Home> Sports
Advertisement

2019 ರಲ್ಲಿ ದಾಖಲೆಯ ದೇಣಿಗೆ ಸಂಗ್ರಹಿಸಿದ ಶಿರಡಿ ಸಾಯಿಬಾಬಾ

ಪ್ರಸಿದ್ಧ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಡಿಸೆಂಬರ್ 31 ರಂದು 24 ಗಂಟೆಗಳ ಕಾಲ ದೇವಾಲಯವನ್ನು ತೆರೆದಿಡಲು ದೇವಾಲಯ ಪ್ರಾಧಿಕಾರ ನಿರ್ಧರಿಸಿದೆ. 

2019 ರಲ್ಲಿ ದಾಖಲೆಯ ದೇಣಿಗೆ ಸಂಗ್ರಹಿಸಿದ ಶಿರಡಿ ಸಾಯಿಬಾಬಾ

ಶಿರಡಿ: ಶಿರಡಿ ಸಾಯಿಬಾಬಾ ದೇವಸ್ಥಾನವು ಈ ವರ್ಷ (2019)ದಲ್ಲಿ ಒಟ್ಟು 287 ಕೋಟಿ 6 ಲಕ್ಷ 85 ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆದಿದೆ. ಈ ವರ್ಷ 156 ಕೋಟಿ 49 ಲಕ್ಷ 2350 ರೂಪಾಯಿಗಳನ್ನು ರಹಸ್ಯವಾಗಿ ನೀಡಲಾಯಿತು. ಒಟ್ಟು ದೇಣಿಗೆ 60 ಕೋಟಿ 84 ಲಕ್ಷ 8 ಸಾವಿರ 590 ರೂಪಾಯಿ ನಗದು ಮತ್ತು 23 ಕೋಟಿ 35 ಲಕ್ಷ 90 ಸಾವಿರ 409 ರೂಪಾಯಿ ಚೆಕ್ ಮತ್ತು ಡಿಡಿ ಠೇವಣಿ ಒಳಗೊಂಡಿದೆ.

ಇದಲ್ಲದೆ,  2 ಕೋಟಿ 17 ಲಕ್ಷ 83 ಸಾವಿರ 515 ರೂಪಾಯಿ ಮತ್ತು 17 ಕೋಟಿ 59 ಲಕ್ಷ 11 ಸಾವಿರ 424 ರೂಪಾಯಿ ಡೆಬಿಟ್ / ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸಹ ಸ್ವೀಕರಿಸಲಾಗಿದೆ. 16 ಕೋಟಿ 2 ಲಕ್ಷ 51 ಸಾವಿರ 606 ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ಪಾವತಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಮೂಲಕ ನೀಡಿದ ದೇಣಿಗೆಯಲ್ಲಿ 19048.860 ಗ್ರಾಂ ಚಿನ್ನ ಮತ್ತು 391757.470 ಗ್ರಾಂ ಬೆಳ್ಳಿ ಸೇರಿದೆ.

ಸಾಯಿಬಾಬಾ ಟ್ರಸ್ಟ್ ಪ್ರಾಧಿಕಾರ ಹಂಚಿಕೊಂಡ ಹಿಂದಿನ ದಾಖಲೆಗಳ ಪ್ರಕಾರ, ದೇವಾಲಯವು 2018 ರ ಡಿಸೆಂಬರ್ 22 ರಿಂದ 2019 ರ ಜನವರಿ 1 ರವರೆಗೆ 11 ದಿನಗಳಲ್ಲಿ 14.54 ಕೋಟಿ ರೂ. ದೇಣಿಗೆಯನ್ನು ಪಡೆದಿದೆ. ಈ ಅವಧಿಯಲ್ಲಿ 9.5 ಲಕ್ಷ ಭಕ್ತರು ದೇವಾಲಯದಲ್ಲಿ ಸಾಯಿಬಾಬಾರ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ರಜಾದಿನದ ಕಾರಣ ಸಾಮಾನ್ಯ ದಿನಗಳಿಗಿಂತ ಕ್ರಿಸ್‌ಮಸ್‌ನಿಂದ ಹೊಸ ವರ್ಷದ ವರೆಗೆ ಅಧಿಕ ಸಂಖ್ಯೆಯಲ್ಲಿ ಜನರು ಶಿರಡಿ ಸಾಯಿಬಾಬಾರ ದರ್ಶನ ಪಡೆಯುತ್ತಾರೆ ಎಂದು ದೇವಾಲಯ ತಿಳಿಸಿದೆ.

ಈ ವರ್ಷವೂ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಮತ್ತು ಡಿಸೆಂಬರ್ 31 ರಂದು 24 ಗಂಟೆಗಳ ಕಾಲ ದೇವಾಲಯವನ್ನು ತೆರೆದಿಡಲು ದೇವಾಲಯ ಪ್ರಾಧಿಕಾರ ನಿರ್ಧರಿಸಿದೆ. ಹಲವಾರು ಭಕ್ತರು ವರ್ಷದ ಮೊದಲ ದಿನದಂದು ದರ್ಶನ ಬಯಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ವಿಶೇಷ ಸಂದರ್ಭಗಳಲ್ಲಿ ಕೂಡ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸ್ಥಳಾವಕಾಶ ಕಲ್ಪಿಸಲು ದೇವಾಲಯದ ಅಧಿಕಾರಿಗಳು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

ಸಾಮಾನ್ಯ ದಿನಚರಿಯಲ್ಲಿ, ದೇವಾಲಯವು ಬೆಳಿಗ್ಗೆ 4.30 ಕ್ಕೆ ತೆರೆಯುತ್ತದೆ ಮತ್ತು ರಾತ್ರಿ 10.30 ಕ್ಕೆ ಮುಚ್ಚುತ್ತದೆ.

Read More