Home> Sports
Advertisement

ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ನನ್ನ ಕೆನ್ನೆಗೆ ಬಾರಿಸಿದ್ದರು: ರಾಸ್ ಟೇಲರ್ ಗಂಭೀರ ಆರೋಪ

2011ರಲ್ಲಿ IPL ಟೂರ್ನಿ  ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಫ್ರ್ಯಾಂಚೈಸಿ ಮಾಲೀಕರು ನನಗೆ ಕಪಾಳಮೋಕ್ಷ ಮಾಡಿದ್ದರು ರಾಸ್ ಟೇಲರ್ ಆರೋಪಿಸಿದ್ದಾರೆ.  

ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ನನ್ನ ಕೆನ್ನೆಗೆ ಬಾರಿಸಿದ್ದರು: ರಾಸ್ ಟೇಲರ್ ಗಂಭೀರ ಆರೋಪ

ನವದೆಹಲಿ: ಐಪಿಎಲ್ ಪಂದ್ಯಾವಳಿಯ ವೇಳೆ ಸೊನ್ನೆಗೆ ಔಟಾಗಿದ್ದಕ್ಕೆ ನನ್ನ ಕೆನ್ನೆಗೆ ಮೂರ್ನಾಲ್ಕು ಬಾರಿ ಬಾರಿಸಿದ್ದರು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಗಂಭೀರ ಆರೋಪ ಮಾಡಿದ್ದಾರೆ. 2011ರಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಫ್ರ್ಯಾಂಚೈಸಿ ಮಾಲೀಕರು ನನಗೆ ಕಪಾಳಮೋಕ್ಷ ಮಾಡಿದ್ದರು ಅವರು ಆರೋಪಿಸಿದ್ದಾರೆ.   

ಸೊನ್ನೆ ಸುತ್ತಿದ್ದ ರಾಸ್ ಟೇಲರ್

2011ರಲ್ಲಿ ಟಾಸ್ ಟೇಲರ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. ಆ ಟೂರ್ನಿ ವೇಳೆ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೇಲರ್ ಸೊನ್ನೆ ಸುತ್ತಿದ್ದರು. ಇದರಿಂದ ಕೋಪಿಸಿಕೊಂಡಿದ್ದ ತಂಡದ ಮಾಲೀಕರು ನನಗೆ ಕಪಾಳಮೋಕ್ಷ ಮಾಡಿದ್ದರು ಎಂದು ಟೇಲರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Women IPL : ಕ್ರಿಕೆಟ್ ಫ್ಯಾನ್ಸ್ ಗೆ ಸಿಹಿ ಸುದ್ದಿ : ಮುಂದಿನ ವರ್ಷ ಇದೇ ತಿಂಗಳಿನಲ್ಲಿ ಮಹಿಳಾ IPL ಆರಂಭ!

ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್‌ ಅಂಡ್ ವೈಟ್‌’ನಲ್ಲಿ ಈ ಮಾಹಿತಿಯನ್ನು ರಾಸ್ ಟೇಲರ್ ಉಲ್ಲೇಖಿಸಿದ್ದಾರೆ. ‘ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡವು 194 ರನ್‌ ಗಳಿಸಿತ್ತು. ರಾಜಸ್ಥಾನ ರಾಯಲ್ಸ್ ಗೆಲುವಿನ ಗುರಿ ಬೆನ್ನಟ್ಟಿತ್ತು. 195 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟುವ ವೇಳೆ ನಾನು LBW ಆಗಿದ್ದೆ. ಪರಿಣಾಮ ನಮ್ಮ ತಂಡ ಗುರಿಯ ಸನಿಹಕ್ಕೆ ಹೋಗಲು ಆಗಿರಲಿಲ್ಲ. ಪಂದ್ಯ ಮುಗಿದ ಬಳಿಕ ನಾನು ಸೇರಿದಂತೆ ತಂಡದ ಆಟಗಾರರು, ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಹೋಟೆಲ್‌ನ ಮಹಡಿಯಲ್ಲಿರುವ ಬಾರ್‌ನಲ್ಲಿದ್ದೇವೆ. ಈ ವೇಳೆ ಲಿಝ್ ಹರ್ಲೆ ಅವರು ಶೇನ್ ವಾರ್ನ್ ಅವರ ಜೊತೆಗಿದ್ದರು’ ಎಂದು ಟೇಲರ್ ಹೇಳಿದ್ದಾರೆ.

‘ಈ ವೇಳೆ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕರು ನನ್ನ ಬಳಿ ಬಂದರು. ನೀನು ಸೊನ್ನೆ ಸುತ್ತಲೆಂದು ನಾವು ನಿನಗೆ ಲಕ್ಷಾಂತರ ರೂ. ಹಣ ಕೊಡುತ್ತಿಲ್ಲ ಅಂತಾ ಹೇಳೆ ನನ್ನ ಕೆನ್ನೆಗೆ ಮೂರ್ನಾಲ್ಕು ಸಲ ಹೊಡೆದರು. ನನಗೆ ಕಪಾಳಮೋಕ್ಷ ಮಾಡುವ ವೇಳೆ ಅವರು ನಗುತ್ತಿದ್ದರು. ನನಗೆ ಅವರ ಹೊಡೆತದಿಂದ ಅಷ್ಟೇನೂ ಪೆಟ್ಟಾಗಿರಲಿಲ್ಲ. ಆದರೆ, ಅವರು ನನಗೆ ಹೊಡೆಯುವಂತೆ ನಟಿಸಿದರೆಂದು ಸಹ ಹೇಳುವಂತಿಲ್ಲ’ವೆಂದು ಟೇಲರ್ ಬರೆದುಕೊಂಡಿದ್ದಾರೆ. ರಾಸ್ ಟೇಲರ್ 2008 ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ 2011ರಲ್ಲಿ ರಾಜಸ್ಥಾನ ತಂಡದಲ್ಲಿ ಆಡಿದ್ದರು. ನಂತರ ಡೆಲ್ಲಿ ಹಾಗೂ ಪುಣೆ ವಾರಿಯರ್ಸ್‌ ಇಂಡಿಯಾ ತಂಡದಲ್ಲಿ ಸಹ ಆಡಿದ್ದರು.

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮತ್ತೊಬ್ಬ ಬಲಿಷ್ಠ ಬ್ಯಾಟ್ಸ್‌ಮನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More