Home> Sports
Advertisement

ರಾಜಕೀಯ ಪ್ರವೇಶಿಸಲಿದ್ದಾರೆಯೇ Sourav Ganguly...? ಈ ವರದಿಯನ್ನೊಮ್ಮೆ ಓದಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ರಾಜಕೀಯ ಪ್ರವೇಶದ ಕುರಿತಾದ ಊಹಾಪೋಹಗಳು ತೀವ್ರಗೊಂಡಿವೆ.

ರಾಜಕೀಯ ಪ್ರವೇಶಿಸಲಿದ್ದಾರೆಯೇ Sourav Ganguly...? ಈ ವರದಿಯನ್ನೊಮ್ಮೆ ಓದಿ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ರಾಜಕೀಯ ಪ್ರವೇಶದ ಕುರಿತಾದ ಊಹಾಪೋಹಗಳು ತೀವ್ರಗೊಂಡಿವೆ. ಇಂದು ಬಿಸಿಸಿಐ ಅಧ್ಯಕ್ಷರು ಆಗಿರುವ ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಭೆಯ ನಂತರ ಅವರು ರಾಜಕೀಯ ಪ್ರವೇಶಿಸಬಹುದು ಎಂದು ನಂಬಲಾಗಿದೆ. ಆದರೂ ಕೂಡ ಇದೊಂದು ವೈಯಕ್ತಿಕ ಹಾಗೂ ಸೌಹಾರ್ದ ಭೇಟಿಯಾಗಿದೆ ಎಂದೇ ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಗಂಗೂಲಿ ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ರಾಜ್ಯಪಾಲ ಜಗದೀಪ್ ಧಂಕರ್ ಅವರೊಂದಿಗಿನ ಗಂಗೂಲಿ ಅವರ ಈ ಭೇಟಿ ಈ ಊಹಾಪೋಹಗಳಿಗೆ  ಮತ್ತಷ್ಟು ಪುಷ್ಟಿ ನೀಡಿದೆ.  ಇಂದೇ ಗಂಗೂಲಿ ಅವರು ಪಶ್ಚಿಮ ಬಂಗಾಳದಲ್ಲಿ ನ್ಯಾಯಯುತ ಚುನಾವಣೆ ನಡೆಸುವ ಪರ ವಕಾಲತ್ತು ಕೂಡ ವಹಿಸಿದ್ದಾರೆ.

ಇದನ್ನು ಓದಿ-ವಿರಾಟ್ ಕೊಹ್ಲಿಗೆ 'ದಾದಾ' ಕೊಟ್ಟ ಆ ಸಲಹೆ ಏನು?

BCCI ಅಧ್ಯಕ್ಷರಾದ ಬಳಿಕವೆ ಈ ಊಹಾಪೋಹಗಳು ತೀವ್ರಗೊಂಡಿವೆ
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದಾಗಿನಿಂದಲೇ ಅವರ ಬಿಜೆಪಿ ಪ್ರವೇಶದ ಕುರಿತಾದ ಊಹಾಪೋಹಗಳು ತೀವ್ರಗೊಂಡಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಗಂಗೂಲಿ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದನ್ನು ಓದಿ-2003ರ ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕಿತ್ತು : ಸೌರವ್ ಗಂಗೂಲಿ

ಮೂಲಗಳು ನೀಡಿರುವ ವರದಿಗಳ ಪ್ರಕಾರ ಜನವರಿ 12ರಂದು ಸ್ವಾಮಿ ವಿವೆಕಾನಂದರ ಜಯಂತಿಯ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವರು ಬಿಜೆಪಿಯಲ್ಲಿ ಶಾಮೀಲಾಗಲಿದ್ದಾರೆ ಎನ್ನಲಾಗುತ್ತಿದೆ. ಗಂಗೂಲಿ (Sourav Ganguly) ಕೂಡ ಇದೆ ಕಾರ್ಯಕ್ರಮ ವೇಳೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ-ಮತ್ತೊಮ್ಮೆ, ವಿರಾಟ್ ಜೊತೆಯಾದ 'ದಾದಾ'

ಬಿಜೆಪಿ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ
ಇದಕ್ಕೂ ಮೊದಲು ಕೊಲ್ಕತ್ತಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಂಗಾಳದ ಭೂಮಿಪುತ್ರನೆ ಮುಂದಿನ ಬಂಗಾಳದ ಸಿಎಂ ಆಗಲಿದ್ದಾರೆ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಅವರೇ ಆ ಭೂಮಿಪುತ್ರನಾಗಿದ್ದಾರೆ ಎಂಬುದರ ಕುರಿತು ಊಹಾಪೋಹಗಳು ಕೇಳಿಬರಲಾರಂಭಿಸಿವೆ. ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಮುಖಂಡೆ ವೈಶಾಲಿ ದಾಲ್ಮಿಯಾ ಕೂಡ ರಾಜ್ಯಪಾಲರ ಜೊತೆಗೆ ಭೇಟಿ ನಡೆಸಿದ್ದರು. ಅಷ್ಟೇ ಅಲ್ಲ ವೈಶಾಲಿ ದಾಲ್ಮಿಯಾ ಅವರೊಂದಿಗೆ ಸೌರವ್ ಗಂಗೂಲಿ ನಿಕಟ ಸಂಪರ್ಕ ಹೊಂದಿದ್ದಾರೆ ಎಂದೂ ಕೂಡ ಹೇಳಲಾಗುತ್ತದೆ. ಪಿಎಂ ಮೋದಿ ಹಾಗೂ ಅಮಿತ್ ಷಾ ಅವರನ್ನು ಮಮತಾ ಹೊರಗಿನವರು ಎಂದು ಹೇಳಿದ್ದಕ್ಕೆ ವೈಶಾಲಿ ದಾಲ್ಮಿಯಾ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More