Home> Sports
Advertisement

IPL 2022 Auction : 10 ತಂಡಗಳ ಬಳಿ ಎಷ್ಟು ಹಣವಿದೆ? ಎಷ್ಟು ಆಟಗಾರರಿಗೆ ಅವಕಾಶವಿದೆ?

ಈ ಹರಾಜಿಗಾಗಿ ಪಂದ್ಯಾವಳಿಯ 10 ತಂಡಗಳ ಬಳಿ ಎಷ್ಟು ಹಣ ಮತ್ತು ಎಷ್ಟು ಸ್ಥಳಗಳು ಆಟಗಾರರಿಗೆ ಅವಕಾಶವಿದೆ ನೋಡಿ....

IPL 2022 Auction : 10 ತಂಡಗಳ ಬಳಿ ಎಷ್ಟು ಹಣವಿದೆ? ಎಷ್ಟು ಆಟಗಾರರಿಗೆ ಅವಕಾಶವಿದೆ?

ಫೆಬ್ರವರಿ 12 ಮತ್ತು 13 ರಂದು ಐಪಿಎಲ್ 15 ನೇ ಸೀಸನ್‌ಗಾಗಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗಾಗಿ ಪಂದ್ಯಾವಳಿಯ 10 ತಂಡಗಳ ಬಳಿ ಎಷ್ಟು ಹಣ ಮತ್ತು ಎಷ್ಟು ಸ್ಥಳಗಳು ಆಟಗಾರರಿಗೆ ಅವಕಾಶವಿದೆ ನೋಡಿ....

10 ತಂಡಗಳಿಗೆ ಮೆಗಾ ಹರಾಜು ಕಾರ್ಯಕ್ರಮ ಆಯೋಜನೆ 

ಬಹಳ ದಿನಗಳ ನಂತರ 10 ತಂಡಗಳು ಐಪಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹೊಸ ಸೀಸನ್ ಆರಂಭಕ್ಕೂ ಮುನ್ನ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ.

ಇದನ್ನೂ ಓದಿ : Sourav Ganguly : ಗಂಗೂಲಿಗೆ ಈ ಇಬ್ಬರ ಆಟಗಾರರ ಮೇಲೆ ಅಸಮಾಧಾನ! ಅದಕ್ಕೆ ಟೀಂನಿಂದ ಹೊರಗೆ

ಪಂಜಾಬ್ ಕಿಂಗ್ಸ್ ವ್ಯಾಲೆಟ್‌ನಲ್ಲಿ ಹೆಚ್ಚಿನ ಹಣ 

ಈ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ PBKS ಲೂಟಿ ಮಾಡಲು ಹೆಚ್ಚು ಹಣ ಹೊಂದಿರುತ್ತದೆ. ಈ ಟೀಂ ಬಳಿ 72 ಕೋಟಿ ರೂಪಾಯಿಗಳಿದ್ದು, 8 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 23 ಆಟಗಾರರನ್ನು ಖರೀದಿಸಲಿದೆ.

ಸನ್ ರೈಸರ್ಸ್ ಬಳಿ 68 ಕೋಟಿ ರೂ.  

ಸನ್‌ರೈಸರ್ಸ್ ಹೈದರಾಬಾದ್ ಬಳಿ ಒಟ್ಟು 68 ಕೋಟಿ ರೂ.ಗಳನ್ನು ಹೊಂದಿದೆ, ಆದರೆ ಅದು ತನ್ನ ತಂಡದಲ್ಲಿ 7 ವಿದೇಶಿಯರನ್ನು ಒಳಗೊಂಡಂತೆ ಗರಿಷ್ಠ 22 ಆಟಗಾರರನ್ನು ಖರೀದಿಸಬಹುದು.

ರಾಜಸ್ಥಾನ್ ರಾಯಲ್ಸ್ ಅತ್ಯಧಿಕ ಮೊತ್ತದಲ್ಲಿ 3ನೇ ಸ್ಥಾನದಲ್ಲಿದೆ 

ರಾಜಸ್ಥಾನ್ ರಾಯಲ್ಸ್ RR ತಂಡವು 62 ಕೋಟಿ ರೂಪಾಯಿ ಹೊಂದಿರುವ ಮೂಲಕ ಮೂರನೇ ಸ್ಥಾನದಲ್ಲಿದೆ. 7 ವಿದೇಶಿ ಆಟಗಾರರೊಂದಿಗೆ ಒಟ್ಟು 22 ಆಟಗಾರರನ್ನು ಖರೀದಿಸಿಕೊಳ್ಳಬಹದು 

ಲಕ್ನೋ ತಂಡದ ಬಳಿ 59 ಕೋಟಿ 

ಐಪಿಎಲ್‌ನ ಅತ್ಯಂತ ದುಬಾರಿ ಮತ್ತು ಹೊಸ ತಂಡವಾದ ಲಕ್ನೋ ಸೂಪರ್ ಜೈಂಟ್ಸ್‌ನ ಪರ್ಸ್‌ನಲ್ಲಿ ಇನ್ನೂ 59 ಕೋಟಿ ರೂಪಾಯಿ ಉಳಿದಿದೆ, ಆದರೆ 3 ಆಟಗಾರರನ್ನು ಖರೀದಿಸಿದೆ. ಈ ತಂಡದಲ್ಲಿ ಇನ್ನೂ 7 ವಿದೇಶಿಗರು ಸೇರಿದಂತೆ 22 ಆಟಗಾರರು ಉಳಿದಿದ್ದಾರೆ.

ಇದನ್ನೂ ಓದಿ : ಐಪಿಎಲ್ ಮೆಗಾ ಹರಾಜಿನಿಂದ ದಿಢೀರ್ ಹೊರ ಬಿದ್ದ RCB ಬೌಲರ್, ಬಯಲಾಯಿತು ಕಾರಣ

ಆರ್‌ಸಿಬಿ ಖಾತೆಯಲ್ಲಿ 57 ಕೋಟಿ ಹಣ ಉಳಿದಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 57 ಕೋಟಿ ಬಾಕಿ ಇದೆ. ಈ ತಂಡದಲ್ಲಿ 7 ವಿದೇಶಿಯರು ಸೇರಿದಂತೆ ಒಟ್ಟು 22 ಆಟಗಾರರನ್ನು ಖರೀದಿಸಬಹುದು.

ಅಹಮದಾಬಾದ್‌ ತಂಡದ ಬಳಿ ಇದೆ 52 ಕೋಟಿ ರೂ.

ಐಪಿಎಲ್‌ನ ಎರಡನೇ ಹೊಸ ತಂಡ, ಅಹಮದಾಬಾದ್‌ ಟೀಂ ಬಳಿ 52 ಕೋಟಿ ರೂಪಾಯಿ ಉಳಿದಿದೆ. ಈ ಟೀಂನಲ್ಲಿ  7 ವಿದೇಶಿಯರು ಸೇರಿದಂತೆ ಒಟ್ಟು 22 ಆಟಗಾರರನ್ನು ಖರೀದಿಸಲಿದೆ.

ಮೂರು ಚಾಂಪಿಯನ್ ತಂಡಗಳ ಒಂದು ನೋಟ 

ಚೆನ್ನೈ ಸೂಪರ್ ಕಿಂಗ್ಸ್ ಸಿಎಸ್‌ಕೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ಎಂಐ ಈ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಾಗಿವೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ, ಎಲ್ಲಾ ಮೂರು ತಂಡಗಳು ತಮ್ಮ ಸಮೀಕರಣಗಳನ್ನು ಒಂದೇ ರೀತಿ ಇಟ್ಟುಕೊಂಡಿವೆ. ಈ ಮೂರು ತಂಡಗಳ ಬಳಿ ಒಟ್ಟು 48 ಕೋಟಿ ರೂಪಾಯಿ ಉಳಿದಿದ್ದು, ಮೂವರು ತಂಡಗಳ ಬಳಿ ಒಟ್ಟು 21 ಹೊಸ ಆಟಗಾರರನ್ನು ಖರೀದಿಸಲಿವೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಹಾಲ್...!

KKR ಬಳಿ 6 ವಿದೇಶಿಗರಿಗೆ ಅವಕಾಶ 

ಮೂರು ತಂಡಗಳಲ್ಲಿ ವಿದೇಶಿ ಆಟಗಾರರ ಉಳಿಸಿಕೊಳ್ಳಲು ಚೆನ್ನೈ ಮತ್ತು ಮುಂಬೈ ಬಳಿ 7 ಆಟಗಾರರಿಗೆ ಜಾಗವಿದೆ.  ಕೆಕೆಆರ್ ಬಳಿ ಬರೀ 6 ಜನರಿಗೆ ಅವಕಾಶವಿದೆ. 

ದೆಹಲಿ ಕ್ಯಾಪಿಟಲ್ಸ್ ಬಳಿ ಉಳಿದಿರುವ ಕಡಿಮೆ ಮೊತ್ತ

ಹರಾಜು ಪರ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕನಿಷ್ಠ 47.5 ಕೋಟಿ ರೂ. ತನ್ನ ತಂಡದಲ್ಲಿ 7 ವಿದೇಶಿಯರು ಸೇರಿದಂತೆ ಒಟ್ಟು 21 ಆಟಗಾರರನ್ನು ಕರೆತರಲು ಸಾಧ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More