚಿತ್ರೋದ್ಯಮದ ಮೆಗಾಸ್ಟಾರ್‌ಗಳಾದ ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಪ್ರದರ್ಶನ ನೀಡಿದರು.

ಇದನ್ನೂ ಓದಿ : MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ

ಏತನ್ಮಧ್ಯೆ, ಐಪಿಎಲ್ 2023 ರ ಆಸ್ಟ್ರೇಲಿಯನ್ ನಿರೂಪಕರಾದ ನೆರೋಲಿ ಮೆಡೋಸ್, ರಶ್ಮಿಕಾ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಭಾರತೀಯ ಬ್ಲಾಕ್‌ಬಸ್ಟರ್ 'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡಿಗೆ ಭಾರತೀಯ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ನೃತ್ಯ ಮಾಡುವ ವಿಡಿಯೋವನ್ನು ಸೆರೆ ಹಿಡಿದು Instagram ಗೆ ಪೋಸ್ಟ್ ಮಾಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Neroli Meadows (@nezm)

 

CSK vs GT IPL 2023 ಟೂರ್ನಮೆಂಟ್ ಓಪನರ್ ಕುರಿತು ಮಾತನಾಡುತ್ತಾ, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡ ಗೆಲುವಿನ ಮೂಲಕ ಐಪಿಎಲ್‌ ಆರಂಭಿಸಿತು. ಅವರು ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಸೋಲಿಸಿದರು. ಪಂದ್ಯಾವಳಿಯ ಇತಿಹಾಸದಲ್ಲಿ ಅವರ ವಿರುದ್ಧ ಅಜೇಯವಾಗಿ ಉಳಿದಿದೆ. 

ಇದನ್ನೂ ಓದಿ : ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್: ಆರ್ ಸಿಬಿಗೆ 172 ರನ್ ಟಾರ್ಗೆಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More