Home> Sports
Advertisement

ತಾಯಿಯನ್ನು ಕಡೆಗಣಿಸಿದ ರೋಹಿತ್‌ ಶರ್ಮಾ..? ನಾಯಕನ ವರ್ತನೆ ಕಂಡು ನೆಟ್ಟಿಗರು ಫುಲ್‌ ಗರಂ..!

Rohith Sharma Ignoring Mother: ಟೀಂ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಅವರ ವರ್ತನೆ ಕಂಡು ಫ್ಯಾನ್ಸ್‌ ಫುಲ್‌ ಗರಂ ಆಗಿದ್ದಾರೆ. ಟಿ20 ವಿಶ್ವಕಪ್-2024 ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಲೀಗ್ ಹಂತದಿಂದ ಫೈನಲ್‌ವರೆಗೆ ಅಜೇಯರಾಗಿ ಉಳಿದಿದ್ದ ರೋಹಿತ್ ಸೇನೆ, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಇದರೊಂದಿಗೆ ಹದಿಮೂರು ವರ್ಷಗಳ ಬಳಿಕ ಭಾರತದ ಖಾತೆಗೆ ಮತ್ತೊಂದು ವಿಶ್ವಕಪ್ ಟ್ರೋಫಿ ಸೇರ್ಪಡೆಯಾಗಿದೆ.
 
ಇದರೊಂದಿಗೆ ಐಸಿಸಿ ಪ್ರಶಸ್ತಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತವರಿನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮುಂಬೈಗೆ ತೆರಳಿದ್ದ ರೋಹಿತ್ ಸೇನಾ ಬಸ್ ಪರೇಡ್‌ನಲ್ಲಿ ಭಾಗವಹಿಸಿತು. ವಾಂಖೆಡೆ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಸ್ಮರಣೀಯ ವಿಜಯವನ್ನು ಅದ್ಧೂರಿಯಾಗಿ ಆಚರಿಸಿದರು. 

ಇದನ್ನೂ ಓದಿ: ವಿದಾಯದ ನಂತರವೂ ತಂಡದಲ್ಲಿ ಆಡುವ ಆಸೆ ಹೊರಹಾಕಿದ ದೇವಿಡ್‌ ವಾರ್ನರ್‌..?

ವಾಂಖೆಡೆಯಲ್ಲಿ ನಡೆದ ಸನ್ಮಾನದ ನಂತರ ಬಿಸಿಸಿಐ ಘೋಷಿಸಿದ್ದ ರೂ.125 ಕೋಟಿ ನಗದು ಬಹುಮಾನವನ್ನು ತಂಡದ ಸದಸ್ಯರಿಗೆ ನೀಡಲಾಯಿತು. ಇದೇ ವೇಳೆ.. ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ತಾಯಿ ಪೂರ್ಣಿಮಾ ಶರ್ಮಾ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಗನನ್ನು ಕಂಡು ತಾಯಿ ಭಾವುಕಳಾದಳು. ಆದರೆ, ಈ ವೇಳೆ ರೋಹಿತ್ ತಾಯಿಯೊಂದಿಗೆ ನಡೆದುಕೊಂಡ ರೀತಿ ಭಾರಿ ಟೀಕೆಗೆ ಗುರಿಯಾಗಿದೆ. ರೋಹಿತ್ ಶರ್ಮಾ ತನ್ನ ತಾಯಿಯ ಪ್ರೀತಿಯನ್ನು ಪರಿಗಣಿಸದೆ ಹೊರಡಲು ಪ್ರಯತ್ನಿಸಿದರಂತೆ. ಈ ಕ್ರಮದಲ್ಲಿ ಕೆಲವರು ರೋಹಿತ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಹೆಂಡತಿ ಮತ್ತು ಮಗಳೊಂದಿಗೆ ಇರುವಷ್ಟು ಸಂಪರ್ಕ ತಾಯಿಯೊಂದಿಗೆ ಇಲ್ಲವೇ?ಎಂದು  ನೆಟ್ಟಿಗರು ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ರೋಹಿತ್‌ ಅವರ ಈ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಿಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More