Home> Sports
Advertisement

ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಶ್ರೀಶಾಂತ್

ಈ ವರ್ಷ ರಣಜಿ ಟ್ರೋಫಿಯಲ್ಲಿ ತಮ್ಮ ಮೊದಲ ಪ್ರಥಮ ದರ್ಜೆಯ ಋತುವಿಗೆ ಮರಳಿದ ಎಸ್ ಶ್ರೀಶಾಂತ್ ಅವರು ಎಲ್ಲಾ ರೀತಿಯ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಶ್ರೀಶಾಂತ್

ನವದೆಹಲಿ: ಈ ವರ್ಷ ರಣಜಿ ಟ್ರೋಫಿಯಲ್ಲಿ ತಮ್ಮ ಮೊದಲ ಪ್ರಥಮ ದರ್ಜೆಯ ಋತುವಿಗೆ ಮರಳಿದ ಎಸ್ ಶ್ರೀಶಾಂತ್ (S.Sreesanth) ಅವರು ಎಲ್ಲಾ ರೀತಿಯ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಟ್ವಿಟರ್‌ನಲ್ಲಿ ನಿವೃತ್ತಿ ಘೋಷಿಸಿದ ಅವರು ಟೀಂ ಇಂಡಿಯಾವನ್ನು ಪ್ರತಿನಿಧಿಸುವುದು ಗೌರವದ ಸಂಗತಿ ಎಂದು ಹೇಳಿದ್ದಾರೆ.

"ನನ್ನ ಕುಟುಂಬ, ನನ್ನ ಸಹ ಆಟಗಾರರು ಮತ್ತು ಭಾರತದ ಜನರನ್ನು ಮತ್ತು ಆಟವನ್ನು ಪ್ರೀತಿಸುವ ಪ್ರತಿಯೊಬ್ಬರನ್ನು ಪ್ರತಿನಿಧಿಸುವುದು ಗೌರವದ ಸಂಗತಿಯಾಗಿದೆ. ಮತ್ತು ಈಗ ನಾನು ತುಂಬಾ ದುಃಖದಿಂದ ಆದರೆ ಯಾವುದೇ ವಿಷಾದವಿಲ್ಲದೆ, ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ: ನಾನು ಭಾರತೀಯ ದೇಶೀಯ (ಪ್ರಥಮ ದರ್ಜೆ ಮತ್ತು ಎಲ್ಲಾ ಮಾದರಿಗಳ) ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ" ಎಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ಗೆ ಮರಳಲು ಸಿದ್ಧ ಎಂದ ಎಸ್.ಶ್ರೀಶಾಂತ್...! ಮೂರು ಫೇವರಿಟ್ ತಂಡಗಳು ಇಲ್ಲಿವೆ

"ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ..ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಲು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ ಈ ನಿರ್ಧಾರ ನನ್ನದು ಮಾತ್ರ, ಮತ್ತು ಇದು ನನಗೆ ಸಂತೋಷವನ್ನು ತರುವುದಿಲ್ಲ ಎಂದು ನನಗೆ ತಿಳಿದಿದ್ದರೂ, ಇದು ನನ್ನ ಜೀವನದಲ್ಲಿ ಈ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ಮತ್ತು ಗೌರವಾನ್ವಿತ ಕ್ರಮವಾಗಿದೆ.ಈ ಹಿನ್ನಲೆಯಲ್ಲಿ ನಾನು ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ,”ಎಂದು ಅವರು ಹೇಳಿದರು.

ಶ್ರೀಶಾಂತ್ ಅವರು (S.Sreesanth) ಭಾರತದ ಪರ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಕ್ರಮವಾಗಿ 87 ಮತ್ತು 75 ವಿಕೆಟ್ ಪಡೆದಿದ್ದಾರೆ. 10 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ಏಳು ವಿಕೆಟ್ ಪಡೆದಿದ್ದಾರೆ.

Read More