Home> Sports
Advertisement

ಟೆಸ್ಟ್’ನಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ: ಆದ್ರೂ ವಿಶ್ವಕ್ರಿಕೆಟ್’ನಲ್ಲಿ ಆಡಿದವರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದದ್ದು ಈ ಆಟಗಾರ!

Ravichandran Ashwin: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆ ಭಾರತದ ಪ್ಲೇಯಿಂಗ್ XI ಗೆ ಪ್ರವೇಶಿಸಲು ವಿಫಲರಾದ ರವಿಚಂದ್ರನ್ ಅಶ್ವಿನ್ 860 ಅಂಕಗಳೊಂದಿಗೆ ವಿಶ್ವದ ನಂ.1 ಬೌಲರ್ ಆಗಿ ಉಳಿದಿದ್ದಾರೆ. ರವಿಚಂದ್ರನ್ ಅಶ್ವಿನ್ ನಂತರ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ 829 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್’ನಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ: ಆದ್ರೂ ವಿಶ್ವಕ್ರಿಕೆಟ್’ನಲ್ಲಿ ಆಡಿದವರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದದ್ದು ಈ ಆಟಗಾರ!

R Ashwin Record: ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಆದರೆ ಅವರು ಇದ್ದಕ್ಕಿದ್ದಂತೆ ಪವಾಡ ಸೃಷ್ಟಿಸುವ ಮೂಲಕ ವಿಶ್ವ ಕ್ರಿಕೆಟ್‌ ನಲ್ಲಿ ಸಂಚಲನ ಮೂಡಿಸಿದ್ದಾರೆ. ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚಿನ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ್ಯಾಂಕಿಂಗ್‌ ನಲ್ಲಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Team Indiaಗೆ ಪಾಕ್’ನ ಈ 3 ಆಟಗಾರರಿಂದ ಬೆದರಿಕೆ! ಮುಂದೇನ್ಮಾಡ್ತಾರೆ ನಾಯಕ ರೋಹಿತ್?

ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆ ಭಾರತದ ಪ್ಲೇಯಿಂಗ್ XI ಗೆ ಪ್ರವೇಶಿಸಲು ವಿಫಲರಾದ ರವಿಚಂದ್ರನ್ ಅಶ್ವಿನ್ 860 ಅಂಕಗಳೊಂದಿಗೆ ವಿಶ್ವದ ನಂ.1 ಬೌಲರ್ ಆಗಿ ಉಳಿದಿದ್ದಾರೆ. ರವಿಚಂದ್ರನ್ ಅಶ್ವಿನ್ ನಂತರ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ 829 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಬೌಲರ್‌ಗಳ ಪೈಕಿ ಜಸ್ಪ್ರೀತ್ ಬುಮ್ರಾ (772) ಮತ್ತು ರವೀಂದ್ರ ಜಡೇಜಾ (765) ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಬೌಲರ್ ಗಳ ಪೈಕಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 825 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (824) ಅವರನ್ನು ಹಿಂದಿಕ್ಕಿದ್ದಾರೆ.

ಟೆಸ್ಟ್ ಬ್ಯಾಟ್ಸ್‌ಮನ್‌ ಗಳ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿದು 14 ನೇ ಸ್ಥಾನದಲ್ಲಿದ್ದರೆ, ನಾಯಕ ರೋಹಿತ್ ಶರ್ಮಾ 12 ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ 25ನೇ ಸ್ಥಾನದಲ್ಲಿ ಮುಂದುವರಿದರೆ, ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ತಲಾ ಒಂದು ಸ್ಥಾನ ಮೇಲೇರಿ ಕ್ರಮವಾಗಿ 36 ಮತ್ತು 37ನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಗ್ರ 10ರಲ್ಲಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದು 10 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ ನ ಜೋ ರೂಟ್ ಆಸ್ಟ್ರೇಲಿಯಾದ ಮಾರ್ನಸ್ ಲಬುಶೆನ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಐದು ಸ್ಥಾನಗಳ ಜಿಗಿತದೊಂದಿಗೆ ಲಬುಶೆನ್ ಅವರನ್ನು ಹಿಂದಿಕ್ಕಿ ರೂಟ್ ಬ್ಯಾಟ್ಸ್ ಮನ್ ರ ್ಯಾಂಕಿಂಗ್ ನಲ್ಲಿ ನಂಬರ್ ಒನ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಎಡ್ಜ್‌ಬಾಸ್ಟನ್‌ ನಲ್ಲಿ ನಡೆದ ರೋಚಕ ಮೊದಲ ಟೆಸ್ಟ್‌ ನಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಅನ್ನು ಎರಡು ವಿಕೆಟ್‌ ಗಳಿಂದ ಸೋಲಿಸಿ ಐದು ಟೆಸ್ಟ್‌ ಗಳ ಆಶಸ್‌ ನಲ್ಲಿ 1-0 ಮುನ್ನಡೆ ಸಾಧಿಸಿದ ಒಂದು ದಿನದ ನಂತರ ಶ್ರೇಯಾಂಕದಲ್ಲಿ ಬದಲಾವಣೆಯಾಗಿದೆ. ರೂಟ್ ಇಂಗ್ಲೆಂಡ್‌ ನ ಮೊದಲ ಇನ್ನಿಂಗ್ಸ್‌ ನಲ್ಲಿ 118 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿದರು, ಆದರೆ ಲಬುಶೆನ್ ಎರಡೂ ಇನ್ನಿಂಗ್ಸ್‌ ಗಳಲ್ಲಿ ಬ್ಯಾಟ್‌ ನೊಂದಿಗೆ ಪ್ರಭಾವ ಬೀರಲು ವಿಫಲರಾದರು. ಇಂಗ್ಲೆಂಡ್ ವಿರುದ್ಧ ಶೂನ್ಯ ಹಾಗೂ 13 ರನ್ ಗಳಿಸಿದ್ದ ಲಬುಶೆನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಎರಡು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.

ಇದನ್ನೂ ಓದಿ: ಬ್ಯಾಟಿಂಗ್- ವಿಕೆಟ್ ಕೀಪಿಂಗ್’ನಲ್ಲಿ ಧೋನಿ ಆಟ ನೆನಪಿಸುವ ಈ ಆಟಗಾರ Team Indiaಗೆ ಹೆಜ್ಜೆ!

ಅಗ್ರ ಆರು ಬ್ಯಾಟ್ಸ್‌ಮನ್‌ಗಳ ನಡುವೆ ಕೇವಲ 26 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸ:

ಆಸ್ಟ್ರೇಲಿಯದ ಟ್ರಾವಿಸ್ ಹೆಡ್ (ಒಂದು ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನಕ್ಕೆ) ಮತ್ತು ಸ್ಟೀವ್ ಸ್ಮಿತ್ (ನಾಲ್ಕು ಸ್ಥಾನ ಕೆಳಗಿಳಿದು ಆರನೇ ಸ್ಥಾನಕ್ಕೆ) ಕೂಡ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‌ಮನ್ ಆಗುವ ರೇಸ್‌ ನಲ್ಲಿ ನೆಲಕಚ್ಚಿದ್ದಾರೆ. ಅಗ್ರ ಆರು ಬ್ಯಾಟ್ಸ್‌ಮನ್‌ ಗಳ ನಡುವೆ ಕೇವಲ 26 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸವಿದೆ. ಬೌಲರ್ ಗಳ ಪೈಕಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 825 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (824) ಅವರನ್ನು ಹಿಂದಿಕ್ಕಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More